ಬೇಲೂರು ಶ್ರೀ ಚನ್ನಕೇಶವಸ್ವಾಮಿಯ ದರ್ಶನ ಪಡೆದ ಕಾಂಗ್ರೆಸ್ ಅಭ್ಯರ್ಥಿ ಪಟೇಲ್ । ಕಾಂಗ್ರೆಸ್ ಕಾರ್ಯಕರ್ತರ ಜತೆ ಚರ್ಚೆಕನ್ನಡಪ್ರಭ ವಾರ್ತೆ ಬೇಲೂರು
ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ತಲುಪಿದ್ದು ಹಾಸನ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಲಿದೆ ಎಂದು ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶ್ರೆಯಸ್ ಪಟೇಲ್ ಹೇಳಿದರು.ಬೇಲೂರು ಶ್ರೀ ಚನ್ನಕೇಶವಸ್ವಾಮಿಯ ದರ್ಶನ ಪಡೆದು ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ನಂತರ ಕೆಲ ಮುಖಂಡರ ಮನೆಗಳಿಗೆ ತೆರಳಿ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮಾತನಾಡಿ, ‘ನಮ್ಮ ತಾತನವರ ಆಡಳಿತ ವೈಖರಿ ಮತ್ತು ಅವರು ಕ್ಷೇತ್ರಕ್ಕೆ ನೀಡಿದ ಜನಪರವಾದ ಕೆಲಸಗಳು ಎಲ್ಲರಿಗೂ ಗೊತ್ತಿದೆ. ಹೊಳೆನರಸೀಪುರದ ಜೆಡಿಎಸ್ ಕುಟುಂಬಕ್ಕೆ ಪ್ರಧಾನಿ, ಮುಖ್ಯಮಂತ್ರಿ, ಮಂತ್ರಿ, ಶಾಸಕರು, ಲೋಕಸಭಾ ಸದಸ್ಯ, ವಿಧಾನಪ ಪರಿಷತ್ ಸದಸ್ಯ ಹೀಗೆ ಎಲ್ಲಾ ಹುದ್ದೆಗಳನ್ನು ನೀಡಿದ್ದೀರಿ, ಅಂತೆಯೇ ಈ ಬಾರಿ ನನಗೆ ಆರ್ಶೀವಾದ ಮಾಡಿ, ಜಿಲ್ಲಾಧ್ಯಕ್ಷ ಇ.ಎಚ್.ಲಕ್ಷ್ಮಣ್, ಬಿ.ಶಿವರಾಂ, ಗ್ರಾನೈಟ್ ರಾಜಶೇಖರ್, ಬಿ.ಎಲ್.ಧರ್ಮೇಗೌಡ ಸೇರಿ ಹಲವು ಮುಖಂಡರ ಒಮ್ಮತದಿಂದ ಕಾಂಗ್ರೆಸ್ ಗೆಲುವಿಗೆ ಶ್ರಮಿಸಲಿದ್ದಾರೆ’ ಎಂದು ಹೇಳಿದರು.ಹಾಸನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಇ.ಎಚ್.ಲಕ್ಷ್ಮಣ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹಾಸನ ಕ್ಷೇತ್ರಕ್ಕೆ ಪ್ರಭಲ ಅಭ್ಯರ್ಥಿಯನ್ನು ನೀಡಿದ್ದಾರೆ. ಯುವಕರಿಗೆ ಆದ್ಯತೆ ಜತೆಗೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಗ್ರಾನೈಟ್ ರಾಜಶೇಖರ್ ಮಾತನಾಡಿ, ಕಳೆದ ೨೦ ವರ್ಷ ಇತಿಹಾಸ ಜಿಲ್ಲೆಯಲ್ಲಿ ಮರುಕಳಿಸುವುದು ಸತ್ಯವಾಗಿದೆ. ಇದಕ್ಕೆ ಕಾರಣ ಪುಟ್ಟಸ್ವಾಮೀಗೌಡರು ಎಲ್ಲಾ ಜಾತಿ,ಧರ್ಮ,ವರ್ಗದೊಂದಿಗೆ ಇಟ್ಟ ಅಭಿಮಾನ. ಮೊಮ್ಮಗ ಶ್ರೇಯಶ್ ಪಟೇಲ್ ಅವರಿಗೆ ಶ್ರೀರಕ್ಷೆ. ಎಲ್ಲ ಒಟ್ಟಾಗಿ ಕೂಡಿ ಕಾಂಗ್ರೆಸ್ ಬಾವುಟವನ್ನು ಹಾಸನ ಲೋಕಸಭಾ ಕ್ಷೇತ್ರದಲ್ಲಿ ಹಾರಿಸಬೇಕು ಎಂದರು.ಕೆಪಿಸಿಸಿ ಸದಸ್ಯ ಬಿ.ಎಲ್.ಧರ್ಮೇಗೌಡ ಮಾತನಾಡಿ, ಹಾಸನ ಲೋಕಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಉತ್ತಮ ಅಭ್ಯರ್ಥಿ ಶ್ರೇಯಸ್ ಪಟೇಲ್‌ರನ್ನು ನೀಡಿದ್ದಾರೆ. ಅವರ ತಾತಾ ಪುಟ್ಟಸ್ವಾಮಿಗೌಡ ಜನಪರ ಆಡಳಿತದ ವೈಖರಿ ಜಿಲ್ಲೆಗೆ ಮಾದರಿಯಾಗಿದ್ದು ಸುಮಾರು ೨ ಲಕ್ಷದ ಬಹುಮತದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್, ಗ್ರಾನೈಟ್ ರಾಜಶೇಖರ್, ಜಮಾಲ್ಲುದ್ಧಿನ್, ರತ್ಮಾ ಸತ್ಯನಾರಾಯಣ, ಜಾಕೀರ್ ಪಾಷ, ಚಿಕ್ಕಬ್ಯಾಡಿಗೆರೆ ಮಂಜುನಾಥ್, ಇಕ್ಬಾಲ್, ರಾಯಪುರ ಶಿವಣ್ಣ, ಕುಮಾರ್ ಇತರರು ಇದ್ದರು.ಹಾಸನ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಬೇಲೂರಿಗೆ ಆಗಮಿಸಿ ಚನ್ನಕೇಶವಸ್ವಾಮಿ ದರ್ಶನ ಪಡೆದು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದರು.