ರಸ್ತೆಗಳ ದುರಸ್ತಿ: ಕಾಂಗ್ರೆಸ್‌ ಹೇಳಿಕೆ ಹಾಸ್ಯಾಸ್ಪದ

KannadaprabhaNewsNetwork |  
Published : Sep 14, 2025, 01:04 AM IST
೧೪ಕೆಎಲ್‌ಆರ್-೭ಕೋಲಾರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸೇವಾ ಪಾಕ್ಷಿಕ ಕಾರ್ಯಾಗಾರದಲ್ಲಿ ಕೋಲಾರ ತಾಲೂಕು ವೇಮಗಲ್ ಮತ್ತು ಕುರಗಲ್ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಜಯಶೀಲರಾದ ನಮ್ಮ ಸದಸ್ಯರಿಗೆ ಸನ್ಮಾನಿಸಿದರು. | Kannada Prabha

ಸಾರಾಂಶ

ಅಮೆರಿಕಾದ ಅಧ್ಯಕ್ಷ ಟ್ರಂಪ್ ಭಾರತದಲ್ಲಿ ಆರ್ಥಿಕ ಕುಸಿತವಾಗುತ್ತದೆ ಎಂದು ಹೇಳಿದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅದನ್ನೇ ನಂಬಿಕೊಂಡು ದೇಶವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಟ್ರಂಪ್ ಹೇಳಿದಂತೆ ಕುಸಿತವಾಗದೆ, ಇಂದು ಭಾರತದ ಆರ್ಥಿಕತೆ ಶೇ.೭.೨ ಏರಿಕೆ ಕಂಡಿದೆ.

ಕನ್ನಡಪ್ರಭ ವಾರ್ತೆ ಕೋಲಾರಬೆಂಗಳೂರಿನ ರಸ್ತೆಗಳಲ್ಲಿ ನಿರ್ಮಾಣವಾಗಿರು ಗುಂಡಿಗಳಲ್ಲಿ ಜನರು ಬಿದ್ದು ಸಾಯುತ್ತಿದ್ದಾರೆ, ಅದನ್ನು ಸರಿಪಡಿಸಲು ಆಗದವರು ದೇಶದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತೇವೆ ಎಂದು ಹೇಳುವುದು ಹಾಸ್ಯಾಸ್ಪದ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಕೇಶವಪ್ರಸಾದ್ ಲೇವಡಿ ಮಾಡಿದರು.

ನಗರದ ಹೊರವಲಯದ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಕಾರ್ಯಕರ್ತರ ಸೇವಾ ಪಾಕ್ಷಿಕ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ದೇಶದಲ್ಲಿ ರಸ್ತೆಗಳ ಅಭಿವೃದ್ಧಿ ಮಾಡಿದ್ದೇವೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಆದರೆ ಬೆಂಗಳೂರಿನ ಸ್ಥಿತಿ ನೋಡಿ ಜನರೇ ಗಮನಿಸಲಿ ಎಂದರು.ದೇಶದ ಅರ್ಥ ವ್ಯವಸ್ಥೆ ಏರಿಕೆ

ಅಮೆರಿಕಾದ ಅಧ್ಯಕ್ಷ ಟ್ರಂಪ್ ಭಾರತದಲ್ಲಿ ಆರ್ಥಿಕ ಕುಸಿತವಾಗುತ್ತದೆ ಎಂದು ಹೇಳಿದ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅದನ್ನೇ ನಂಬಿಕೊಂಡು ದೇಶವನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಟ್ರಂಪ್ ಹೇಳಿದಂತೆ ಕುಸಿತವಾಗದೆ, ಇಂದು ಭಾರತದ ಆರ್ಥಿಕತೆ ಶೇ.೭.೨ ಏರಿಕೆ ಕಂಡಿದೆ ಇದು ಮೋದಿ ನೇತೃತ್ವದ ಸರಕಾರದ ಸಾಧನೆ ಎಂದು ವಿವರಿಸಿದರು. ಮೋದಿ ಸರ್ಕಾರದ ಸಾಧನೆಗಳ ಬಗ್ಗೆ ಕಾಂಗ್ರೆಸ್ ಪ್ರಶ್ನಿಸಬಹುದು, ಆದರೆ ಅವಾಚ್ಯ ಶಬ್ದ ಬಳಸಬಾರದು. ಗೌರವದಿಂದ, ಸ್ವಚ್ಛ ಸಂಸ್ಕೃತಿಯ ಭಾಷೆಯಲ್ಲಿ ಪ್ರಶ್ನೆ ಮಾಡಲಿ. ಮುಂದಿನ ನಗರಸಭೆ, ಪುರಸಭೆ, ಗ್ರಾಪಂ ಚುನಾವಣೆಗಳಿಗೆ ಕಾರ್ಯಕರ್ತರು ಸಜ್ಜಾಗಬೇಕು, ಮತದಾರರಿಗೆ ಮೋದಿ ಸರ್ಕಾರದ ಸಾಧನೆಗಳನ್ನು ತಲುಪಿಸಬೇಕು ಎಂದು ಸೂಚಿಸಿದರು.

ಗಾಂಧಿ- ಶಾಸ್ತ್ರಿ ಜಯಂತಿ

ಕಾರ್ಯಕರ್ತರು ಐಷಾರಾಮಿ ಕಾರುಗಳನ್ನು ತ್ಯಜಿಸಿ, ಅಗತ್ಯವಿದ್ದರೆ ಮಾತ್ರ ವಾಹನ ಖರೀದಿಸಿ, ದೈಹಿಕವಾಗಿ ಫಿಟ್ ಆಗಿ, ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು, “ಗಾಂಧಿ ಜಯಂತಿಯಂದೇ ಶಾಸ್ತ್ರೀ ಜಯಂತಿ ಬರುತ್ತದೆ ಇನ್ನು ಮುಂದೆ ಗಾಂಧಿ ಮತ್ತು ಶಾಸ್ತ್ರೀ ಜಯಂತಿ ಜಂಟಿಯಾಗಿ ಆಚರಿಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದರು.ಮಾಜಿ ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಅಲ್ಪಸಂಖ್ಯಾತರ ವಿರುದ್ಧ ಭೇದಭಾವ ಮಾಡದಿದ್ದರೂ ಮುಸ್ಲಿಂ ಸಮುದಾಯವು ಬಿಜೆಪಿಯನ್ನು ವಿರೋಧಿ ಪಕ್ಷವೆಂದು ಪರಿಗಣಿಸಿದೆ. ಕೊರೊನಾ ಲಸಿಕೆ, ಉಜ್ವಲ ಗ್ಯಾಸ್, ಜನ್‌ಧನ್ ಖಾತೆ, ರಸ್ತೆ ಅಭಿವೃದ್ಧಿ, ಅಂಗನವಾಡಿ ಪೋಷಣಾ ಆಹಾರ ಎಲ್ಲ ಸರ್ಕಾರಿ ಯೋಜನೆಗಳನ್ನು ಸಮಾನವಾಗಿ ನೀಡಿದ್ದೇವೆ. ಆದರೆ ಮುಸ್ಲಿಂ ಸಮುದಾಯ ಮಾತ್ರ ನಾವು ಬೇರೆ, ಅವರು ಬೇರೆ ಎಂದು ಪರಿಗಣಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಅಪರಾಧಿಗಳಿಗೆ ಉತ್ತೇಜನ

ಕೆ.ಜೆ.ಹಳ್ಳಿ-ಡಿ.ಜೆ.ಹಳ್ಳಿಯ ಗಲಭೆ, ಹುಬ್ಬಳ್ಳಿ, ಮೈಸೂರು ಪ್ರದೇಶಗಳಲ್ಲಿ ಪೊಲೀಸರ ಮೇಲೆ ನಡೆದ ದಾಳಿಗಳಿಗೆ ಸಂಬಂಧಿಸಿದ ಕೇಸುಗಳನ್ನು ಕಾಂಗ್ರೆಸ್ ಸರ್ಕಾರವೇ ವಾಪಸ್ ತೆಗೆದುಕೊಂಡಿದೆ, ಬಂಗಾರಪೇಟೆಯಲ್ಲಿ ಪ್ಯಾಲಿಸ್ತೀನ್ ಬಾವುಟ ಹಾರಿಸಿದವರ ವಿರುದ್ಧ ಪ್ರಕರಣ ದಾಖಲಿಸದೆ, ಕೇವಲ ನಿಯಮ ೧೦೭ರಂತೆ ತಹಸೀಲ್ದಾರರ ಮುಂದೆ ಹಾಜರುಪಡಿಸಿ ಮನೆಗೆ ಕಳುಹಿಸಲಾಗಿದೆ ಇದು ಅಪರಾಧಿಗಳಿಗೆ ಉತ್ತೇಜನ ನೀಡುವ ಕೆಲಸ ಎಂದು ಟೀಕಿಸಿದರು.

ಮೋದಿ ಅವರ ತಾಯಿ ಬಗ್ಗೆ ರಾಹುಲ್ ಗಾಂಧಿ ಅಸಂಸ್ಕೃತವಾಗಿ ಮಾತನಾಡಿರುವುದೇ ಕಾಂಗ್ರೆಸ್ ಸಂಸ್ಕೃತಿ, ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ್‌ರ ಮಗ ಅನಕ್ಷರಸ್ಥನಾದರೂ ಮೋದಿರವರ ತಾಯಿ ಬಗ್ಗೆ ಮಾತನಾಡುತ್ತಾರೆ, ವಿಧಾನಸೌಧದಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಮಾಡಿದವರ ವಿರುದ್ಧವೂ ಕೇಸು ವಾಪಸ್ ಪಡೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಆರ್.ವರ್ತೂರು ಪ್ರಕಾಶ್, ವೈ.ಸಂಪಂಗಿ, ಮಾಜಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್, ಜಿಪಂ ಮಾಜಿ ಸದಸ್ಯ ಬಿ.ವಿ.ಮಹೇಶ್ ಹಾಗೂ ಪಕ್ಷದ ಮುಖಂಡರು ಹಾಜರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ