ನವದೆಹಲಿ: ಈ ವರ್ಷ 6 ಕನ್ನಡಿಗರಿಗೆ ಸಂಗೀತ ಹಾಗೂ ಕಲೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುವ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಘೋಷಣೆ ಆಗಿದೆ.
ಅದರಲ್ಲಿ ವೀಣೆ ಕಲಾವಿದೆ ಜಯಂತಿ ಕುಮಾರೇಶ್ ಅವರಿಗೆ 2022ನೇ ಸಾಲಿನ ಅಕಾಡೆಮಿ ಪುರಸ್ಕಾರ ಲಭಿಸಿದೆ. 2022ನೇ ಸಾಲಿನ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರಕ್ಕೆ ವೀಣೆ ಕಲಾವಿದೆ ಸಹನಾ ಎಸ್.ವಿ. ಹಾಗೂ ನಾಟಕ ವಿಭಾಗದಲ್ಲಿ ಬೇಲೂರು ರಘುನಂದನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಇನ್ನು 2023ನೇ ಸಾಲಿನ ನೃತ್ಯ ವಿಭಾಗದಲ್ಲಿ ನಿರುಪಮಾ ಹಾಗೂ ರಾಜೇಂದ್ರ ದಂಪತಿಗಳಿಗೆ ಹಾಗೂ ವಯೋಲಿನ್ ಕಲಾವಿದ ಎಚ್.ಕೆ ವೆಂಕಟರಾಮನ್ ಅವರಿಗೆ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಲಭಿಸಿದೆ.
ಬಾಂಬೆ ಜಯಶ್ರಿಗೂ ಪ್ರಶಸ್ತಿ: ಗಾಯಕಿ ಬಾಂಬೆ ಜಯಶ್ರೀ, ನಟರಾದ ಅಶೋಕ್ ಸರಾಫ್ ಹಾಗೂ ರಾಜೀವ್ ಅವರೂ ಪುರಸ್ಕಾರ ಸಿಕ್ಕವರಲ್ಲಿ ಪ್ರಮುಖರು.