ಇಂದಿನಿಂದ ರೇವಣ್ಣಸಿದ್ದೇಶ್ವರ ಸ್ವಾಮಿ ನೂತನ ದೇಗುಲ ಲೋಕಾರ್ಪಣೆ

KannadaprabhaNewsNetwork |  
Published : Feb 18, 2024, 01:30 AM IST
ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ ಗ್ರಾಮದ ಶ್ರೀ ರೇವಣ್ಣಸಿದ್ದೇಶ್ವರ ಸ್ವಾಮಿಯ ನೂತನ ದೇಗುಲ ಲೋಕಾರ್ಪಣೆ | Kannada Prabha

ಸಾರಾಂಶ

ಗುಬ್ಬಿ: ತಾಲೂಕಿನ ಎಂ.ಎನ್. ಕೋಟೆ ಗ್ರಾಮದ ರೇವಣ್ಣಸಿದ್ದೇಶ್ವರ ಸ್ವಾಮಿ ನೂತನ ದೇಗುಲ ಲೋಕಾರ್ಪಣೆ ಹಾಗೂ ಸ್ವಾಮಿ ಅವರ ಚರವಿಗ್ರಹ ಪ್ರತಿಷ್ಠಾಪನೆ, ಶಿಲಾಶಿಖರ ಕಳಶಾರೋಹಣ ಕಂಥಾಧಾರಣೆ ಮತ್ತು ಕುಂಭಾಭಿಷೇಕ ಮಹೋತ್ಸವ ಹಾಗೂ ಮೈಲಾರಲಿಂಗೇಶ್ವರಸ್ವಾಮಿ ಹಾಗೂ ಗಂಗಮಾಳಮ್ಮ ದೇವಿಯ ನೂತನ ದೇಗುಲ ಲೋಕಾರ್ಪಣೆ ಮಹೋತ್ಸವ ಫೆ. 18 ರಿಂದ ಫೆ. 22ರ ವರೆಗೆ ನಡೆಯಲಿದೆ.

ಗುಬ್ಬಿ: ತಾಲೂಕಿನ ಎಂ.ಎನ್. ಕೋಟೆ ಗ್ರಾಮದ ರೇವಣ್ಣಸಿದ್ದೇಶ್ವರ ಸ್ವಾಮಿ ನೂತನ ದೇಗುಲ ಲೋಕಾರ್ಪಣೆ ಹಾಗೂ ಸ್ವಾಮಿ ಅವರ ಚರವಿಗ್ರಹ ಪ್ರತಿಷ್ಠಾಪನೆ, ಶಿಲಾಶಿಖರ ಕಳಶಾರೋಹಣ ಕಂಥಾಧಾರಣೆ ಮತ್ತು ಕುಂಭಾಭಿಷೇಕ ಮಹೋತ್ಸವ ಹಾಗೂ ಮೈಲಾರಲಿಂಗೇಶ್ವರಸ್ವಾಮಿ ಹಾಗೂ ಗಂಗಮಾಳಮ್ಮ ದೇವಿಯ ನೂತನ ದೇಗುಲ ಲೋಕಾರ್ಪಣೆ ಮಹೋತ್ಸವ ಫೆ. 18 ರಿಂದ ಫೆ. 22ರ ವರೆಗೆ ನಡೆಯಲಿದೆ.

ಫೆ.18ರಂದು ಗುರು ರೇವಣಸಿದ್ದೇಶ್ವರ ಸ್ವಾಮಿ, ಗುರು ಸಿದ್ದರಾಮೇಶ್ವರಸ್ವಾಮಿ, ಯಳನಾಡು ಕರಿಯಮ್ಮ ದೇವಿ, ಬೀರಲಿಂಗೇಶ್ವರಸ್ವಾಮಿ, ಮೈಲಾರಲಿಂಗೇಶ್ವರಸ್ವಾಮಿ, ಕರಿಯಮ್ಮ ದೇವಿ, ಸಾಗಸಂದ್ರ ಕೆಂಪಮ್ಮದೇವಿ, ಕೋಟೆ ಗ್ರಾಮದೇವತೆ ಕೊಲ್ಲಾಪುರದಮ್ಮ ದೇವಿ, ರುದ್ರಮಲ್ಲೇಶ್ವರಸ್ವಾಮಿ, ಗದ್ದುಗೇಶ್ವರಸ್ವಾಮಿ, ಅರಿವೆಲಕ್ಕಮ್ಮ ದೇವಿ ಅವರು ಪುಣ್ಯಕ್ಷೇತ್ರ ತೀರ್ಥರಾಮೇಶ್ವರ ವಜ್ರ ಪುಣ್ಯ ಕ್ಷೇತ್ರಕೆ ಅಗಮಿಸಲಿದೆ.

ಫೆ. 19ರಂದು ಬೆಳಿಗ್ಗೆ 6ಗಂಟೆಗೆ ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯ ಕಳಶ ಸ್ಥಾಪನೆ, ಕಂಥಾಧಾರಣೆ ಪೂಜೆ, ಪಂಚಾಮೃತ ಅಭಿಷೇಕ, ಪಂಚಕಳಸ ಸ್ಥಾಪನೆ ನಡೆಯಲಿದೆ.

ಫೆ. 20ರಂದು ಸಂಜೆ 5ಗಂಟೆಗೆ ಮಹಾಗಣಪತಿ ಪೂಜೆ, ಗಂಗಾ ಯಮೂನಪೂಜಾ, ಯಾಗಾಶಾಲಾ ಪ್ರವೇಶ ಹಾಗೂ ಹೊಮ ನಡೆಯಲಿದೆ. ಫೆ. 21ರಂದು ಸಂಜೆ ವಿವಿಧ ಪೂಜಾ ಕಾರ್ಯಗಳು ಹೋಮ ಹವನಗಳು ನಡೆಯಲಿದೆ. ಫೆ. 22ರಂದು ಬೆಳಿಗ್ಗೆ 6ಗಂಟೆಗೆ ಸ್ವಾಮಿಯ ನೂತನ ಗೋಪುರ ಕಳಶ ಸ್ಥಾಪನೆ ಮತ್ತು ಪುಷ್ಪರ್ಚಾನೆ ಬೆಳಿಗ್ಗೆ ಮಹಾರುದ್ರ ಹೋಮ, ಪ್ರತಿಷ್ಠಾಂಗ ಹೋಮ, ಗೋಪೂಜೆ ದೇವತ ದರ್ಶನ ನಡೆಯಲಿದೆ.

ಮಧ್ಯಾಹ್ನ ಧಾರ್ಮಿಕ ಸಮಾರಂಭದ ದಿವ್ಯ ಸಾನಿದ್ಯವನ್ನ ಹೊಸದುರ್ಗ ತಾಲೂಕಿನ ಕನಕ ಪೀಠ ಮಠದ ಕಾಗಿನೆಲೆ ಈಶ್ವರಾನಂದಪುರಿ ಮಹಾಸ್ವಾಮಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಿಎಂ ಸಿದ್ದರಾಮಯ್ಯ, ಶಾಸಕರಾದ ಎಸ್.ಆರ್‌. ಶ್ರೀನಿವಾಸ್, ಭೈರತಿ ಸುರೇಶ್, ಸುರೇಶ್ ಬಾಬು, ಮಾಜಿ ಶಾಸಕ ರೇವಣ್ಣ ಭಾಗವಹಿಸಲಿದ್ದಾರೆ ಎಂದು ದೇವಾಲಯ ಸಮಿತಿ ತಿಳಿಸಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ