ಆಲೂರಿನ ಕಾಂಗ್ರೆಸ್‌ ಮುಖಂಡ ಭೇಟಿಯಾದ ಶ್ರೇಯಸ್ ಪಟೇಲ್‌

KannadaprabhaNewsNetwork | Published : Mar 18, 2024 1:45 AM

ಸಾರಾಂಶ

ಹಾಸನ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಹಾಸನ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೊನ್ನವಳ್ಳಿ ಗಣೇಶ್ ರವರ ಆಲೂರು ನಿವಾಸಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೊನ್ನವಳ್ಳಿ ಗಣೇಶ್ ಜತೆ ಮಾತುಕತೆ । ಬೆಂಬಲಕ್ಕೆ ಮನವಿಕನ್ನಡಪ್ರಭ ವಾರ್ತೆ ಆಲೂರು

ಹಾಸನ ಲೋಕಸಭಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಚಿವ ದಿವಂಗತ ಜಿ.ಪುಟ್ಟಸ್ವಾಮಿಗೌಡರ ಮೊಮ್ಮಗ ಶ್ರೇಯಸ್ ಪಟೇಲ್ ಹಾಸನ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೊನ್ನವಳ್ಳಿ ಗಣೇಶ್ ರವರ ನಿವಾಸಕ್ಕೆ ಭೇಟಿ ನೀಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಶ್ರೇಯಸ್ ಪಟೇಲ್ ಮಾತನಾಡಿ, ‘ನಾನು ನಮ್ಮ ತಾತ ಪುಟ್ಟಸ್ವಾಮಿಗೌಡರ ಆದರ್ಶಗಳನ್ನು ಮೈಗೂಡಿಸಿಕೊಂಡು ರಾಜಕೀಯ ಮಾಡುತ್ತ ಬಂದಿದ್ದೇನೆ. ನನಗೇನು ರಾಜಕೀಯ ಹೊಸದಲ್ಲ. ಹಲವು ಕಷ್ಟ-ಸುಖಗಳನ್ನು ಅನುಭವಿಸಿಕೊಂಡು ಬಂದಿರುವುದರಿಂದ ಜನರ ಕಷ್ಟಗಳನ್ನು ಅರ್ಥ ಮಾಡಿ ಕೊಳ್ಳಬಲ್ಲೆ. ನೀವು ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಮತ ನೀಡಿ ಆಶೀರ್ವದಿಸಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ’ ಎಂದು ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೊನ್ನವಳ್ಳಿ ಗಣೇಶ್ ಮಾತನಾಡಿ, ಶ್ರೇಯಸ್ ಪಟೇಲ್ ರವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೇವಣ್ಣ ವಿರುದ್ಧ ಕೆಲವೇ ಮತಗಳ ಅಂತರದಿಂದ ಪರಾಭವಗೊಂಡು ಇಡೀ ರಾಜ್ಯದ ಗಮನ ಸಳೆದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವಾರು ಗ್ಯಾರಂಟಿ ನೀಡಿದೆ. ಶ್ರೇಯಸ್ ಪಟೇಲ್ ರವರನ್ನು ಬೆಂಬಲಿಸುವ ಮೂಲಕ ಗೆಲುವು ಸಾಧಿಸೋಣ ಎಂದರು.

ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ, ತಾಲೂಕು ಕಾಂಗ್ರೆಸ್ ಎಸ್ಸಿ ಎಸ್ಟಿ ಅಧ್ಯಕ್ಷ ರವಿ, ರೈಮಾಂಡ್ ಡಿಸೋಜಾ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೇಬಿ, ಗಂಜಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚಂದ್ರಮುಖಿ ಸತೀಶ್, ಸದಸ್ಯ ಚೇತನ್, ಕಾರಗೋಡು ಗ್ರಾ.ಪಂ. ಸದಸ್ಯ ರವಿ, ಕಾಂಗ್ರೆಸ್ ಮುಖಂಡರಾದ ಅನಿಲ್ ಕುಮಾರ್, ಸಬಾಸ್ ರಾಯಪ್ಪ ಇದ್ದರು.ಹಾಸನ ಲೋಕಸಭಾ ಅಭ್ಯರ್ಥಿ ಶ್ರೇಯಸ್ ಪಟೇಲ್ ಆಲೂರಲ್ಲಿ ಹಾಸನ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹೊನ್ನವಳ್ಳಿ ಗಣೇಶ್ ಅವರನ್ನು ಭೇಟಿ ಮಾಡಿದರು.

Share this article