ಮಹಿಳೆಯರನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ: ಟಿ.ಆರ್. ಸೋಮಶೇಖರಯ್ಯ

KannadaprabhaNewsNetwork |  
Published : Mar 18, 2024, 01:47 AM IST
ತರೀಕೆರೆಯಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ | Kannada Prabha

ಸಾರಾಂಶ

ಇಂದಿನ ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳ ಮುಖ್ಯ ವಾಹಿನಿಯಲ್ಲಿ ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಹಾದಿಯಲ್ಲಿದ್ದಾರೆ. ಹೆಣ್ಣು ಮಕ್ಕಳನ್ನು ಪ್ರತಿಯೊಬ್ಬರು ಗೌರವಿಸುವುದು ಭಾರತೀಯ ಸಂಸ್ಕೃತಿ ಹಾಗೂ ನಮ್ಮ ಕರ್ತವ್ಯ ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಹೇಳಿದರು.

ತರೀಕೆರೆಯಲ್ಲಿ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಇಂದಿನ ಮಹಿಳೆಯರು ಸಮಾಜದ ವಿವಿಧ ಕ್ಷೇತ್ರಗಳ ಮುಖ್ಯ ವಾಹಿನಿಯಲ್ಲಿ ಪುರುಷರಿಗೆ ಸರಿ ಸಮಾನವಾಗಿ ಸಾಧನೆ ಹಾದಿಯಲ್ಲಿದ್ದಾರೆ. ಹೆಣ್ಣು ಮಕ್ಕಳನ್ನು ಪ್ರತಿಯೊಬ್ಬರು ಗೌರವಿಸುವುದು ಭಾರತೀಯ ಸಂಸ್ಕೃತಿ ಹಾಗೂ ನಮ್ಮ ಕರ್ತವ್ಯ ಎಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಹೇಳಿದರು.

ಪಟ್ಟಣದ ಶ್ರೀ ಪ್ರಹರ್ಷಿತ ಶಾಲೆಯಿಂದ ಶಾಲಾ ಆವರಣದಲ್ಲಿ ಏರ್ಪಡಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಪೋಷಕರ ಕ್ರೀಡಾಕೂಟ, ಅಮ್ಮ ಪ್ಲೇ ಸ್ಕೂಲ್ ವಾರ್ಷಿಕೋತ್ಸವ, ಕನ್ನಡದ ಕಣ್ಮಣಿ ಪುನೀತ್ ರಾಜಕುಮಾರ್ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಣ್ಣೊಂದು ಕಲಿತರೆ ಒಂದು ಶಾಲೆ ತೆರೆದಂತೆ ಹೆಣ್ಣು ಸಂಸಾರದ ಕಣ್ಣು, ಹೆಣ್ಣಿನ ಪಾತ್ರ ದೊಡ್ಡದು, ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅ ಕಾಲದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮಾದರಿ ಎಂದು ಹೇಳಿದರು. ಪುರಸಭೆ ಉಪಾಧ್ಯಕ್ಷೆ ಡಿ.ಎಸ್.ದಿವ್ಯಾರವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಶಾಲೆಯಲ್ಲಿ ಹಮ್ಮಿಕೊಂಡಿರುವುದು ಖುಷಿ ತಂದಿದೆ. ಹೆಣ್ಣು ಸಂಸಾರದ ಕಣ್ಣು, ಸಾಹಿತ್ಯ, ಶಿಕ್ಷಣ, ವಿಜ್ಞಾನ, ರಾಜಕೀಯ, ಕ್ರೀಡೆ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಸಾಧನೆಗಳು ಹಾಗೂ ಅಟೋ ಡ್ರೈವರ್ ನಿಂದ ಪೈಲಟ್ ನವರೆಗೆ ಮಹಿಳೆಯರು ಸಾಧನೆ ಮಾಡಿದ್ದಾರೆಂದು ತಿಳಿಸಿದರು.

ಪುರಸಭೆ ಸದಸ್ಯೆ ಗಿರಿಜಾ ವರ್ಮ ಪ್ರಕಾಶ್ ಮಾತನಾಡಿ ಮಹಿಳೆಯರ ಸಬಲೀಕರಣದಿಂದ ಮಾತ್ರ ಉತ್ತಮ ಸಮಾಜ ಸದೃಢವಾಗಲು ಸಾಧ್ಯ. ರಾಯಚೂರು ಜಿಲ್ಲೆಯ ಸಣ್ಣ ಗ್ರಾಮದಲ್ಲಿ ಜನಿಸಿದ ಅನು ಎನ್ನುವ ಮಹಿಳೆ ತಮ್ಮ ಸ್ವಂತ ಖರ್ಚಿ ನಿಂದ 22 ಜಿಲ್ಲೆಯ 113 ಶಾಲೆಗಳಿಗೆ ಬಣ್ಣ ಹಚ್ಚಿ,ಶಾಲೆ ಸ್ವಚ್ಛತೆ ಮಾಡಿ, ಗೋಡೆಗಳ ಮೇಲೆ ವಿದ್ಯಾರ್ಥಿಗಳ ಪಠ್ಯ ಪುಸ್ತಕಕ್ಕೆ ಸಂಬಂಧಿಸಿದ ಚಿತ್ರಗಳನ್ನು ಬಿಡಿಸಿರುವುದು ಶ್ಲಾಘನೀಯ. ಮಹಿಳೆಯರು ಸಮಾಜಕ್ಕೆ ಹೋರಾಡಿ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ.ರಮೇಶ್ ಮಾತನಾಡಿ ತಂದೆ ತಾಯಿಗಳು, ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಮಕ್ಕಳ ಭವಿಷ್ಯ ದ ಬಗ್ಗೆ ಎಚ್ಚರಿಕೆ ವಹಿಸಿ ಈ ದೇಶದ ಸತ್ಪ್ರಜೆ ಮಾಡುವುದು ಈ ಶಾಲೆ ಶಿಕ್ಷಕರು ಎಂದು ತಿಳಿಸಿದರು.

ಪುರಸಭೆ ಸದಸ್ಯೆ ರಿಹಾನ್ ಫರ್ವಿನ್, ಸಂಸ್ಥೆಯ ಕಾಯ೯ದಶಿ೯ ಲೀಲಾ ಸೋಮಶೇಖರಯ್ಯ ಶಾಲೆಯಲ್ಲಿ ಏರ್ಪಡಿಸಲಾದ ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬಕ್ಕೆ ಕೇಕ್ ಕಟ್ಟು ಮಾಡಿಸಿ ಹಂಚಲಾಯಿತು.

ಪೋಷಕರ ಪರವಾಗಿ ಹೇಮಾವತಿ, ಶ್ವೇತಾ, ದಿವ್ಯ ಅವರು ಮಾತನಾಡಿದರು. ಸಮಾರಂಭದಲ್ಲಿ ನಾಗರಾಜ್, ಸುಮ, ಆಡಳಿತಾಧಿಕಾರಿ ಅನೂಪ್, ಮುಖ್ಯ ಶಿಕ್ಷಕಿ ವಿದ್ಯಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.17ಕೆಟಿಆರ್.ಕೆ.3ಃ

ತರೀಕೆರೆಯಲ್ಲಿ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟನೆಯನ್ನು ಪುರಸಭೆ ಉಪಾಧ್ಯಕ್ಷೆ ದಿವ್ಯಾ ರವಿ ನೆರವೇರಿಸಿದರು. ಸಂಸ್ಥೆ ಅಧ್ಯಕ್ಷ ಟಿ.ಆರ್.ಸೋಮಶೇಖರಯ್ಯ, ಪುರಸಭೆ ಮಾಜಿ ಅಧ್ಯಕ್ಷ ಟಿ.ಕೆ.ರಮೇಶ್ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ