- ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ರೋಟರಿ ಕ್ಲಬ್‌ನ ಪದಗ್ರಹಣ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮನುಕುಲದ ಸೇವೆಯೇ ರೋಟರಿ ಉದ್ದೇಶವೆಂದು ರೋಟರಿ ಜಿಲ್ಲಾ 3182 ಮಾಜಿ ರಾಜ್ಯಪಾಲ ಶಿವಮೊಗ್ಗದ ಉದ್ಯಮಿ ಎಚ್.ಎಲ್. ರವಿ ಹೇಳಿದರು.
ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಚಿಕ್ಕಮಗಳೂರು ರೋಟರಿ ಕ್ಲಬ್‌ನ ಪ್ರಸಕ್ತ ಸಾಲಿನ ಎಂ.ಎಲ್. ಸುಜಿತ್ ನೇತೃತ್ವದ ನೂತನ ತಂಡಕ್ಕೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು. ಶತಮಾನಗಳನ್ನು ಪೂರ್ಣಗೊಳಿಸಿರುವ ಅಂತಾರಾಷ್ಟ್ರೀಯ ರೋಟರಿ ಸಂಸ್ಥೆ ಸೇವೆ ಮಾಡುವಲ್ಲಿ ಮಾದರಿಯಾಗಿದೆ. ಸಮುದಾಯ ಸೇವೆ ಗಮನಿಸಿದರೆ ಒಂದು ರೀತಿಯ ಚಮತ್ಕಾರವನ್ನೆ ಗುರುತಿಸ ಬಹುದು. ಅದಕ್ಕಾಗಿಯೆ ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರು ಈ ವರ್ಷ ರೋಟರಿ ಧ್ಯೇಯ ವಾಕ್ಯದಲ್ಲಿ ರೋಟರಿ ಮ್ಯಾಜಿಕ್ ಪ್ರಮುಖವಾಗಿ ಘೋಷಿಸಿದ್ದಾರೆಂದು ಹೇಳಿದರು.ಇಡೀ ಜಗತ್ತನ್ನೆ ವ್ಯಾಪಿಸಿದ್ದ ಪೊಲಿಯೋ ನಿರ್ಮೂಲನೆ ಮಾಡುವ ರೋಟರಿ ಪ್ರಯತ್ನ ನಿಜಕ್ಕೂ ಒಂದು ಚಮತ್ಕಾರವೇ ಸರಿ. ಕೇವಲ ನಾಲ್ವ ರಿಂದ ಆರಂಭಗೊಂಡು ಇಂದು ಜಗತ್ತನ್ನೆ ವ್ಯಾಪಿಸಿ ಹತ್ತಾರು ಸಾವಿರ ಸದಸ್ಯರು 100 ಕ್ಕೂ ಹೆಚ್ಚು ದೇಶಗಳಲ್ಲಿ ಮನುಕುಲದ ಸೇವೆಯಲ್ಲಿ ತೊಡಗಿರುವುದೂ ಅಚ್ಚರಿ. ಒಂದು ರೀತಿಯಲ್ಲಿ ಇದೊಂದು ಚಮಕ್ಕಾರವೇ ಸರಿ ಎಂದ ರವಿ ಅವರು, ಹೊಸ ಸದಸ್ಯರ ಸೇರ್ಪಡೆ ಮಾಡಿ ಕೊಳ್ಳುವ ಮೂಲಕ ಸೇವಾ ಕಾರ್‍ಯಕ್ಕೆ ಶಕ್ತಿ ತುಂಬಬೇಕೆಂದರು. ಜಿಲ್ಲೆಯಾದ್ಯಂತ ರೋಟರಿ ಸದಸ್ಯರು ಸಾರ್ವಜನಿಕರಿಗೆ ಪ್ರಯೋಜನವಾಗುವ ಅನೇಕ ಯೋಜನೆ ರೂಪಿಸಿರುವುದು ರೋಟರಿ ಪ್ರತಿಷ್ಠೆ ಹೆಚ್ಚಿಸಿದೆ. ಸಂಧ್ಯಾಕಾಲದ ವೃದ್ಧರನ್ನು ಪರಿಪಾಲಿಸುವ ಜೀವನಸಂಧ್ಯಾ ಅತ್ಯುತ್ತಮ ಯೋಜನೆ ಹಲವು ವರ್ಷಗಳಿಂದ ನಡೆಯುತ್ತಿರುವುದು ಸ್ತುತ್ಯಾರ್ಹ. ರೋಟರಿ ಆಂದೋಲನದಲ್ಲಿ ಸೇರ್ಪಡೆಗೊಂಡು ಕ್ರಿಯಾಶೀಲತೆ ಮೂಲಕ ಮೂರೇ ವರ್ಷಗಳಲ್ಲಿ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಯಾಗಿರುವ ಸುಜಿತ್ ತಂಡ ಮಾದರಿ ಚಟುವಟಿಕೆಗಳನ್ನು ನಡೆಸುವ ಭರವಸೆಯಿದೆ ಎಂದರು.ರೋಟರಿ ವಲಯ ನಾಯಕ ಜಿ.ಎಲ್.ವೆಂಕಟೇಶಮೂರ್ತಿ ಮಾತನಾಡಿ, ಜಗತ್ತಿನ ಅತಿ ದೊಡ್ಡ ನ್ಯಾಸ ಸಂಸ್ಥೆಗೆ ರೋಟರಿ ಫೌಂಡೇಶನ್ ಸೇವಾಕಾರ್‍ಯಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಆರೋಗ್ಯ, ಶಿಕ್ಷಣ, ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಮಾನವನ ಮೂಲಭೂತ ಸೌಕರ್‍ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿದೆ ಎಂದು ಹೇಳಿದರು.ನಿರ್ಗಮಿತ ಅಧ್ಯಕ್ಷ ಶ್ರೀವಾತ್ಸವ ನಟರಾಜ್ ಮಾತನಾಡಿ, ಎಲ್ಲ ಸದಸ್ಯರ ಸಹಕಾರದೊಂದಿಗೆ 27 ಉಪಯುಕ್ತ ಯೋಜನೆಗಳನ್ನು ವರ್ಷದ ಅವಧಿಯಲ್ಲಿ ಪೂರ್ಣಗೊಳಿಸಲಾಗಿದೆ. 20ಕ್ಕೂ ಹೆಚ್ಚು ಗ್ರಾಮೀಣ ಸರ್ಕಾರಿ ಶಾಲೆ ಮಕ್ಕಳಿಗೆ ನೋಟ್‌ಪುಸ್ತಕಗಳನ್ನು ನೀಡಿರುವುದು ತೃಪ್ತಿ ತಂದಿದೆ. ಮೊಟ್ಟಮೊದಲ ಬಾರಿಗೆ ರೋಟರಿ ಜಿಲ್ಲಾ ಸಮ್ಮೇಳನ ಅತ್ಯಂತ ಯಶಸ್ವಿಯಾಗಿ ನಗರದಲ್ಲಿ ನಡೆದಿದ್ದನ್ನು ಸ್ಮರಿಸಿದರು.ನೂತನ ಅಧ್ಯಕ್ಷ ಸುಜಿತ್ ಮಾತನಾಡಿದರು. ಸಹಾಯಕ ಗೌರ್‍ನರ್ ನಾಸಿರ್ ಹುಸೇನ್ ಮೂವರು ನೂತನ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ರೋಟರಿ ಆಂದೋಲನಕ್ಕೆ ಸೇರ್ಪಡೆಗೊಳಿಸಿದರು. ಮಾಜಿ ಅಧ್ಯಕ್ಷ ಕೆ.ಎಸ್.ರಮೇಶ್ ಕಳೆದ ಸಾಲಿನ ಅಧ್ಯಕ್ಷ ಎನ್.ಶ್ರೀವಾತ್ಸವ್ ಮತ್ತು ಕಾರ್‍ಯದರ್ಶಿ ಎಂ.ಎಲ್.ಸುಜಿತ್‌ರನ್ನು ಗೌರವಿಸಿದರು.ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶ್ವಥ್‌ಬಾಬು ಮತ್ತು ದಾನಿ ಶಶಿಪ್ರಸಾದ್ ಅವರನ್ನು ಸನ್ಮಾನಿಸಲಾಯಿತು. ರ್‍ಯಾಂಕ್ ವಿದ್ಯಾರ್ಥಿಗಳನ್ನು ನಿರ್ದೇಶಕ ಬಿ.ಎಚ್.ಸಮೃದ್ಧ ಪೈ ಪರಿಚಯಿಸಿದ್ದು ಮುಖ್ಯಅತಿಥಿಗಳು ಗೌರವಿಸಿದರು.ಎನ್.ಶ್ರೀವಾತ್ಸವ್, ನೂತನ ಕಾರ್‍ಯದರ್ಶಿ ಎನ್.ಪಿ.ಲಿಖಿತ್ , ವಿವಿಧ ಶಾಲಾಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು. 8 ಕೆಸಿಕೆಎಂ 3ಎಂಎಲ್‌ವಿ ರೋಟರಿ ಸಭಾಂಗಣದಲ್ಲಿ ಚಿಕ್ಕಮಗಳೂರು ರೋಟರಿ ಕ್ಲಬ್‌ನ ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷ ಎಂ.ಎಲ್. ಸುಜಿತ್ ತಂಡ ಅಧಿಕಾರ ಸ್ವೀಕರಿಸಿತು. ಎಚ್.ಎಲ್. ರವಿ, ವೆಂಕಟೇಶಮೂರ್ತಿ ಇದ್ದರು.