ರೋಟರಿಯಿಂದ ಕರುಳುಬಳ್ಳಿ ಕ್ಯಾನ್ಸರ್ ತಡೆಗಟ್ಟುವ ಚುಚ್ಚುಮದ್ದು

KannadaprabhaNewsNetwork |  
Published : Oct 03, 2025, 01:07 AM IST
2ಎಚ್ಎಸ್ಎನ್9 : ರೋಟರಿ ಸಂಸ್ಥೆ ಗೌರ್‍ನರ್ ಪಾಲಕ್ಷ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಹೆಣ್ಣು ಮಕ್ಕಳನ್ನು ಕಾಡುವ ಕರುಳುಬಳ್ಳಿ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಚುಚ್ಚುಮದ್ದು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಮೂರ್‍ನಾಲ್ಕು ಜಿಲ್ಲೆಗಳಲ್ಲಿ ಈಗಾಗಲೇ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಜಿಲ್ಲೆಯಲ್ಲಿ ಚುಚ್ಚುಮದ್ದು ಅರಿವು ಕಾರ್ಯಕ್ರಮವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಚಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದ ಬಗ್ಗೆ ಪ್ರಧಾನಮಂತ್ರಿಗಳ ಗಮನ ಸೆಳೆಯುವ ಕೆಲಸವನ್ನು ರೋಟರಿ ಸಂಸ್ಥೆ ನಡೆಸುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಸಕಲೇಶಪುರ

ರೋಟರಿ ಸಂಸ್ಥೆ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿದೆ ಎಂದು ರೋಟರಿ ಗೌರ್‍ನರ್ ಪಾಲಾಕ್ಷ ಹೇಳಿದರು.

ರೋಟರಿ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಕಲೇಶಪುರ ತಾಲೂಕಿನಲ್ಲಿ ರೋಟರಿ ಸಂಸ್ಥೆಯಿಂದ ರಚನಾತ್ಮಕ ಸಾಮಾಜಿಕ ಚಟುವಟಿಕೆ ನಡೆಸುತ್ತಿದ್ದು, ಪ್ರಸಕ್ತ ವರ್ಷ ಹೆಣ್ಣು ಮಕ್ಕಳನ್ನು ಕಾಡುವ ಕರುಳುಬಳ್ಳಿ ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಚುಚ್ಚುಮದ್ದು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ರಾಜ್ಯದ ಮೂರ್‍ನಾಲ್ಕು ಜಿಲ್ಲೆಗಳಲ್ಲಿ ಈಗಾಗಲೇ ಚುಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಈಗಾಗಲೇ ಚಾಲನೆ ದೊರೆತಿದೆ. ಜಿಲ್ಲೆಯಲ್ಲಿ ಚುಚ್ಚುಮದ್ದು ಅರಿವು ಕಾರ್ಯಕ್ರಮವನ್ನು ಈಗಾಗಲೇ ಹಮ್ಮಿಕೊಳ್ಳಲಾಗಿದ್ದು ಮುಂದಿನ ದಿನಗಳಲ್ಲಿ ಚಚ್ಚುಮದ್ದು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮದ ಬಗ್ಗೆ ಪ್ರಧಾನಮಂತ್ರಿಗಳ ಗಮನ ಸೆಳೆಯುವ ಕೆಲಸವನ್ನು ರೋಟರಿ ಸಂಸ್ಥೆ ನಡೆಸುತ್ತಿದೆ ಎಂದರು.

ಇದಲ್ಲದೆ ತಾಲೂಕಿನಲ್ಲಿ ೧೦ ಸಾವಿರ ಗಿಡಗಳನ್ನು ನಾಟಿ ಮಾಡಿ ಮರಗಳನ್ನಾಗಿ ಮಾಡುವ ಗುರಿ ಹೊಂದಲಾಗಿದೆ. ಪ್ರತಿಯೊರ್ವ ರೋಟರಿಯನ್‌ಗಳಿಗೆ ತಲಾ ಮೂರು ಗಿಡಗಳನ್ನು ನೆಟ್ಟು ಮರ ಮಾಡುವ ಹೊಣೆ ನೀಡಲಾಗಿದೆ. ಪ್ರತಿಯೊಂದು ಗಿಡಗಳು ಹಣ್ಣಿನ ಗಿಡಗಳಾಗಿರುವುದು ಇದರ ವಿಶೇಷವಾಗಿದೆ ಎಂದರು.

ತಾಲೂಕಿನಲ್ಲಿ ಅಂಗವಿಕಲರಿಗಾಗಿ ತಾಲೂಕಿನ ಕೌಡಳ್ಳಿ ಗ್ರಾಮದಲ್ಲಿ ಶಾಲೆಯನ್ನು ನಡೆಸಲಾಗುತ್ತಿದ್ದರೆ ಪಟ್ಟಣದ ರೋಟರಿ ಸಂಸ್ಥೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಬ್ಯಾಸ ನಡೆಸುತ್ತಿದ್ದು ರೋಟರಿ ಸಂಸ್ಥೆ ತಾಲೂಕಿನ ಮುಕಟಮಣಿಯಾಗಿ ಗುರುತಿಸಿಕೊಂಡಿದೆ ಎಂದರು.ಪಟ್ಟಣದ ಹಲವು ಬಡಾವಣೆಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ, ಅಪಘಾತ ಪ್ರದೇಶಗಳಲ್ಲಿ ಕನ್ನಡಿಗಳ ಆಳವಡಿಕೆ, ಬಸ್ ತಂಗುದಾಣಗಳ ನಿರ್ಮಾಣ ಹಾಗೂ ಆರೋಗ್ಯ ಶಿಭಿರದಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಮಾಜಿಕ ಶ್ರೇಯೋಬಿವೃದ್ದಿಗಾಗಿ ತನ್ನದೆ ಕೂಡುಗೆ ನೀಡುತ್ತಿದೆ ಎಂದರು.

ಸಹಾಯಕ ಗೌರ್‍ನರ್ ಸಿ.ಎಸ್ ಮಹೇಶ್ ಮಾತನಾಡಿ, ರೋಟರಿ ಸಂಸ್ಥೆ ಸರ್ಕಾರದಿಂದ ಮಾಡಲಾಗದ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿದ್ದು ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ನಿರ್ಮೂಲನೆಗಾಗಿ ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಕ್ಯಾನಹಳ್ಳಿ ಚಂದ್ರಶೇಖರ್‌, ರವಿಕುಮಾರ್‌, ವಿಜೇತ್ ಮುಂತಾದವರಿದ್ದರು.

.

PREV

Recommended Stories

ಸರ್ಕಾರಿ ನೌಕರರ ಸೊಸೈಟಿಗೆ 50.58 ಲಕ್ಷ ಲಾಭ
ಡಿಸಿಸಿ ಬ್ಯಾಂಕ್‌ಗೆ ಅಣ್ಣಾಸಾಹೇಬ್ ಜೊಲ್ಲೆ ಆಯ್ಕೆ ನಿಶ್ಚಿತ