ಕನ್ನಡಪ್ರಭ ವಾರ್ತೆ ಮೈಸೂರು
ಒಕ್ಕಲಿಗ ಯುವ ಬ್ರಿಗೇಡ್ ವತಿಯಿಂದ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಸ್ಮರಣೆ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಜಯಂತ್ಯುತ್ಸವವನ್ನು ಮಾನಸಗಂಗೋತ್ರಿ ಸೆನೆಟ್ ಭವನದಲ್ಲಿ ಶನಿವಾರ ಆಯೋಜಿಸಲಾಗಿತ್ತು.ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಶ್ರೀ ಸೋಮನಾಥೇಶ್ವರನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಮಾಜಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ಥ್ ನಾರಾಯಣ ಸಮಾರಂಭವನ್ನು ಉದ್ಘಾಟಿಸಿದರು.ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಿಬ್ಬಂದಿ ನೇಮಕಾತಿ ಆಯೋಗದ ದಕ್ಷಿಣ ಪ್ರಾಂತ್ಯ ಪ್ರಾದೇಶಿಕ ನಿರ್ದೇಶಕ ಕೆ.ನಾಗರಾಜ್, ಆಂತರಿಕ ಭದ್ರತಾ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಡಾ.ಎ.ಎನ್.ಪ್ರಕಾಶ್ ಗೌಡ, ಚಂದ್ರಶೇಖರ್, ಎಂ.ಆರ್. ಸತ್ಯನಾರಾಯಣ್, ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್ ಆರ್ ಐ ಒಕ್ಕಲಿಗ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ ನಂಜೇಗೌಡ ನಂಜುಂಡ ಮತ್ತಿತರರು ಉಪಸ್ಥಿತರಿದ್ದರು.ಮಧ್ಯಪ್ರದೇಶ ಕೆಡರ್ ಐಎಎಸ್ ಅಧಿಕಾರಿ ಡಾ.ನಾಗಾರ್ಜುನ ಬಿ.ಗೌಡ, ಐಆರ್ ಎಸ್ ಅಧಿಕಾರಿ ಪಿ.ವಿ.ಭೈರಪ್ಪ, ಎಎಫ್ ಹೆಚ್ ಕ್ಯೂ ಎನ್.ಭವ್ಯಶ್ರೀ,ಐಪಿಎಸ್ ಅಧಿಕಾರಿ ವರುಣ್ ಕೆ. ಗೌಡ ಅವರನ್ನು ಅಭಿನಂದಿಸಲಾಯಿತು. ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದ ಗೌಡ ಹಾಗೂ ತಾರಿಣಿ ಚಿದಾನಂದ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.ನಾಗಾರ್ಜುನ ಗೌಡ ಮಾತನಾಡಿದರು. ಅವಾಂತ್ ಬಿಕೆಜಿ ಆಸ್ಪತ್ರೆ ವತಿಯಿಂದ 50 ಜನರಿಗೆ ಉಚಿತ ಮೊಣಕಾಲು ಶಸ್ತ್ರ ಚಿಕಿತ್ಸೆ ಪೋಸ್ಟರ್ ಬಿಡುಗಡೆ ಮಾಡಲಾಯಿತು.---
ಬಾಕ್ಸ್...ಒಕ್ಕಲಿಗ ಜನಾಂಗದ ಒಗ್ಗೂಡುವಿಕೆ ಶಕ್ತಿ ಆದಿಶ್ರೀ- ಅಶ್ವತ್ಥನಾರಾಯಣ-------ಒಕ್ಕಲಿಗ ಜನಾಂಗದ ಒಗ್ಗೂಡುವಿಕೆಯ ಶಕ್ತಿ ಆದಿಚುಂಚನಗಿರಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಎಂದು ಮಾಜಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದರು.ಒಕ್ಕಲಿಗ ಯುವ ಬ್ರಿಗೇಡ್ ಹಲವು ಕಾರ್ಯಕ್ರಮಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಒತ್ತಾಸೆಯಾಗಿದೆ.ಪೂಜ್ಯ ಗುರುಗಳ ಸೇವೆಯನ್ನು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ. ಚದುರಿ ಹೋಗಿದ್ದ ಸಮುದಾಯವನ್ನು ಸಂಘಟಿಸಿದರು. ಎರಡು ಸಾವಿರ ವರ್ಷಕ್ಕೂ ಹೆಚ್ಚು ಇತಿಹಾಸ ಉಳ್ಳ ಮಠ. ಆರ್ಥಿಕ, ಸಾಮಾಜಿಕವಾಗಿ ವಿಂಗಡನೆಯಾಗಿದ್ದವರಿಗೆ ಶಕ್ತಿ ತುಂಬಿ, ಬೆಳಕಿಗೆ ತಂದು ಜಗತ್ತಿನಲ್ಲಿ ಒಂದು ಶಕ್ತಿಯಾಗಲು ಮೂಲ ಕಾರಣ ಬಾಲಗಂಗಾಧರನಾಥ ಸ್ವಾಮೀಜಿ ಎಂದರು.ಜನಾಂಗಕ್ಕೆ ಶಕ್ತಿ ತುಂಬಿ ಉತ್ತೇಜನ ನೀಡಿ, ಉತ್ತಮ ಭವಿಷ್ಯಕ್ಕೆ ಕಾರಣರಾದ ಬಾಲಗಂಗಾಧರ ನಾಥ ಸ್ವಾಮೀಜಿ. ಅವರಿಲ್ಲದಿದ್ದರೆ ಒಂದು ಫೋರ್ಸ್ ಆಗಲು ಸಾಧ್ಯವಾಗುತ್ತಿರಲಿಲ್ಲ. ಆದರೂ ಜನಸಂಖ್ಯೆಗೆ ಹೋಲಿಸಿದರೆ ನಮ್ಮ ಆರ್ಥಿಕ ಅಭಿವೃದ್ಧಿ ಇನ್ನೂ ಬಹಳಷ್ಟು ಆಗಬೇಕಿದೆ. ಈ ನಿಟ್ಟಿನಲ್ಲಿ ವೇಗವಾಗಿ ಮುನ್ನಡೆಯಬೇಕು. ಸಂಘಟನೆಗೆ ಕೈ ಜೋಡಿಸಬೇಕು. ನಾವಿದ್ದಲ್ಲೇ ಆಗಲ್ಲ ಎಲ್ಲರೂ ಒಟ್ಟಿಗೆ ಸೇರಿದಾಗ ಮಾತ್ರ ಶಕ್ತಿಯಾಗಲು ಸಾಧ್ಯ ಎಂದರು. ಅರಿವೇ ಗುರು ಎಂಬ ತಿಳುವಳಿಗೆ ಬಂದಿದೆ. ಉನ್ನತ ಸ್ಥಾನದಲ್ಲಿರುವವರು ಪ್ರೇರೇಪಣೆ ನೀಡುತ್ತಿದ್ದಾರೆ. ನಮ್ಮ ಶಿಕ್ಷಣ ಅವಧಿಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಬೇಕು. ಪದವಿ ನಂತರ ಉದ್ಯೋಗದ ಅವಶ್ಯಕತೆ, ಕೌಟುಂಬಿಕ ಒತ್ತಡ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸಾಧನೆ ಮಾಡಬೇಕು ಎಂದು ಅವರು ಕರೆ ನೀಡಿದರು.ಇನ್ನೊಬ್ಬರ ಸಾಧನೆಗಳನ್ನು ಒಪ್ಪಬೇಕು, ಪ್ರಶಂಸಿಸಬೇಕು. ಸಾಧನೆ ಆದಾಕ್ಷಣ ಅಹಂಕಾರ ಬರಬಾರದು.ಕುವೆಂಪು ಶೈಕ್ಷಣಿಕ ಹಾಗೂ ಸಾಹಿತಿಕವಾಗಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಸಾಂಸ್ಕೃತಿಕವಾಗಿ ಸಮುದಾಯ ಗಟ್ಟಿಯಾಗಬೇಕು. ತಿಳಿವಳಿಕೆ, ಮನವರಿಕೆ ಕುವೆಂಪು ಅವರಿಂದ ಆಗಿದೆ. ಇವರಿಬ್ಬರೂ ಜನಾಂಗದ ಎರಡು ಕಣ್ಣುಗಳು.ಇಂದಿಗೂ ಕಾಲ ಮಿಂಚಿಲ್ಲ. ಕುವೆಂಪು ಅವರ ಸಾಹಿತ್ಯ ಕೊಡುಗೆಗೆ ನೊಬೆಲ್ ಪುರಸ್ಕಾರ ಸಿಗಬೇಕು. ಈ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಮುಂದುವರೆಸೋಣ. ಸ್ವಾಮೀಜಿ ಮಾರ್ಗದರ್ಶನದಲ್ಲೇ ಕೆಲಸ ಮಾಡೋಣ ಎಂದರು.----------ಮತ್ತೊಂದು ಬಾಕ್ಸ್---ಮೈಸೂರು ವಿವಿ ಅಭಿವೃದ್ಧಿಗೆ ಕುವೆಂಪು ಕಾರಣ- ಯದುವೀರ್---ರಾಜ್ಯಕ್ಕೆ ಕನ್ನಡಿಗರ ಪರಂಪರೆ, ಧರ್ಮದ ರಕ್ಷಣೆ, ಶೈಕ್ಷಣಿಕ ಸಂಸ್ಥೆ ನಿರ್ಮಾಣ ಮಾಡಿ ಗುಣಮಟ್ಟದ ಶಿಕ್ಷಣ ಸೇವೆ, ಆರೋಗ್ಯ ಸೇವೆಯೂ ಸ್ಮರಣೀಯ. ಹೀಗಾಗಿ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ರಾಜ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ರಾಷ್ಟ್ರಕವಿ ಕುವೆಂಪು ಅವರ ನೆನಪಿನಲ್ಲಿ ಮಾನಸಗಂಗೋತ್ರಿಯಲ್ಲಿ ಕಾರ್ಯಕ್ರಮ ಸೂಕ್ತ. ಅವರು ವಿವಿಯ ಕುಲಪತಿಯಾಗಿದ್ದಾಗ ಮಾನಸಗಂಗೋತ್ರಿಯನ್ನು ವಿವಿಗೆ ದಾನ ನೀಡಲಾಯಿತು. ಕುವೆಂಪು ಅವರೇ ಸ್ವೀಕರಿಸಿ, ಅಭಿವೃದ್ಧಿ ಪಡಿಸಿದರು. ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಸೇವೆ ಸ್ಮರಣೀಯ ಎಂದರು. ಮೈಸೂರಿನಲ್ಲಿ ಆ ಪೀಳಿಗೆಯಲ್ಲಿ ಎಷ್ಟೊಂದು ಮಹನೀಯರು ಇದ್ದರು. ಶ್ರೀರಾಮಾಯಣ ದರ್ಶನಂಗೆ ಜ್ಞಾನಪೀಠ ಸಿಕ್ಕಿದೆ. ಜೈ ಭಾರತ ಜನನಿಯ ತನುಜಾತೆ ಭಾರತಾಂಭೆಯ ಗರ್ಭದಲ್ಲಿ ಹುಟ್ಟಿರುವುದು ಕರ್ನಾಟಕ. ಕುವೆಂಪು ಅವರ ತತ್ವದೊಂದಿಗೆ ನಾವೆಲ್ಲಾ ಭಾರತೀಯರಾಗಿ ಮುನ್ನಡೆಯೋಣ. ಎಲ್ಲಾ ಕನ್ನಡಿಗರೂ ಭಾರತೀಯರು. ಯಾವುದೇ ಒಂದು ಸಂಘಟನೆ ಸರಿಯಾದ ಮಾರ್ಗದಲ್ಲಿ ನಡೆದುಕೊಂಡು ಹೋಗಬೇಕು. ಮಹನೀಯರ ಸ್ಮರಣೆಯೊಂದಿಗೆ ಸರಿಯಾದ ಮಾರ್ಗದಲ್ಲಿ ನಡೆದರೆ ಯುವಶಕ್ತಿ ದೇಶಕ್ಕೆ ಲಾಭವಾಗುತ್ತದೆ ಎಂದು ಅವರು ಹೇಳಿದರು.ಇತಿಹಾಸದಲ್ಲಿ ಈ ಭಾಗದ ದೇವಾಲಯಗಳು ಗಂಗ ನಾಯರ ಮೂಲದಲ್ಲೇ ಸೃಷ್ಟಿಯಾಗಿರುವುದು. ಮೂಲ ಗಂಗ ನಾಯಕರು. ಅವರು ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಎಲ್ಲಾ ಧರ್ಮಕ್ಕೆ ಪ್ರೋತ್ಸಾಹ ನೀಡಿದರು. ಸುಮಾರು ನಾಲ್ಕು ನೂರು ವರ್ಷ ಆಳಿದವರು. ಮೈಸೂರು ಅವರು ಆಳಿದ ಭಾಗವೇ. ಇಮ್ಮಡಿ ಕೆಂಪೇಗೌಡರು ಅಭಿವೃದ್ದೀ ಮಾಡಿದ ಕೋಟೆಯಲ್ಲೇ ಶಿವಾಜಿ ಹುಟ್ಟಿರುವುದು ಇತಿಹಾಸದಲ್ಲಿ ದಾಖಲಾಗಿದೆ. ಕನ್ನಡಿಗರು ಹೆಮ್ಮೆ ಪಡುವ ಇತಿಹಾಸ. ಭಾರತದ ಸಂಸ್ಕೃತಿ ರಕ್ಷಣೆ, ಅಭಿವೃದ್ಧಿಗೆ ಶ್ರಮಿಸೋಣ ಎಂದರು.