ಮಕ್ಕಳ ಪ್ರತಿಭೆ ಅನಾವರಣಕ್ಕೆ ಸಾಹಿತ್ಯ ಸಂಭ್ರಮ ಉತ್ತಮ ವೇದಿಕೆ-ನಿಂಗಪ್ಪ ಓಲೇಕಾರ

KannadaprabhaNewsNetwork |  
Published : Mar 02, 2024, 01:48 AM IST
ಕಾರ್ಯಕ್ರಮವನ್ನು ಅತಿಥಿಗಳು ಉದ್ಘಾಟಿಸಿದರು.  | Kannada Prabha

ಸಾರಾಂಶ

ಮಕ್ಕಳ ಅಭಿರುಚಿ, ಆಲೋಚನೆ, ಕಲ್ಪನೆಗಳು ಕಥೆ ಕವನ ಹಾಗೂ ನಾಟಕಗಳ ಮೂಲಕ ಪ್ರತಿಭೆ ಅಭಿವ್ಯಕ್ತ ಪಡಿಸಲು ಮಕ್ಕಳ ಸಾಹಿತ್ಯ ಸಂಭ್ರಮವು ಉತ್ತಮ ವೇದಿಕೆಯಾಗಿದೆ ಎಂದು ತಾಪಂ ಇಒ ನಿಂಗಪ್ಪ ಓಲೇಕಾರ ಹೇಳಿದರು.

ಶಿರಹಟ್ಟಿ: ಮಕ್ಕಳ ಅಭಿರುಚಿ, ಆಲೋಚನೆ, ಕಲ್ಪನೆಗಳು ಕಥೆ ಕವನ ಹಾಗೂ ನಾಟಕಗಳ ಮೂಲಕ ಪ್ರತಿಭೆ ಅಭಿವ್ಯಕ್ತ ಪಡಿಸಲು ಮಕ್ಕಳ ಸಾಹಿತ್ಯ ಸಂಭ್ರಮವು ಉತ್ತಮ ವೇದಿಕೆಯಾಗಿದೆ ಎಂದು ತಾಪಂ ಇಒ ನಿಂಗಪ್ಪ ಓಲೇಕಾರ ಹೇಳಿದರು.

ತಾಲೂಕಿನ ಮಾಗಡಿ ಗ್ರಾಮದ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ ರಾಜ್‌ ಇಲಾಖೆ, ಜಿಪಂ ಗದಗ, ತಾಪಂ ಶಿರಹಟ್ಟಿ, ಶಾಲಾ ಶಿಕ್ಷಣ ಇಲಾಖೆ ಶಿರಹಟ್ಟಿ, ಗ್ರಾಮ ಪಂಚಾಯತ ಮಾಗಡಿ, ಗೊಜನೂರ, ಯಳವತ್ತಿ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ, ಜಿ.ಎಮ್.ಪಿ.ಎಸ್ ಮಾಗಡಿ, ಕೆ.ಜಿ.ಎಸ್ ಮಾಗಡಿ ಶಾಲೆಗಳ ಜಂಟಿ ಸಹಯೋಗದಲ್ಲಿ 3 ದಿನದ ಮಕ್ಕಳ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶದ ಮಕ್ಕಳನ್ನು ಓದಿನಲ್ಲಿ ತಲ್ಲಿನರಾಗಿಸಲು ಮತ್ತು ಅವರ ಪ್ರತಿಭೆ ಗುರುತಿಸಲು ಸಾಹಿತ್ಯ ಸಂಭ್ರಮ ಉತ್ತಮ ವೇದಿಕೆಯಾಗಿದ್ದು, ಮಕ್ಕಳು ಸ್ವತಃ ತಾವೇ ಕಥೆ ಕಟ್ಟುವುದು, ಕವಿತೆ ಬರೆಯುವುದು, ಹಾಡು ರಚಿಸಿ ಹಾಡುವುದು, ನಾಟಕ ರಚಿಸಿ ಅಭಿನಯಿಸುವುದು, ಪತ್ರಿಕಾ ವರದಿಗಾರರಂತೆ ರಿಪೋರ್ಟ್ ಮಾಡುವುದರ ಕುರಿತು ಸಂಪೂರ್ಣ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಶ್ರಮಿಸಲಾಗುವುದು ಎಂದು ಹೇಳಿದರು.ಈ ವೇಳೆ ತಾಲೂಕಿನ ಮಾಗಡಿ ಗ್ರಾಮ ಹಾಗೂ ಗೊಜನೂರ, ಯಳವತ್ತಿ ಗ್ರಾಮದ ಶಾಲೆಗಳ 6 ರಿಂದ 9ನೇ ತರಗತಿಯ ಸುಮಾರು 100 ಮಕ್ಕಳು ಮತ್ತು 15 ಜನ ಸಂಪನ್ಮೂಲ ಶಿಕ್ಷಕರು, 5 ಜನ ಕೇರ್ ಟೇಕರ್ ಇದ್ದರು. ಈ ಸಂದರ್ಭದಲ್ಲಿ ಮಾಗಡಿ ಗ್ರಾಪಂ ಉಪಾಧ್ಯಕ್ಷೆ ಲಲಿತಾ ಪಾಟೀಲ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ತಾಪಸ್ಕರ, ವೈ.ಬಿ. ಪಾಟೀಲ, ಗ್ರಾಪಂ ಸದಸ್ಯ ವಾಯ್. ಡಿ. ಪಾಟೀಲ, ವಿ.ಪಿ. ಮಠಪತಿ, ಶೈನಾಜ್ ಬುವಾಜಿ, ಗಿರಿಜವ್ವ ಹೆಳವಾರ, ಪಾಲಾಕ್ಷಪ್ಪ ಈಳಿಗೇರ, ಮಹದೇವಕ್ಕ ಕುಂದಿ, ಎಸ್.ವಾಯ್ .ಕುಂಬಾರ, ಸುರೇಶ ಲಮಾಣಿ, ಶಿವರಾಜಗೌಡ ಪಾಟೀಲ, ಜಗದೀಶ ಮುಳಗುಂದ, ಎಮ್.ಎಮ್. ಹವಳದ, ಬಿ. ಎಸ್. ಹರ್ಲಾಪುರ, ಬಿ.ಬಿ. ಕಳಸಾಪುರ, ಡಿ.ಎಚ್. ಪಾಟೀಲ್, ಬುಕ್ಕಿಟಗಾರ, ಎಮ್.ಎನ್. ಭರಮಗೌಡರ, ಕೆ.ಪಿ. ಕಂಬಳಿ, ಎನ್.ಎನ್. ಸಾವಿರಕುರಿ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ