ಕನ್ನಡಪ್ರಭ ವಾರ್ತೆ ಲೋಕಾಪುರ
ಶಿವಾಜಿ ಮಹಾರಾಜರು ಸಮಸಮಾಜಕ್ಕಾಗಿ ಶ್ರದ್ಧೆ, ನಿಷ್ಠೆ ಹಾಗೂ ಪ್ರಮಾಣಿಕವಾಗಿ ಶ್ರಮಿಸಿದರು. ಅವರ ಈ ಆದರ್ಶ ಎಲ್ಲರಿಗೂ ಮಾದರಿ ಎಂದು ಪಟ್ಟಣದ ಮುಖಂಡ ಲೋಕಣ್ಣ ಕತ್ತಿ ಹೇಳಿದರು.ಪಟ್ಟಣದ ಶಿವಾಜಿ ವೃತ್ತದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಿಮಿತ್ತ ಮರಾಠ ಸಮಾಜದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಇಡೀ ಮಾನವ ಸಮುದಾಯದ ಏಳಿಗೆಗಾಗಿ ನಿಸ್ವಾರ್ಥದಿಂದ ಶ್ರಮಿಸಿದ್ದಾರೆ. ಶಿವಾಜಿ ಮಹಾರಾಜರ ಜೀವನ ಸಂದೇಶಗಳ ಬಗ್ಗೆ ಯುವ ಪೀಳಿಗೆಗೆ ಪರಿಚಯಿಸುವುದಲ್ಲದೆ,ಅವರ ಆದರ್ಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಯುವ ಮುಖಂಡ ಗುರುರಾಜ ಉದಪುಡಿ ಮಾತನಾಡಿ, ಸಮಾಜದ ಕಲ್ಯಾಣ, ದೇಶದ ರಕ್ಷಣೆಗಾಗಿ ಹೋರಾಡಿದ ಶಿವಾಜಿ ಮಹಾರಾಜರು ನಾಡಿಗಾಗಿ ಜೀವನವನ್ನೇ ಸಮರ್ಪಿಸಿದರು. ಶಿವಾಜಿಯ ಆಡಳಿತದಲ್ಲಿ ಸರ್ವಧರ್ಮಿಯರು ಅನ್ಯೋನ್ಯವಾಗಿದ್ದರು. ಅವರು ತಮ್ಮ ಶೌರ್ಯ, ಸಾಹಸಗಳಿಂದ ಜನರ ಹೃದಯಾಂತಾರಾಳದಲ್ಲಿ ದೇಶಪ್ರೇಮ ಮೂಡಿಸಿದ್ದಲ್ಲದೆ ಶೌರ್ಯ, ಧೈರ್ಯಕ್ಕೆ ಹೆಸರುವಾಸಿಯಾಗಿದ್ದರು ಎಂದರು.ಲೋಕಾಪುರ ಪಟ್ಟಣದ ಮರಾಠ ಸಮಾಜದ ಅಧ್ಯಕ್ಷ ವಿನೋದ ಘೋರ್ಪಡೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರು ಹಿಂದು ಸಾಮ್ರಜ್ಯ ಸ್ಥಾಪಿಸುವ ಮೂಲಕ ಪ್ರಪಂಚಕ್ಕೆ ಹಿಂದು ಧರ್ಮ ಪರಿಚಯಿಸಿದ ಜಗತ್ತು ಕಂಡ ಅಪ್ಪಟ ರಾಷ್ಟ್ರಪ್ರೇಮಿ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶವನ್ನು ಇಂದಿನ ಯುವಕರು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿದರು.
ಪಟ್ಟಣದ ಮುಖಂಡರಾದ ಎಂ.ಎಂ. ವಿರಕ್ತಮಠ, ವಿ.ಎಂ. ತೆಗ್ಗಿ, ಕಾಶಿನಾಥ ಹುಡೇದ, ಗುರುರಾಜ ಉದಪುಡಿ, ಯಮನಪ್ಪ ಹೊರಟ್ಟಿ, ಪ್ರಕಾಶ ಚುಳಕಿ, ರತ್ನಾಕರ ಬಾಸುತಕರ, ರಾಮಚಂದ್ರ ಘಾಟಗೆ, ಶಿವಾಜಿ ಶಿಂಧೆ, ನಾರಾಯಣ ಶಿಂಧೆ, ಮಲ್ಲಪ್ಪ ಅಂಗಡಿ, ಗುರು ಘಾಟಗೆ, ವಿಜಯಕಾಂತ ದೇಸಾಯಿ, ಮಲ್ಲಪ್ಪ ಅಂಗಡಿ, ಪ್ರಕಾಶ ಪಡತಾರೆ, ಕೆ.ಎನ್. ಪವಾರ, ಸುಭಾಸ ಹಂಚಾಟೆ, ಪ್ರದೀಪ ಪಡತಾರೆ, ಸುರೇಶ ನಲವಡೆ, ಕೃಷ್ಣಾ ಹಂಚಾಟೆ, ಕೃಷ್ಣಾ ಸಾಳುಂಕೆ, ಅಮೃತ ಚೋಪಡೆ, ಸುರೇಶ ಚವ್ಹಾಣ, ಸೋನು ಘೋರ್ಪಡೆ, ಭೀಮಶಿ ಅವರಾದಿ, ಅಪ್ಪಶಿ ಸೂರ್ಯವಂಶಿ, ಬಾಬು ಶಿಂಧೆ, ಪಿಂಟು ಕಲಾಲ್ ಹಾಗೂ ಲೋಕಾಪೂರ ಪಟ್ಟಣದ ಮರಾಠ ಸಮಾಜದ ಪದಾಧಿಕಾರಿಗಳು ಇದ್ದರು.