ಸ್ಯಾನಿಟೋರಿಯಂ ಆವರಣಕ್ಕೆ ಸಿದ್ದರಾಮಯ್ಯ ಹೆಲ್ತ್ ಹಬ್ ನಾಮಕರಣ: ಕೆ.ಹರೀಶ್‌ ಗೌಡ

KannadaprabhaNewsNetwork |  
Published : Mar 15, 2024, 01:17 AM IST
35 | Kannada Prabha

ಸಾರಾಂಶ

ನಾನು ಶಾಸಕನಾಗಿ ಗೆದ್ದ ಒಂದೇ ವಾರದಲ್ಲಿ ಡಾ. ನರೇಂದ್ರ ಅವರು ಬಂದು ಐ.ಎನ್‌.ಯು ಯೂನಿಟ್ ಮೈಸೂರಿಗೆ ತರಬೇಕೆಂದು ಒತ್ತಾಯಿಸಿದರು. ನಾನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದರಿಂದ 100 ಹಾಸಿಗೆ ಸಾಮಥ್ಯದ ಆಸ್ಪತ್ರೆ ನಿರ್ಮಾಣ ಮಾಡಲು ಬಜೆಟ್‌ ನಲ್ಲಿ ಹಣವನ್ನು ಇಟ್ಟಿದ್ದಾರೆ. ಅಲ್ಲದೆ 3 ಎಕರೆ ಜಾಗವನ್ನು ಸ್ಯಾನಿಟೋರಿಯಂ ಆವರಣದಲ್ಲಿ ನೀಡಿದ್ದಾರೆ. ಈ ವರ್ಷವೇ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಜಿಲ್ಲೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ನಂತರದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದವರು ಸಿದ್ದರಾಮಯ್ಯ ಅವರು, ಆದ್ದರಿಂದ ಕೆ.ಆರ್.ಎಸ್.ರಸ್ತೆಯಲ್ಲಿರುವ ಸ್ಯಾನಿಟೋರಿಯಂ ಆವರಣಕ್ಕೆ ಸಿದ್ದರಾಮಯ್ಯ ಹೆಲ್ತ್ ಹಬ್ ಎಂದು ನಾಮಕರಣ ಮಾಡಲಾಗುವುದು ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ. ಹರೀಶ್‌ ಗೌಡ ಹೇಳಿದರು.

ವಿಶ್ವ ಕಿಡ್ನಿ ದಿನಾಚರಣೆ ಅಂಗವಾಗಿ ಕೆ.ಆರ್. ಆಸ್ಪತ್ರೆಯ ನೆಫ್ರೋ ಯುರಾಲಜಿ ವಿಭಾಗ ಹಾಗೂ ಶಾರದಾ ವಿಲಾಸ ಫಾರ್ಮಸಿ ಕಾಲೇಜಿನ ವತಿಯಿಂದ ನಡೆದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಶಾಸಕನಾಗಿ ಗೆದ್ದ ಒಂದೇ ವಾರದಲ್ಲಿ ಡಾ. ನರೇಂದ್ರ ಅವರು ಬಂದು ಐ.ಎನ್‌.ಯು ಯೂನಿಟ್ ಮೈಸೂರಿಗೆ ತರಬೇಕೆಂದು ಒತ್ತಾಯಿಸಿದರು. ನಾನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿದ್ದರಿಂದ 100 ಹಾಸಿಗೆ ಸಾಮಥ್ಯದ ಆಸ್ಪತ್ರೆ ನಿರ್ಮಾಣ ಮಾಡಲು ಬಜೆಟ್‌ ನಲ್ಲಿ ಹಣವನ್ನು ಇಟ್ಟಿದ್ದಾರೆ. ಅಲ್ಲದೆ 3 ಎಕರೆ ಜಾಗವನ್ನು ಸ್ಯಾನಿಟೋರಿಯಂ ಆವರಣದಲ್ಲಿ ನೀಡಿದ್ದಾರೆ. ಈ ವರ್ಷವೇ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೈಸೂರು ನಗರಕ್ಕೆ ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಟ್ರಾಮಾ ಸೆಂಟರ್, ಹೆರಿಗೆ ಆಸ್ಪತ್ರೆ, ಆಯುರ್ವೇದಿಕ್ ಆಸ್ಪತ್ರೆಗಳನ್ನು ನಿರ್ಮಿಸಿ ಬಡಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಚಾಮರಾಜ ಕ್ಷೇತ್ರಕ್ಕೆ ಮೊದಲ ಬಜೆಟ್‌ ನಲ್ಲೇ 700 ಕೋಟಿ ರು. ಅನುದಾನ ಕೊಡುವುದರ ಜೊತೆಗೆ 75 ಕೋಟಿ ರು. ಗಳನ್ನು, ಕೆ.ಆರ್. ಆಸ್ಪತ್ರೆಯಲ್ಲಿ ಒಪಿಡಿ ನಿರ್ಮಾಣಕ್ಕೆ ನೀಡಿದ್ದಾರೆ. ಆದ್ದರಿಂದ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು.

ಡಾ.ಜೆ.ಬಿ. ನರೇಂದ್ರ, ಡಾ. ಎಚ್.ಪಿ ಶೋಭಾ, ಡಾ. ಶ್ರೀನಿವಾಸ್ ನಲ್ಲೂರ್, ಡಾ. ಹನುಮಂತ ಆಚಾರ್ ಜೋಶಿ, ಡಾ. ನಯಾಜ್ ಪಾಷಾ, ಡಾ. ರಾಜೇಂದ್ರ ಪ್ರಸಾದ್, ಡಾ. ಶಶಿಕಿರಣ್, ಡಾ. ಮಾನಸ, ಡಾ. ಸಮರ್ಥ್, ನಂದೀಶ್ ಪ್ರೀತಂ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ