ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಡಿ.ಎಚ್. ಆಶ್ವಿನ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಸಭೆಯಲ್ಲಿ 2024-25ನೇ ಸಾಲಿಗೆ 18.32 ಲಕ್ಷ ರು.ಗಳ ಉಳಿತಾಯ ಬಜೆಟ್ ಅನ್ನು ಪುರಸಭೆ ಮುಖ್ಯಾಧಿಕಾರಿ ರುದ್ರಮ್ಮ ಶರಣಪ್ಪ ಮಂಡಿಸಿದರು.2024-25ನೇ ಸಾಲಿನಲ್ಲಿ ಬಾಗೇಪಲ್ಲಿ ಪುರಸಭೆಗೆ ಎಸ್.ಎಫ್.ಸಿ ವೇತನ ಅನುದಾನ 1 ಕೋಟಿ 84 ಲಕ್ಷ ರು., ವಿದ್ಯುತ್ ಅನುದಾನ 2ಕೋಟಿ 12 ಲಕ್ಷ ರು., ಕುಡಿಯುವ ನೀರು ಮತ್ತು ಬರ ಪರಿಹಾರ 15 ಲಕ್ಷ ರು., 15ನೇ ಹಣಕಾಸು ಯೋಜನೆಯ ಅನುದಾನ 1 ಕೋಟಿ 51 ಲಕ್ಷ ರು., ಆಸ್ತಿ ತೆರಿಗೆ 16 ಲಕ್ಷ ರು., ಪುರಸಭೆ ಅಂಗಡಿಗಳ ಬಾಡಿಗೆ 12 ಲಕ್ಷ 40 ಸಾವಿರ ರು,, ನೀರು ಸರಬರಾಜು ತೆರಿಗೆ 1ಕೋಟಿ 28 ಲಕ್ಷ 53 ಸಾವಿರ ರು.,
ಗೃಹಭಾಗ್ಯಕ್ಕೆ ಅನುದಾನಉದ್ದಿಮೆ ಪರವಾನಿಗೆ ಶುಲ್ಕ 45 ಸಾವಿರ 300 ರು., ಎಸ್.ಎಫ್ ಸಿ ವಿಶೇಷ ಅನುದಾನ 3 ಕೋಟಿ ರು., ಇತರೆ ಅನುದಾನ 20 ಲಕ್ಷ ರು., ಇತರೆ ಆದಾಯ 1 ಕೋಟಿ 56 ಲಕ್ಷ 77 ಸಾವಿರ ರು., ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆ ಅನುದಾನ 27 ಲಕ್ಷ ರು.. ಆರಂಭಿಕ ಶಿಲ್ಕು 3 ಕೋಟಿ 83 ಸಾವಿರ 903 ರು.ಗಳು ಸೇರಿ ಒಟ್ಟು 18.11 ಕೋಟಿ 73 ರು.ಗಳ ಆದಾಯ ನಿರೀಕ್ಷೆ ಮಾಡಲಾಗಿದೆ. ಈ ಪೈಕಿ17.34 ಕೋಟಿ ಖರ್ಚು ಆಗಿದ್ದು ಉಳಿದಂತೆ 18.32 ಲಕ್ಷ ರು.ಗಳ ಉಳಿತಾಯವಾಲಿದೆ ಎಂದು ತಿಳಿಸಿದರು.
ಸಭೆ ಪ್ರಾರಂಭವಾಗುತ್ತಿದ್ದಂತೆ ಪುರಸಭೆ ಸದಸ್ಯರು, ಮುಖ್ಯಾಧಿಕಾರಿ ರುದ್ರಮ್ಮ ಶರಣಪ್ಪನವರ ವಿರುದ್ಧ ಆರೋಪಗಳ ಸುರುರಿಮಳೆಗೈಯ್ದರು. ಪಟ್ಟಣದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಮೂಲ ಸೌಲಭ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣವಾಗಿ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸದಸ್ಯೆ ಬದಲು ಪತಿ ಹಾಜರಿ
ಬಜೆಟ್ ಸಭೆಗೆ ಬಹುತೇಕ ಸದಸ್ಯರ ಗೈರು ಹಾಜರಿ ಎದ್ದು ಕಾಣುತ್ತಿತ್ತು. ಅಲ್ಲದೆ, ಈ ಸಭೆಯಲ್ಲಿ ಪಟ್ಟಣದ 6 ನೇ ವಾರ್ಡಿನ ಸದಸ್ಯೆಯ ಬದಲಿಗೆ ಅವರ ಪತಿರಾಯ ಸಭೆಯಲ್ಲಿ ಹಾಜರಾಗಿರುವುದು ಕಂಡುಬಂದಿತು.