ನಿವೃತ್ತರ ಸಂಘಟನೆ ಜೀವನ ಭದ್ರತೆಗೆ ಪೂರಕ

KannadaprabhaNewsNetwork | Published : Jul 7, 2024 1:19 AM

ಸಾರಾಂಶ

ನಿವೃತ್ತರು ಸಮಾಜಮುಖಿ ಆರೋಗ್ಯಕರ ಚಟುವಟಿಕೆಗಳಿಗೆ ಮಾದರಿಯಾಗಿದ್ದು, ಸಾರ್ಥಕ ಕಾರ್ಯಕ್ರಮಗಳ ಆಯೋಜನೆಯಿಂದ ಗಮನ ಸೆಳೆದಿದ್ದಾರೆ ಎಂದು ಬೆಂಗಳೂರಿನ ಕನ್ನಡಿಗರ ಸ್ನೇಹ ಕೂಟದ ಸಂಸ್ಥಾಪಕ ಅಧ್ಯಕ್ಷ ರಾಂ.ಕೆ.ಹನುಮಂತಯ್ಯ ಹೇಳಿದರು. ದೊಡ್ಡಬಳ್ಳಾಪುರದಲ್ಲಿ ನಿವೃತ್ತರ ಮಾಸಿಕ ಸಭೆಯಲ್ಲಿ ಮಾತನಾಡಿದರು.

-ದೊಡ್ಡಬಳ್ಳಾಪುರದಲ್ಲಿ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಯಲ್ಲಿ ನಿವೃತ್ತರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ನಿವೃತ್ತರು ಸಮಾಜಮುಖಿ ಆರೋಗ್ಯಕರ ಚಟುವಟಿಕೆಗಳಿಗೆ ಮಾದರಿಯಾಗಿದ್ದು, ಸಾರ್ಥಕ ಕಾರ್ಯಕ್ರಮಗಳ ಆಯೋಜನೆಯಿಂದ ಗಮನ ಸೆಳೆದಿದ್ದಾರೆ ಎಂದು ಬೆಂಗಳೂರಿನ ಕನ್ನಡಿಗರ ಸ್ನೇಹ ಕೂಟದ ಸಂಸ್ಥಾಪಕ ಅಧ್ಯಕ್ಷ ರಾಂ.ಕೆ.ಹನುಮಂತಯ್ಯ ಹೇಳಿದರು.

ಇಲ್ಲಿನ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಮಾಸಿಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಮಹಾಲಿಂಗಯ್ಯ ಮಾತನಾಡಿ, ಅರವತ್ತು ವರ್ಷ ಮೇಲ್ಪಟ್ಟವರ ಜೀವನ ಶೈಲಿಯ ಕುರಿತ ಮಾಹಿತಿ ನೀಡಿದರು. ಸಂಘದ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಎಲ್ಲಾ ಇಲಾಖೆಗಳ ನಿವೃತ್ತ ನೌಕರರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದರು.

ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಟಿ.ಮುನಿರಾಜು ಮಾತನಾಡಿ, ಪ್ರತಿಯೊಬ್ಬ ನಿವೃತ್ತಿ ಹೊಂದಿದ ಸದಸ್ಯರು ಸಂಘದ ಸದಸ್ಯತ್ವ ಪಡೆದು ಕೈಗೊಳ್ಳುವಂತೆ ಸಲಹೆ ನೀಡಿದರು. ಪ್ರಸ್ತುತ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು ಎಲ್ಲರೂ ಜಾಗರೂಕರಾಗಿರುವಂತೆ ತಿಳಿಸಿದರು.

ಸನ್ಮಾನ:

ಇದೇ ವೇಳೆ ನಿವೃತ್ತ ಮುಖ್ಯಶಿಕ್ಷಕ ಕೆ.ವೀರೇಗೌಡ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಹನುಮಂತರಾಯಪ್ಪ, ನಿವೃತ್ತ ಶಿಕ್ಷಕರುಗಳಾದ ಸರ್ವಮಂಗಳಮ್ಮ, ಸಿ.ಬಸವರಾಜು, ಉಗ್ರೇಗೌಡ ಮತ್ತಿತರರನ್ನು ಹೆಣ್ಣೂರು ಕನ್ನಡಿಗರ ಸ್ನೇಹ ಕೂಟ ಪರವಾಗಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಟಿ.ನಂಜಪ್ಪ, ನಿವೃತ್ತ ಉಪನ್ಯಾಸಕ ಶಿವರಾಜು, ನಿವೃತ್ತ ಅಧ್ಯಾಪಕ ಜಿ.ಎಸ್ ಹೆಗಡೆ, ಸಂಘದ ಕಾರ್ಯದರ್ಶಿ ಕೆ.ಚನ್ನಪ್ಪ, ಕೋಶಾಧ್ಯಕ್ಷ ರಂಗಸ್ವಾಮಯ್ಯ ಮಾತನಾಡಿದರು. ಸಂಘದ ಗೌರವಾಧ್ಯಕ್ಷ ಅಬ್ದುಲ್ ಕರೀಂ, ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎನ್ ಪ್ರಭಾಕರ್, ಉಪಾಧ್ಯಕ್ಷ ಕರಿಬಸವದೇವರು ಸೇರಿದಂತೆ ಅನೇಕ ಪದಾಧಿಕಾರಿಗಳು ಉಪಸ್ಥಿತರಿದ್ದರು.

6ಕೆಡಿಬಿಪಿ3-

ದೊಡ್ಡಬಳ್ಳಾಪುರದಲ್ಲಿ ನಿವೃತ್ತ ನೌಕರರ ಸಂಘದಿಂದ ನಡೆದ ಕಾರ್ಯಕ್ರಮದಲ್ಲಿ ಹಿರಿಯ ನಿವೃತ್ತರನ್ನು ಅಭಿನಂದಿಸಲಾಯಿತು.

Share this article