ಕನ್ನಡಪ್ರಭ ವಾರ್ತೆ ಪುತ್ತೂರು
ಶ್ರೀ ಅಯ್ಯಪ್ಪ ಸೇವಾ ಸಮಿತಿ ಅರಿಯಡ್ಕ ಕೌಡಿಚ್ಚಾರು ಹಾಗೂ ಶ್ರೀ ಕೃಷ್ಣ ಭಜನಾ ಮಂದಿರ ಕೌಡಿಚ್ಚಾರು ವತಿಯಿಂದ ಶ್ರೀ ಅಯ್ಯಪ್ಪ ಸ್ವಾಮಿಯ ದೀಪೋತ್ಸವ ಡಿ.೨೦ ಮತ್ತು ೨೧ರಂದು ಕೌಡಿಚ್ಚಾರು ಶ್ರೀಕೃಷ್ಣ ಮಂದಿರದ ವಠಾರದಲ್ಲಿ ನಡೆಯಲಿದೆ ಎಂದು ಶ್ರೀ ಕೃಷ್ಣ ಭಜನಾ ಮಂದಿರದ ಕೋಶಾಧಿಕಾರಿ ತಿಲಕ್ ರೈ ಕುತ್ಯಾಡಿ ಹಾಗೂ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಬಾಬು ಟಿ. ತಿಳಿಸಿದ್ದಾರೆ. ಅವರು ಬುಧವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ದೀಪೋತ್ಸವ ಕಾರ್ಯಕ್ರಮವು ಚಾಣ ಗುರುಸ್ವಾಮಿ ಆಲಂತಾಯ ಇವರ ಹಿರಿತನದಲ್ಲಿ ಬಾಬು ಗುರುಸ್ವಾಮಿ ಕಲ್ಲಡ್ಕ ಉಪಸ್ಥಿತಿಯಲ್ಲಿ ನಡೆಯಲಿದೆ. ಡಿ.೨೦ರಂದು ಬೆಳಗ್ಗೆ ಗಣಪತಿ ಹೋಮ, ಕೌಡಿಚ್ಚಾರು ನಾಗನ ಕಟ್ಟೆಯಲ್ಲಿ ನಾಗ ತಂಬಿಲ, ಮಂದಿರದಲ್ಲಿ ಶ್ರೀ ಕೃಷ್ಣ ದೇವರಿಗೆ ಪೂಜೆ ಮತ್ತು ಪ್ರಾರ್ಥನೆ, ಶ್ರೀ ಕೃಷ್ಣ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಸಂಜೆ ೫ ಕ್ಕೆ ಪೆರಿಗೇರಿ ಶ್ರೀ ಅಯ್ಯಪ್ಪ ಭಜನಾ ಮಂದಿರದಿಂದ ಪಾಲ್ ಕೊಂಬು ಮೆರವಣಿಗೆ ಕುಣಿತ ಭಜನೆ ಆರಂಭಗೊಂಡು ಕೌಡಿಚ್ಚಾರು ಭಜನಾ ಮಂದಿರವರೆಗೆ ನಡೆಯಲಿದೆ. ರಾತ್ರಿ ೮.೩೦ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ, ಅಯ್ಯಪ್ಪ ವ್ರತಧಾರಿಗಲಿಗೆ ಉಪಾಹಾರ ನಡೆಯಲಿದೆ. ಬಳಿಕ ಗಯಾಪದ ಕಲವಿದೆರ್ ಉಬಾರ್ ತಂಡದಿಂದ ನಾಗ ಮಾಣಿಕ್ಯ ನಾಟಕ ನಡೆಯಲಿದೆ. ರಾತ್ರಿ ೧೦.೩೦ಕ್ಕೆ ಅಗ್ನಿಸ್ಪರ್ಶ, ರಾತ್ರಿ ೧೧ ಗಂಟೆಗೆ ಅಪ್ಪ ಸೇವೆ ನಡೆಯಲಿದೆ. ಡಿ.೨೧ರಂದು ಪ್ರಾತಃಕಾಲ ೪ ಗಂಟೆಗೆ ಶ್ರೀ ಸ್ವಾಮಿಯ ಅಗ್ನಿ ಸೇವೆ, ೫ ಗಂಟೆಗೆ ಕರ್ಪೂರಾರತಿ, ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಯ್ಯಪ್ಪ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚೆನ್ನಾವರ, ಉಪಾಧ್ಯಕ್ಷ ಮೋಹನ್ ಟಿ., ಶ್ರೀ ಕೃಷ್ಣ ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ದೀಪಕ್ ಕುಲಾಲ್ ಕೌಡಿಚ್ಚಾರು ಇದ್ದರು.