ಹನುಮಂತನನ್ನು ಮುಟ್ಟಿದ ಸಿದ್ದರಾಮಯ್ಯ ರಾವಣ: ಶಾಸಕ ಆರೋಪ

KannadaprabhaNewsNetwork | Published : Jan 30, 2024 2:05 AM

ಸಾರಾಂಶ

ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದಾರೆ ಎನ್ನುತ್ತಾರೆ. ಸರ್ಕಾರಿ ಜಾಗ ಆದ್ರೆ ಅವರಪ್ಪನ ಮನೆ ಜಾಗ ಅಲ್ಲವಲ್ಲ. ಎಲ್ಲೆಲ್ಲಿ ಬೇರೆ ಬೇರೆ ಧ್ವಜ ಇದೆ ಅಲ್ಲೆಲ್ಲಾ ತೆಗೆಸಿದ್ದೀರಾ? ಹನುಮಂತನನ್ನು ಮುಟ್ಟಿದ ಸಿದ್ದರಾಮಯ್ಯ ರಾವಣ. ಸೀತೆಯನ್ನು ರಾವಣ ಹೊತ್ತುಕೊಂಡು ಹೋಗಿದ್ದಕ್ಕೆ ಹನುಮಂತ ಏನು ಮಾಡಿದ ಅಂತಾ ಇಡೀ ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್‌ನ ಅಧಃಪತನಕ್ಕೆ ನಾಂದಿ ಆಗುತ್ತದೆ ಎಂದು ಶಾಸಕ ಎಸ್.ಎನ್‌.ಚನ್ನಬಸಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಶಿವಮೊಗ್ಗ: ಹನುಮಂತನನ್ನು ಮುಟ್ಟಿದ ಸಿದ್ದರಾಮಯ್ಯ ರಾವಣ. ಸೀತೆಯನ್ನು ರಾವಣ ಹೊತ್ತುಕೊಂಡು ಹೋಗಿದ್ದಕ್ಕೆ ಹನುಮಂತ ಏನು ಮಾಡಿದ ಅಂತಾ ಇಡೀ ಜಗತ್ತಿಗೆ ಗೊತ್ತಿದೆ. ಕಾಂಗ್ರೆಸ್‌ನ ಅಧಃಪತನಕ್ಕೆ ನಾಂದಿ ಆಗುತ್ತದೆ ಎಂದು ಶಾಸಕ ಎಸ್.ಎನ್‌.ಚನ್ನಬಸಪ್ಪ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದ್ದಾರೆ ಎನ್ನುತ್ತಾರೆ. ಸರ್ಕಾರಿ ಜಾಗ ಆದ್ರೆ ಅವರಪ್ಪನ ಮನೆ ಜಾಗ ಅಲ್ಲವಲ್ಲ. ಎಲ್ಲೆಲ್ಲಿ ಬೇರೆ ಬೇರೆ ಧ್ವಜ ಇದೆ ಅಲ್ಲೆಲ್ಲಾ ತೆಗೆಸಿದ್ದೀರಾ ಎಂದು ಪ್ರಶ್ನಿಸಿದರು.

ರಾಷ್ಟ್ರಪತಿ ಅವರ ಬಗ್ಗೆ ಏಕವಚನ ಪದ ಬಳಕೆ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನುಷ್ಯತ್ವ ಇದೆಯಾ?ರಾಷ್ಟ್ರಪತಿ ಅವರಿಗೆ ಅಗೌರವ ಮಾಡ್ತಾರೆ ಅಂದ್ರೆ ಮುಖ್ಯಮಂತ್ರಿ ಆಗೋಕೆ ನಾಲಾಯಕ್‌. ನನ್ನ 40 ವರ್ಷಗಳ ರಾಜಕಾರಣದಲ್ಲಿ ಇಂತಹ ಸಿಎಂ ನೋಡಿಲ್ಲ. ಸಿಎಂ ಸಿದ್ದರಾಮಯ್ಯ ಈ ವರ್ತನೆಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಖಾರವಾಗಿ ಹೇಳಿದರು.

- - - -29ಎಸ್‌ಎಂಜಿಕೆಪಿ11: ಎಸ್‌.ಎನ್‌.ಚನ್ನಬಸಪ್ಪ. ಶಾಸಕ

- - -ಅಲ್ಪಸಂಖ್ಯಾತರ ಓಟಿಗಾಗಿ ಹಿಂದುಗಳ ಮೇಲೆ ಸರ್ಕಾರ ಪ್ರಹಾರ: ಜ್ಞಾನೇಂದ್ರ ಶಿವಮೊಗ್ಗ: ರಾಮನಿಂದಾಗಿ ಹಿಂದುಗಳು ಒಟ್ಟಾಗುತ್ತಿದ್ದಾರೆ ಎಂಬ ಭಾವನೆ ಮೂಡಿದೆ. ಹೀಗಾಗಿ, ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರ ಓಟಿಗಾಗಿ ಹಿಂದುಗಳ ಮೇಲೆ ಪ್ರಹಾರ ನಡೆಸುತ್ತಿದೆ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕಟುವಾಗಿ ಟೀಕಿಸಿದರು. ಶಿವಮೊಗ್ಗದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಕೆರೆಗೋಡಿನಲ್ಲಿ ತೀವ್ರತರವಾದ ಘರ್ಷಣೆ ಆಗಿದೆ. ಹನುಮ ಧ್ವಜವನ್ನು ಸರ್ಕಾರವು ಪೊಲೀಸರ ಬಿಟ್ಟು ತೆಗೆಸಿದೆ. ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ರಾಮ ಅಯೋಧ್ಯೆಯಲ್ಲಿ ‌ಪ್ರಾಣ ಪ್ರತಿಷ್ಠಾಪನೆ ನಂತರ ಕಾಂಗ್ರೆಸ್‌ ಸರ್ಕಾರ ವಿಚಿತ್ರವಾಗಿ ವರ್ತಿಸುತ್ತಿದೆ ಎಂದು ಆಪಾದಿಸಿದರು. ಕಾಂಗ್ರೆಸ್ ಹತಾಶ ಭಾವನೆಯಿಂದ ಕೂಡಿದೆ. ಪೊಲೀಸ್ ಬಳಸಿಕೊಂಡು ‌ಹಿಂಸೆ ಕೊಡುವ ಕೆಲಸ ಮಾಡಿದ್ದಾರೆ. ಸರ್ಕಾರಿ ಜಾಗದಲ್ಲಿ ಹನುಮ ಧ್ವಜ ಹಾರಿಸಿದರೆ ಇವರಿಗೇನು ತೊಂದರೆ? ಊರು ಊರಲ್ಲಿ, ಮನೆಗಳ ಮೇಲೆ ಹಸಿರುಧ್ವಜ ಹಾರಾಡುತ್ತಿವೆ, ಅವುಗಳನ್ನು ತೆಗೆಸಿದ್ದೀರಾ ಎಂದು ಪ್ರಶ್ನಿಸಿದರು. ಧ್ವಜದ ವಿಷಯದಲ್ಲಿ ಹಿಂದುಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕಿದೆ. ಕಾಂಗ್ರೆಸ್ ದೌರ್ಜನ್ಯ ನಿಲ್ಲಬೇಕಿದೆ. ರಾಷ್ಟ್ರ ಧ್ವಜ ಹಾರಿಸಲು ಒಂದು ನಿರ್ದಿಷ್ಟ ಸ್ಥಳ ಇದೆ. ರಾಷ್ಟ್ರಧ್ವಜವನ್ನು ಎಲ್ಲೆಂದರಲ್ಲಿ ಹಾರಿಸಲು ಬರಲ್ಲ. ಇದು ಇಡೀ ರಾಜ್ಯಕ್ಕೆ ಹಬ್ಬುತ್ತದೆ ಎಂದರು, - - - ಫೋಟೋ: ಆರಗ ಜ್ಞಾನೇಂದ್ರ

Share this article