ರಾಮನಗರ: ತಾಲೂಕಿನ ಸುಗ್ಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೃಷ್ಣಮೂರ್ತಿ (ಕಿಟ್ಟಿ) ಉಪಾಧ್ಯಕ್ಷರಾಗಿ ರಾಮಕ್ಕ ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಒಟ್ಟು 12 ಜನ ಸದಸ್ಯರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕೃಷ್ಣಮೂರ್ತಿ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಮಕ್ಕ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಅವಿರೋಧ ಆಯ್ಕೆ ಘೋಷಿಸಿದರು.ಈ ವೇಳೆ ನೂತನ ಅಧ್ಯಕ್ಷ ಕೃಷ್ಣಮೂರ್ತಿ(ಕಿಟ್ಟಿ) ಮಾತನಾಡಿ, ಸಂಘದ ಪ್ರಗತಿಗೆ ಠೇವಣಿ ಹೆಚ್ಚಿನ ಸಂಗ್ರಹ ಮಾಡುವ ಚಿಂತನೆ ಇದೆ. ಆರ್ಥಿಕ ವಹಿವಾಟು ಹೆಚ್ಚಿಸಿ ವೃತ್ತಿಪರ, ಹೈನುಗಾರಿಕೆ. ವ್ಯಾಪಾರ ವಹಿವಾಟಿಗೆ ಸಾಲ ಸೌಲಭ್ಯ ಕಲ್ಪಿಸುವುದು. ಜೊತೆಗೆ ಗ್ರಾಮೀಣ ಪ್ರದೇಶದ ರೈತಾಪಿ ವರ್ಗದ ಸಣ್ಣ, ಅತೀ ಸಣ್ಣ ರೈತರಿಗೆ, ರೈತ ಮಹಿಳೆಯರಿಗೆ ಸ್ತ್ರೀಶಕ್ತಿ ಸ್ವಹಾಯ ಸಂಘದ ಸದಸ್ಯರಿಗೆ ಸಂಘದಿಂದ ದೊರೆಯುವ ಯಶಸ್ವಿನಿ ಯೋಜನೆಗಳನ್ನು ಒದಗಿಸುವ ಚಿಂತನೆ ಮಾಡಲಾಗಿದೆ ಎಂದರು.
ರೈತರಿಗೆ ಸುಲಭವಾಗಿ ನೆರವಾಗುವ ಕ್ಷೇತ್ರ ಗ್ರಾಮೀಣ ಪ್ರದೇಶದ ಕೃಷಿ ಪತ್ತಿನ ಸಹಕಾರ ಸಂಘಗಳು. ಸಂಘ ಸ್ಥಳೀಯ ರೈತರ ಏಳಿಗೆಗಾಗಿ ದುಡಿಯುತ್ತಿದೆ. ರೈತರಿಗೆ ಬೆಳೆಸಾಲ, ಸ್ತ್ರೀಶಕ್ತಿ ಸಾಲ ಸೇರಿದಂತೆ ಸಂಘದಿಂದ ದೊರೆಯುವ ಸವಲತ್ತುಗಳನ್ನು ಕಾಲಾಕಾಲಕ್ಕೆ ತಲುಪಿಸಲಾಗುತ್ತಿದೆ. ಮುಂದೆ ಹೆಚ್ಚಿನ ಸಾಲ ಸೌಲಭ್ಯ ನೀಡಿ ಆರ್ಥಿಕವಾಗಿ ರೈತರು ಸದೃಡರಾಗುವಂತೆ ಮಾಡಲು ಪಣ ತೊಡುತ್ತೇವೆ. ನೂತನ ಆಡಳಿತ ಮಂಡಳಿಯ ಸಹಕಾರದಿಂದ ಮತ್ತಷ್ಟು ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ದು ಸಂಘವನ್ನು ಮತ್ತಷ್ಟು ಜನಸ್ನೇಯಿಯಾಗಿ ಮಾಡಲಾಗುತ್ತದೆ ಎಂದು ತಿಳಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಆರ್. ರಾಮಕೃಷ್ಣಯ್ಯ ಮುಖಂಡರಾದ ದೊರೆಸ್ವಾಮಯ್ಯ, ಶಾಂತಣ್ಣ, ಉಮೇಶ್, ಮಹದೇವ್, ಭೈರಪ್ಪ, ನಿರ್ದೇಶಕರಾದ ಕೆ. ಚಂದ್ರಯ್ಯ, ವೆಂಕಟೇಶ್, ಜಯಮ್ಮ, ವೆಂಕಟಯ್ಯ, ಕೃಷ್ಣಪ್ಪ, ನರಸಿಂಹಯ್ಯ, ಸಿದ್ದಲಿಂಗಯ್ಯ, ಹೆಚ್. ರವಿ, ಹೊನ್ನಯ್ಯ, ಆಂಜನಪ್ಪ ಸಂಘದ ಸಿಇಒ ಪ್ರಕಾಶ್, ಚುನಾವಣಾಧಿಕಾರಿ ನಾಗೇಶ್ ಹಾಜರಿದ್ದರು.31ಕೆಆರ್ ಎಂಎನ್ 5.ಜೆಪಿಜಿ
ರಾಮನಗರ ತಾಲೂಕಿನ ಸುಗ್ಗನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ ಕೃಷ್ಣಮೂರ್ತಿ (ಕಿಟ್ಟಿ) ಮತ್ತು ಉಪಾಧ್ಯಕ್ಷೆ ರಾಮಕ್ಕ ಅವರನ್ನು ಮುಖಂಡರು ಅಭಿನಂದಿಸಿದರು.