ಗಾಂಧೀಜಿಯವರ ತ್ಯಾಗ ಆದರ್ಶ ಪ್ರಾಯ

KannadaprabhaNewsNetwork |  
Published : Oct 04, 2025, 01:00 AM IST
57 | Kannada Prabha

ಸಾರಾಂಶ

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೇವಲ ವ್ಯಕ್ತಿಯಾಗಿರದೆ, ಇಡೀ ದೇಶದ ದೊಡ್ಡ ಶಕ್ತಿಯಾಗಿದ್ದರು.

ಕನ್ನಡಪ್ರಭ ವಾರ್ತೆ ಸರಗೂರುಪಟ್ಟಣದ ಸ್ವಾಮಿ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಆವರಣದಲ್ಲಿ 156 ನೇ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿತು.ಮುಖ್ಯಅತಿಥಿಯಾಗಿ ಎಸ್.ಎನ್. ದೇವೇಂದ್ರಯ್ಯ ಮಹಾತ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸತ್ಯವೇ ದೇವರು ಎಂದು ನಂಬಿದ್ದ ಗಾಂಧೀಜಿಯವರು ನಮ್ಮಲ್ಲಿ ನಾವು ಬದಲಾವಣೆಯನ್ನು ಕಂಡುಕೊಳ್ಳಬೇಕು ಜೊತೆಗೆ ಗಾಂಧೀಜಿಯವರ ತತ್ವ ಆದರ್ಶಗಳನ್ನು ನಮ್ಮ ಜೀವನದಲ್ಲಿ ಹಾಗೂ ಸಮಾಜದಲ್ಲಿ ಆಳವಡಿಸಿಕೊಳ್ಳಬೇಕು ಎಂದರು.ಸರಗೂರು ಪಪಂಯಲ್ಲಿ ಹಿರಿಯ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಕಣ್ಣಮ್ಮ ಬೀದಿ ಬದಿಯಲ್ಲಿ ಮತ್ತು ಮನೆ ಮನೆಗೆ ತೆರಳಿ ಕಸ ಸಂಗ್ರಹಿಸುವ ಸ್ವಚ್ಚತಾ ಕಾಯಕದಲ್ಲಿ ಇವರು ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿರುವುದರಿಂದ ವಿವೇಕಾನಂದ ಸ್ಮಾರಕ ಆಸ್ಪತ್ರೆಯು ಶ್ಲಾಘಿಸಿ ಗೌರವ ಸಮರ್ಪಣೆಯನ್ನು ನೀಡಲಾಯಿತು. ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಸ್ಮಾರಕ ಆಸ್ಪತ್ರೆಯ ತುರ್ತು ಚಿಕಿತ್ಸಾ ತಜ್ಞರಾದ ಡಾ. ಅರ್ಜುನ್ ಎಸ್. ಪ್ರಕಾಶ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೇವಲ ವ್ಯಕ್ತಿಯಾಗಿರದೆ, ಇಡೀ ದೇಶದ ದೊಡ್ಡ ಶಕ್ತಿಯಾಗಿದ್ದರು. ಅವರು ರಾಜಕೀಯ ವ್ಯಕ್ತಿಯಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳದೆ, ಒಬ್ಬ ದಾರ್ಸನಿಕ, ಆರ್ಥಿಕ ತಜ್ಞ, ತತ್ವಜ್ಞಾನಿಯಾಗಿ ಶಾಂತಿಯುತ ಮಾರ್ಗದಿಂದ ಹೇಗೆ ಒಂದು ದೇಶವನ್ನು ಕಟ್ಟಬಹುದು ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ನೀಡಿದರು. ಅಂತಹ ಮಹಾತ್ಮರ ಜನ್ಮದಿನವನ್ನು ಇಂದು ಇಡೀ ವಿಶ್ವಶಾಂತಿ ದಿನಾಚರಣೆಯಾಗಿ ಆಚರಿಸುತ್ತಿದೆ. ನಿತ್ಯದ ಕೆಲಸದಲ್ಲಿ ಪ್ರತಿಯೊಬ್ಬರು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ, ಇವನ್ನು ಸ್ವೀಕರಿಸಿ ಧೈರ್ಯದಿಂದ ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ, ಸತ್ಯ ಮತ್ತು ಧೈರ್ಯ ಇವೆಲ್ಲವೂ ಇದ್ದರೆ ನಮ್ಮ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಹೇಳಿ ಗಾಂಧೀ ಜಯಂತಿಯ ಶುಭಾಶಯಗಳು ತಿಳಿಸಿದರು.ವೈದ್ಯರಾದ ಡಾ.ಎಚ್.ಕೆ. ಶಂಕರ್, ಡಾ. ವೀಣಾ ಶೇಷಾದ್ರಿ, ಡಾ. ಶರತ್ ಚಂದ್ರ, ಡಾ. ಪ್ರಶಾಂತ್ ಎಸ್. ಬಿಂಜಲ್ ಬಾವಿ, ಆಸ್ಪತ್ರೆ ವ್ಯವಸ್ಥಾಪಕರಾದ ಬಿ.ಜಿ. ಸಂಧ್ಯಾ, ಸಿಬ್ಬಂದಿ ವರ್ಗದವರಾದ ಬೀನಾ, ನಾಗರತ್ನ, ಗೋಪಾಲಕೃಷ್ಣ, ಕೃಷ್ಣಕುಮಾರ್, ಚಂದ್ರು, ನಿಂಗರಾಜು, ಬಂಗಾರಶೆಟ್ಟಿ, ಎಂ.ಪಿ. ರಮೇಶ್, ವೆಂಕಟಸ್ವಾಮಿ, ರೂಪೇಶ್, ಯಶೋಧ, ಪೂರ್ಣಿಮಾ, ಸುಧಾರಾಣಿ, ವಸಂತಭಾಯಿ, ಅಮೃತ, ಪ್ರವೀಣ್, ನಂಜುಂಡಸ್ವಾಮಿ, ನಂದೀಶ್, ಸಾರ್ವಜನಿಕರು ಭಾಗವಹಿಸಿದ್ದರು.

PREV

Recommended Stories

ಬೆಡ್‌ರೂಮಲ್ಲಿ ರಹಸ್ಯ ಕ್ಯಾಮೆರಾ: ಲೈಂಗಿಕಕ್ರಿಯೆ ಚಿತ್ರೀಕರಿಸಿ ದೌರ್ಜನ್ಯ
ಕಾವೇರಿ ಆರತಿ ನಿಲ್ಲಿಸಲ್ಲ: ಡಿಸಿಎಂ