ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸ್ವ-ಉದ್ಯೋಗ ಪೂರಕ

KannadaprabhaNewsNetwork |  
Published : Mar 18, 2024, 01:47 AM IST
ದೊಡ್ಡಬಳ್ಳಾಪುರ ತಾಲೂಕು ಕೋಡಿಪಾಳ್ಯದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾಧಿಕಾರಿ ಎಂ ನಾಗಮಣಿ ಮತ್ತಿತರರು ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಮಹಿಳೆಯರು ಸ್ವಾವಲಂಬಿ ಬದುಕಿನ ಕಡೆ ಹೆಚ್ಚು ಗಮನ‌ ನೀಡಿದಾಗ ಮಾತ್ರ ಅವರ ಆರ್ಥಿಕ ಸ್ಥಿತಿ ಉತ್ತಮ‌ಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾಧಿಕಾರಿ ಎಂ ನಾಗಮಣಿ ಹೇಳಿದರು.

ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರಮಹಿಳೆಯರು ಸ್ವಾವಲಂಬಿ ಬದುಕಿನ ಕಡೆ ಹೆಚ್ಚು ಗಮನ‌ ನೀಡಿದಾಗ ಮಾತ್ರ ಅವರ ಆರ್ಥಿಕ ಸ್ಥಿತಿ ಉತ್ತಮ‌ಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತಿ ಸಹಾಯಕ ಯೋಜನಾಧಿಕಾರಿ ಎಂ ನಾಗಮಣಿ ಹೇಳಿದರು.ಅವರು ತಾಲೂಕಿನ ಮಧುರೆ ಹೋಬಳಿಯ ಕೋಡಿಪಾಳ್ಯದಲ್ಲಿ ಚೆನ್ನದೇವಿ ಅಗ್ರಹಾರ ಗ್ರಾಮ ಪಂಚಾಯತಿ ಹಾಗೂ ಜೈಭಾರತಿ ಸಂಜೀವಿನಿ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ‌ ದಿನಾಚರಣೆಯಲ್ಲಿ ಮಾತನಾಡಿದರು.

ರಾಷ್ಟ್ರೀಯ ಮಹಿಳಾ ದಿನದಂದು ಮಹಿಳೆಯರ ಹಲವು ಸಾಧನೆಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಭಾರತದಲ್ಲಿ ಮಹಿಳೆಯರು ವಿವಿಧ ರೀತಿಯ ಚಟುವಟಿಕೆಗಳನ್ನು ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಸ್ಥಳೀಯ ಮಹಿಳಾ ಒಡೆತನದ ಹಲವು ಸಂಸ್ಥೆಗಳನ್ನು ಗುರುತಿಸುವುದು, ಮಹಿಳಾ ಚಾರಿಟಿಗಾಗಿ ನಿಧಿಯನ್ನು ಸಂಗ್ರಹಿಸುವುದು, ಸ್ಪೂರ್ತಿದಾಯಕ ಮಹಿಳೆಯರ ಬಗ್ಗೆ ಕಲಿಯುವುದು, ಒಬ್ಬರ ಜೀವನದಲ್ಲಿ ಬದಲಾವಣೆಯನ್ನು ತಂದ ಮಹಿಳೆಯರನ್ನು ಗುರುತಿಸುವುದು ನಮ್ಮ ಆದ್ಯತೆಯಾಗಿದೆ. ಇದು ಮಹಿಳಾ ಸಾಧಕರನ್ನು ನೆನೆದು ಸಮಾನತೆಯನ್ನು ಸಾರುವ ದಿನ ಎಂದು ಹೇಳಬಹುದು. ಎಲ್ಲ ಹಂತಗಳಲ್ಲಿ ಆಚರಣೆಯ ಬಗ್ಗೆ ಅರಿವು ಅಗತ್ಯ ಎಂದರು.ಗ್ರಾಮ ಪಂಚಾಯತಿ ಸದಸ್ಯೆ ಎಸ್ ಜಿ ಕಾಂತಲಕ್ಷ್ಮೀ ಮಾತನಾಡಿ, ಮದುರೆ ಹೋಬಳಿಯ ವ್ಯಾಪ್ತಿಯಲ್ಲಿ ಕೃಷಿ ಕ್ಷೇತ್ರ ಕ್ಕೆ‌ ಹೆಚ್ವಿನ‌ ಆದ್ಯತೆ ನೀಡಬೇಕಾಗಿದೆ. ಮಹಿಳೆಯರು ಸಂಘದಿಂದ‌ ಸಾಲ ಸೌಲಭ್ಯ ಪಡೆದು ಕೊಂಡು ಸ್ವ ಉದ್ಯೋಗ ಅಂದರೆ ಕುರಿ, ಮೇಕೆ, ಕೋಳಿ, ಹಸು ಸಾಗಾಣಿಕೆ ಮಾಡಿಕೊಳ್ಳಬಹುದು. ಸರಕಾರದ ವಿವಿದ ಇಲಾಖೆಯ ಅನೇಕ ಯೋಜನೆಗಳ ಮಾಹಿತಿ ಪಡೆದುಕೊಂಡು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಪ್ರೇಮಕುಮಾರಿ, ಸದಸ್ಯರಾದ ರೂಪಶ್ರೀ, ಪ್ರಮೀಳಾ, ಸುಧಾ, ಮಂಜುನಾಥ್, ಜಗದೀಶ್ ಅಮರೇಶ್ ಕುಮಾರ್, ಪಿಡಿಒ ನಂದಕುಮಾರ್, ಎಂಬಿಕೆ ಬೀರಮ್ಮ, ಸಿಬ್ಬಂದಿಗಳಾದ ನವೀನ್.‌ ಭಾಗ್ಯಮ್ಮ, ಮಂಜುಳ, ಮಹಿಳಾ ಸಂಘದ ಸದಸ್ಯರಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ