ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಆಚಾರ್ಯ ಶಂಕರರು ಮನುಕುಲ ಉದ್ಧಾರಕರಾಗಿ ಹಿಂದೂಧರ್ಮ ಉಳಿವಿಗಾಗಿ ತಮ್ಮಜೀವಿತಾವಧಿಯನ್ನು ಸವೆಸಿದ ಮಹಾನ್ ದೇವಾಂಶ ಸಂಭೂತರು ಎಂದು ವೇದಬ್ರಹ್ಮ ಅನಿಲ್‌ಶಾಸ್ತ್ರಿ ತಿಳಿಸಿದರು.ಪಟ್ಟಣದ ವಿಪ್ರ ಬಾಂಧವ ಸೇವಾ ಸಮಿತಿ ಹಮ್ಮಿಕೊಂಡಿದ್ದ ಆರಾಧನಾ ಮಹೋತ್ಸವದಲ್ಲಿ ಉಪನ್ಯಾಸ ನೀಡಿ, ಹಿಂದೂಧರ್ಮ ಅನ್ಯಧರ್ಮಗಳ ಪ್ರಭಾವ, ಹಾವಳಿಯಿಂದ ಅವನತಿ ಹಾದಿ ತಲುಪಿದಾಗ ಯುಗಪುರುಷರಂತೆ ಶಂಕರರು ಹಿಂದೂಧರ್ಮ ತಿಲಕವಾಗಿ ನಾಡಿನ ಉದ್ದಗಲಕ್ಕೂಧರ್ಮ ಪ್ರಚಾರ, ಉಪನ್ಯಾಸದಂತಹ ಕಾರ್ಯಕೈಗೊಂಡರು ಎಂದರು.
ಭರತ ಖಂಡದ ನಾಲ್ಕು ದಿಕ್ಕುಗಳಲ್ಲಿ ಶಕ್ತಿಪೀಠ, ಮಠಗಳನ್ನು ಸ್ಥಾಪಿಸಿದರು. ಇವರ ರಚನೆಯ ಉಪನಿಷತ್ ಭಾಷ್ಯ ಭಜಗೋವಿಂದಂ, ಸೌಂದರ್ಯ ಲಹರಿ ಸ್ತ್ರೋತ್ರಗಳು ಜಗತ್ಪ್ರಸಿದ್ಧವಾಗಿದೆ. ಬದುಕಿದ್ದು ಅತ್ಯಲ್ಪಅವಧಿಯಾದರೂ ವೇದ, ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದರು. ವೇದ, ಪೌರೋಹಿತ್ಯಎಲ್ಲ ವರ್ಣಕ್ಕೆ ಸೇರಿದೆಎಂದು ತಿಳಿಸಿ ದೇವಮಾನವರಾದರು ಎಂದು ನುಡಿದರು.ಸಪ್ತಾಹದ ಅಂತಿಮ ದಿನವಾದ ಭಾನುವಾರ ಸಾಮೂಹಿವಾಗಿ ವಿಪ್ರರು ಪಾದುಕೆ ಪೂಜೆ ಸಲ್ಲಿಸಿದರು. ಪಂಚಾಮೃತ ಅಭಿಷೇಕ, ರುದ್ರಾಭಿಷೇಕದಂತಹ ಸೇವೆಗಳು ನಡೆಯಿತು. ಮಹಿಳೆಯರು ಭಜಗೋವಿಂದಂ ಕೀರ್ತನೆ, ಸೌಂದರ್ಯಲಹರಿ ಸ್ತ್ರೋತ್ರಗಳನ್ನು ಪಠಿಸಿದರು. ಸಪ್ತಾಹಕ್ಕೆ ಸಹಕರಿಸಿದ ಗಣ್ಯರನ್ನುಗೌರವಿಸಲಾಯಿತು.
ಆರಾಧನಾ ಮಹೋತ್ಸವದ ನಿಮಿತ್ತ ಪ್ರಮುಖ ಬೀದಿಯಲ್ಲಿ ಶಂಕರರ ಭಾವಚಿತ್ರಕ್ಕೆ ಪುಷ್ಪಗಳಿಂದ ಅಲಂಕರಿಸಿ ಮೆರವಣಿಗೆ ಮಾಡಲಾಯಿತು. ಜಾಗಟೆ, ಮಂಗಳವಾದ್ಯದೊಂದಿಗೆ ಮೆರವಣಿಗೆ ಸಾಗಿತು. ಮಹಿಳೆಯರು ಶಂಕರ ನಾಮಪಠಣೆ ಮಾಡುತ್ತ ಮೆರವಣಿಗೆಯಲ್ಲಿ ಸಾಗಿದರು.ಅಂತಿಮವಾಗಿ ಶಂಕರರ ಭಾವಚಿತ್ರಕ್ಕೆ ಮಹಾ ಮಂಗಳಾರತಿ ಸಲ್ಲಿಸಲಾಯಿತು. ತೀರ್ಥ, ಅಕ್ಷತೆ, ಪುಷ್ಪ ಪ್ರಸಾದ ವಿತರಿಸಲಾಯಿತು. ಅನ್ನದಾಸೋಹ ಹಮ್ಮಿಕೊಳ್ಳಲಾಗಿತ್ತು. ಶಂಕರರ ಪಾದುಕೆಗೆ ಸರತಿಯಲ್ಲಿ ನಿಂತು ಪೂಜಿಸಲಾಯಿತು.
ಈ ವೇಳೆ ಕೆ.ಬಿ. ವೆಂಕಟೇಶ್, ಕೆ.ಎಸ್.ಅನಂತಸ್ವಾಮಿ, ನರಸಿಂಹ, ಮಹಾಬಲಶರ್ಮ, ಮಹಾಬಲರಾವ್, ಕೆ.ಎಸ್. ಪರಮೇಶ್ವರಯ್ಯ, ಡಾ.ಕೆ.ಎಸ್.ನಂಜುಂಡಸ್ವಾಮಿ, ಕೆ.ಎಸ್. ಸತ್ಯನಾರಾಯಣ, ಸೀತಾರಾಂ, ನಾಗೇಂದ್ರ, ರಾಮಣ್ಣ ಮಾಸ್ಟರ್, ಶ್ರೀಹರಿ, ಗಣೇಶರಾವ್, ಗಿರಿಜಮ್ಮ, ಸ್ವರ್ಣ, ಮೇಘಶ್ರೀ, ಸುಮಾ, ರತ್ನಮ್ಮ, ನಾಗರತ್ನಮ್ಮ, ನಂದಿನಿ, ಗೌರಮ್ಮ, ಸರಸ್ವತಿ, ಭಾಗ್ಯಮ್ಮ, ರಜಿನಿ, ಕಲಾವತಿ ಉಪಸ್ಥಿತರಿದ್ದರು.