ಸರ್ವಜ್ಞರು 16 ನೇ ಶತಮಾನದಲ್ಲೇ ಜನಪ್ರಿಯ ಕವಿಯಾಗಿದ್ದರು: ಎಚ್‌.ಎಂ.ಶಿವಣ್ಣ

KannadaprabhaNewsNetwork |  
Published : Feb 21, 2024, 02:01 AM IST
ನರಸಿಂಹರಾಜಪುರ ತಾಲೂಕು ಕಚೇರಿ ಸಭಾಂಗದಲ್ಲಿ ನಡೆದ ಸಂತ ಸೇವಾಲಾಲ್‌, ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಕೊಪ್ಪ ಎ.ಪಿ.ಎಂ.ಸಿ.ನಿರ್ದೇಶಕ ಎಚ್‌.ಎಂ.ಶಿವಣ್ಣ ಮಾತನಾಡಿದರು.ತಾಲೂಕು ಕ.ಸಾ.ಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ, ತಹಶೀಲ್ದಾರ್‌ ತನುಜ ಟಿ.ಸವದತ್ತಿ ಮತ್ತಿತರರು ಇದ್ದರು. | Kannada Prabha

ಸಾರಾಂಶ

ದಾರ್ಶನಿಕ, ಸಂತ ಕವಿ ಸರ್ವಜ್ಞರು 16 ನೇ ಶತಮಾನದಲ್ಲೇ ಜನಪ್ರಿಯ ಕವಿಯಾಗಿದ್ದರು ಎಂದು ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್‌.ಎಂ.ಶಿವಣ್ಣ ತಿಳಿಸಿದರು.

- ತಾಲೂಕು ಕಚೇರಿಯಲ್ಲಿ ಸಂತ ಸೇವಾಲಾಲ್ । ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞ ಜಯಂತಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ದಾರ್ಶನಿಕ, ಸಂತ ಕವಿ ಸರ್ವಜ್ಞರು 16 ನೇ ಶತಮಾನದಲ್ಲೇ ಜನಪ್ರಿಯ ಕವಿಯಾಗಿದ್ದರು ಎಂದು ಕೊಪ್ಪ ಎಪಿಎಂಸಿ ನಿರ್ದೇಶಕ ಎಚ್‌.ಎಂ.ಶಿವಣ್ಣ ತಿಳಿಸಿದರು.

ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ದಾರ್ಶನಿಕ ಸಂತ ಸೇವಾಲಾಲ್, ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸರ್ವಜ್ಞ ಹಾವೇರಿ ಜಿಲ್ಲೆಯ ಮಾಸೂರು ಎಂಬಲ್ಲಿ ಜನಿಸಿದ್ದರು. ಅವರಿಗೆ ಬಾಲ್ಯದಲ್ಲಿ ಪುಷ್ಪದತ್ತ ಎಂಬ ಹೆಸರಿದ್ದು ನಂತರದಲ್ಲಿ ಸರ್ವಜ್ಞ ಎಂದು ಹೆಸರಿನಿಂದ ಗುರುತಿಸಲ್ಪಡುತ್ತಾರೆ. ಛತ್ರಪತಿ ಶಿವಾಜಿ 1630 ರಲ್ಲಿ ಬೋಂಸ್ಲೆ ವಂಶದ ಮರಾಠ ಕುಟುಂಬಕ್ಕೆ ಸೇರಿದ್ದಾರೆ. ಬಿಜಾಪುರ ಸುಲ್ತಾನರೊಂದಿಗೆ ಹೋರಾಡಿ ಮೊಘಲ್ ಸಾಮಾೃಜ್ಯವನ್ನು ವಿಸ್ತರಿಸಿ ಮೋಘಲ್‌ ಚಕ್ರವರ್ತಿಯಾಗಿ ಇತಿಹಾಸದ ಪುಟ ಸೇರಿದ್ದಾರೆ ಎಂದರು. ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಸರ್ವಜ್ಞ ಎಂದರೆ ಜ್ಞಾನಿ ಎಂದರ್ಥವಾಗುತ್ತದೆ. ಆಯಾ ಕಾಲಮಾನಕ್ಕೆ ತಕ್ಕಂತೆ ಸಂದರ್ಭನುಸಾರವಾಗಿ ತ್ರಿಪದಿಗಳ ಮೂಲಕ ಧರ್ಮ, ಸಂಸ್ಕೃತಿ, ಸಂಸ್ಕಾರ ಮುಂತಾದ ವಿಚಾರ ಇಟ್ಟುಕೊಂಡು ವಚನಗಳ ಮೂಲಕ ಜನರಿಗೆ ತಲುಪಿಸಿದ ಸರ್ವಜ್ಞನನ ವಚನಗಳು ಇಂದಿಗೂ ಪ್ರಸ್ತುತ ಎಂದರು.

ಶಿವಾಜಿ ಮಹಾರಾಜರು ಕೆರೆಯ ಕಟ್ಟಿಸು, ಬಾವಿಯ ತೋಡಿಸು ಎಂದು ತನ್ನ ತಾಯಿಯ ಗರ್ಭದಲ್ಲಿದ್ದಾಗಲೇ ಆದರ್ಶ ಗಳನ್ನು ತಾಯಿಯ ಮೂಲಕ ತಿಳಿದುಕೊಂಡು ನಂತರ ಹಿಂದೂ ಸಾಮ್ರಾಜ್ಯದ ಅನಭಿಷಕ್ತ ದೊರೆಯಾಗಿದ್ದರು. ಸಂತ ಸೇವಾಲಾಲರು ಮೂಡನಂಬಿಕೆ ವಿರುದ್ಧ ಹೋರಾಡಿದ ವಿವೇಚನಾಶೀಲ ವ್ಯಕ್ತಿಯಾಗಿದ್ದು ಸಾಮಾಜಿಕ ನ್ಯಾಯಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಆದರ್ಶ ವ್ಯಕ್ತಿ ಎಂದರು. ಸಭೆ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್‌ ತನುಜ ಟಿ.ಸವದತ್ತಿ ಮಾತನಾಡಿ, ಧೈರ್ಯಕ್ಕೆ ಹೆಸರುವಾಸಿಯಾಗಿದ್ದ ಶಿವಾಜಿ, ಜ್ಞಾನದ ಗಣಿಯಾಗಿದ್ದ ಸರ್ವಜ್ಞ, ಆದ್ಯಾತ್ಮಿಕಕ್ಕೆ ಹೆಸರುವಾಸಿಯಾದ ಸಂತ ಸೇವಾಲಾಲ್‌ ಅವರ ಜನ್ಮ ಜಯಂತಿ ವಿಶೇಷವಾಗಿದ್ದು ಪ್ರಸ್ತುತ ದಿನಗಳಲ್ಲಿ ಸರ್ವಜ್ಞನ ವಚನಗಳು ಹೆಚ್ಚು ಮೌಲ್ಯುಯತವಾಗಿದೆ ಎಂದರು. ಸಬ್ ರಿಜಿಸ್ಟಾರ್ ಹೇಮೇಶ್ ಶಿವಾಜಿ ಮಹಾರಾಜನ ಬಗ್ಗೆ ಮಾತನಾಡಿದರು. ಅತಿಥಿಯಾಗಿ ದಲಿತ ಸಂಘರ್ಷ ಸಮಿತಿ ಮುಖಂಡ ಮಂಜುನಾಥ್‌ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಅತಿಥಿಗಳು ಸಂತ ಸೇವಾಲಾಲ್‌, ಛತ್ರಪತಿ ಶಿವಾಜಿ ಹಾಗೂ ಸಂತ ಕವಿ ಸರ್ವಜ್ಞರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.ನಿಶ್ಮಾ ಜೈನ್‌ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ