ಶಿವಾಜಿ ಮಹಾರಾಜ, ಜೀಜಾಬಾಯಿ ಆದರ್ಶದ ಹಾದಿಯಲ್ಲಿ ಸಾಗೋಣ: ಸಚಿವ ಸಂತೋಷ ಲಾಡ್

KannadaprabhaNewsNetwork |  
Published : Feb 21, 2024, 02:04 AM IST
ಕಲಘಟಗಿ ಪಟ್ಟಣದ ಬೆಂಡಿಗೇರಿ ಓಣಿನಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿಯಲ್ಲಿ ಸಚಿವ ಸಂತೋಷ ಲಾಡ್ ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

. ಶಿವಾಜಿ ಮಹಾರಾಜರು ಎಲ್ಲ ಜಾತಿ ಧರ್ಮದವರಿಗೂ ಗೌರವ ನೀಡುತ್ತಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಕಲಘಟಗಿ: ಛತ್ರಪತಿ ಶಿವಾಜಿ ಮಹಾರಾಜರು ತಾಯಿ ಜೀಜಾಬಾಯಿಯವರ ಸ್ಫೂರ್ತಿಯಿಂದ ರಾಜ್ಯಕಟ್ಟಲು ಸಾಧ್ಯವಾಯಿತು. ಶಿವಾಜಿ ಜಯಂತಿಯಂದು ಮಾತೆ ಜೀಜಾಬಾಯಿ ಅವರನ್ನು ನೆನೆಯುವುದು ಅತ್ಯವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ನಿಮಿತ್ತ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಮಾತೆ ಜೀಜಾಬಾಯಿ ಅವರು ಹೆಣ್ಣು ಮಕ್ಕಳಿಗೆ ಆದರ್ಶಪ್ರಾಯರಾಗಿದ್ದಾರೆ. ಶಿವಾಜಿ ಮಹಾರಾಜರು ಎಲ್ಲ ಜಾತಿ ಧರ್ಮದವರಿಗೂ ಗೌರವ ನೀಡುತ್ತಿದ್ದರು. ವಿಶೇಷವಾಗಿ ಮಹಿಳೆಯರಿಗೆ ಸೂಕ್ತ ಗೌರವ, ರಕ್ಷಣೆ ನೀಡಿದ್ದರು. ಹಾಗಾಗಿ ಇಂತಹ ಕಾರ್ಯಕ್ರಮಗಳಲ್ಲಿ ಮಹಿಳೆಯರು ಹೆಚ್ಚೆಚ್ಚು ಪಾಲ್ಗೊಳ್ಳಬೇಕು ಎಂದು ಹೇಳಿದರು.

ಸರ್ವರಿಗೂ ಸಮಪಾಲು ಸಮಬಾಳು ಎಂಬ ದೇಶ ನಮ್ಮದು. ಭಾರತ ದೇಶ ಪುಣ್ಯಭೂಮಿಯಾಗಿದೆ. ಛತ್ರಪತಿ ಶಿವಾಜಿ ಹಾಗೂ ಜೀಜಾಬಾಯಿಯವರ ಆದರ್ಶದ ಹಾದಿಯಲ್ಲಿ ಎಲ್ಲರೂ ನಡೆಯಬೇಕು. ಎಲ್ಲ ಸಮಾಜ ಬಾಂಧವರು ಸೇರಿ ಶಿವಾಜಿ ಜಯಂತಿ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಪಟ್ಟಣದ ಬೆಂಡಿಗೇರಿ ಓಣಿನಲ್ಲಿ ಆಯೋಜಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿಯಲ್ಲಿ ಪಾಲ್ಗೊಂಡ ಸಚಿವ ಲಾಡ್, ಶಿವಾಜಿ ಮೂರ್ತಿಗೆ ಪುಷ್ಪಾರ್ಪನೆಗೈದರು. ಕಲಘಟಗಿ ವಿಧನಾಸಭಾ ಕ್ಷೇತ್ರ ವ್ಯಾಪ್ತಿಯ ಅಂಗವಿಲಕ ಫಲಾನುಭವಿಗಳಿಗೆ ತ್ರಿಚಕ್ರವಾಹನ ವಿತರಿಸಿದರು.

ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣನವರ, ತಾಪಂ ಇಒ ಪರಶುರಾಮ ಸಾವಂತ, ಪಪಂ ಮುಖ್ಯಾಧಿಕಾರಿ ದಾನೇಶ್ವರಿ ಪಾಟೀಲ, ಮರಾಠ ಸಮಾಜದ ಮುಖಂಡರಾದ ಪಾಂಡುರಂಗ ರಾಮಜೀ, ಬಾಬು ಅಂಚಟಗೇರಿ, ಫಕ್ಕಿರೇಶ ನೇಸರೇಕರ, ಮಹಾಂತೇಶ ತಹಶೀಲ್ದಾರ್, ದುಂಡಿಬಾ ತಾಂಬೆ, ಪರಶುರಾಮ ತಹಸೀಲ್ದಾರ್, ಚಂದ್ರು ಹುಲಿಹೊಂಡ, ಮಂಜುನಾಥ ಕೋಟಿ, ಬಸವರಾಜ ಬಾವಕರ, ನಾಗಪ್ಪ ಚವರಗುಡ್ಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಮುರಳ್ಳಿ, ಜಿಪಂ ಮಾಜಿ ಸದಸ್ಯ ಎಸ್.ಆರ್. ಪಾಟೀಲ, ನರೇಶ ಮಲೇನಾಡು, ಎಸ್.ವಿ. ತಡಸಮಠ, ಸಾತಪ್ಪ ಕುಂಕೂರು ಸೇರಿದಂತೆ ಇತರರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ