ಕನ್ನಡಪ್ರಭ ವಾರ್ತೆ ಅಥಣಿ
ಛತ್ರಪತಿ ಶಿವಾಜಿ ಮಹಾರಾಜ ಹಿಂಧುವೀ ರಾಷ್ಟ್ರದ ಸೃಷ್ಟಿಕರ್ತ. ಎಲ್ಲರನ್ನು ಒಗ್ಗೂಡಿಸಿ ಭಾವೈಕ್ಯತೆಯ ಸಮಾಜದ ನಿರ್ಮಾಣದಲ್ಲಿ ಶಿವಾಜಿಯವರದ್ದು ಪ್ರಮುಖ ಪಾತ್ರ ಎಂದು ಕಾಂಗ್ರೆಸ್ ಯುವ ನಾಯಕ ಚಿದಾನಂದ ಸವದಿ ಹೇಳಿದರು. ಪಟ್ಟಣದಲ್ಲಿ ಶಿವಾಜಿ ಮಹಾರಾಜರ 394ನೇ ಜಯಂತಿಯನ್ನು ಶಿವಾಜಿ ವೃತ್ತದಲ್ಲಿ ನೂತನ ಅಶ್ವಾರೂಢ ಶಿವಾಜಿ ಮೂರ್ತಿ ಪ್ರತಿಷ್ಠಾಪಿಸಿ, ಅದಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರ ದೇಶಪ್ರೇಮ, ದೇಶ ಭಕ್ತಿ, ಅವರ ಶೌರ್ಯ, ಸಾಹಸ ಅಜರಾಮರ. ದೇಶದ ಇತಿಹಾದಲ್ಲಿ ಶಿವಾಜಿ ಮಹಾರಾಜರ ಪಾತ್ರ ಬಹುಮುಖ್ಯವಾದದ್ದು. ಸಾಮಾನ್ಯ ವ್ಯಕ್ತಿಯಾಗಿ ಜನಿಸಿದ ಶಿವಾಜಿ ಮಹಾರಾಜರು ಹಿಂದು ಸಾಮ್ರಾಜ್ಯ ಕಟ್ಟಿದರು. ಅವರ ಆದರ್ಶ, ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮುಂದಿನ ಪೀಳಿಗೆಗೆ ಅವರ ಬಗ್ಗೆ ತಿಳಿಸಬೇಕು. ಶಿವಾಜಿಯವರ ಶೌರ್ಯ, ಸಾಹಸದ ಅರಿಯುವುದೆ ಜಯಂತಿ ಆಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.ಹಿರಿಯ ಅರವಿಂದರಾವ್ ದೇಶಪಾಂಡೆ, ಮಾಜಿ ಶಾಸಕ ಶಹಜಾನ ಡೊಂಗರಗಾಂವ ಮಾತನಾಡಿದರು. ಮುರಗೇಶ ಕುಮಠಳ್ಳಿ, ನಾನಾಸಾಬ ಅವತಾಡೆ, ಗಿರೀಶ ಬುಟಾಳೆ, ಚಂದ್ರಕಾಂತ ಇಮ್ಮಡಿ, ಶ್ರೀಶೈಲ ನಾಯಿಕ, ಬಸವರಾಜ ಬುಟಾಳಿ, ಮರಾಠಾ ಸಮಾಜದ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ವಿನಾಯಕ ದೇಸಾಯಿ, ಮರಾಠಾ ಸಮಾಜದ ಮುಖಂಡ ಬಾಹುಸಾಹೇಬ ಜಾಧವ, ಸಂದೀಪ ಪಾಟೀಲ, ರವಿ ದೇಸಾಯಿ, ಶಿವಕುಮಾರ ಅಪರಾಜ, ಪುರಸಭೆ ಸದಸ್ಯ ರಾವಸಾಬ ಐಹೊಳೆ, ದತ್ತಾ ವಾಸ್ಟರ, ರಾಜು ಗುಡೋಡಗಿ, ಮಲ್ಲೇಶ ಹುದ್ದಾರ, ವಿಲೀನರಾಜ ಯಳಮಲಿ ಹಾಗೂ ರಾಜು ಬುಲಬುಲೆ, ಸಾಹಿತಿ ಅಪ್ಪಾಸಾಬ ಅಲಿಬಾದಿ, ಸೇರಿದಂತೆ ಮತ್ತಿತರ ಗಣ್ಯರು, ಅಥಣಿ ಹಾಗೂ ಕಾಗವಾಡ ತಾಲೂಕಿನ ಮರಾಠಾ ಸಮಾಜ ಮುಖಂಡರು ಹಾಗೂ ಸಮಾಜ ಬಾಂಧವರು ಇದ್ದರು.