ಸಿದ್ಧಾಂತ ಶಿಖಾಮಣಿ ಮನುಕುಲದ ಮಹಾಬೆಳಕು

KannadaprabhaNewsNetwork |  
Published : Apr 13, 2024, 01:04 AM IST
12ಡಿಡಬ್ಲೂಡಿ4ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮೋತ್ತೇಜಕ ಸಮಾರಂಭವನ್ನು ರಂಭಾಪುರಿ ಪೀಠದ ವೀರಸೋಮೇಶ್ವರ ಜಗದ್ಗುರುಗಳು ಉದ್ಘಾಟಿಸಿದರು.  | Kannada Prabha

ಸಾರಾಂಶ

ಸಿದ್ಧಾಂತ ಶಿಖಾಮಣಿಯಲ್ಲಿ ಎಲ್ಲಿಯೂ ನಿರ್ದಿಷ್ಟವಾಗಿ ವೀರಶೈವರನ್ನಷ್ಟೇ ಕೇಂದ್ರೀಕರಿಸಿ ವಿಷಯ ನಿರೂಪಣೆ ಮಾಡದೇ ಸಕಲರ ಲೇಸನ್ನು ಬಯಸಲಾಗಿದೆ. ಎಲ್ಲ ನೆಲೆಗಳಲ್ಲಿ ಮಾನವನ ಮಹೋನ್ನತಿಯನ್ನು ಅದು ಬಯಸಿದೆ.

ಧಾರವಾಡ:

ಸಕಲ ಜೀವಾತ್ಮರಿಗೂ ಅನ್ವಯವಾಗುವ ಅಧ್ಯಾತ್ಮ ಚಿಂತನೆಯ ಮೇರು ಮೌಲ್ಯಗಳ ನಿರೂಪಣೆಯೊಂದಿಗೆ ಮಾರ್ಗದರ್ಶನ ಮಾಡುವ ಶ್ರೇಷ್ಠ ಗ್ರಂಥ ಸಿದ್ಧಾಂತ ಶಿಖಾಮಣಿಯು ಮನುಕುಲದ ಮಹಾಬೆಳಕು ಎಂದು ರಂಭಾಪುರಿ ಪೀಠದ ಡಾ. ವೀರಸೋಮೇಶ್ವರ ಶಿವಾಚಾರ್ಯರು ಪ್ರತಿಪಾದಿಸಿದರು.

ತಾಲೂಕಿನ ಅಮ್ಮಿನಬಾವಿ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವವದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮೋತ್ತೇಜಕ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಅವರು, ಸಿದ್ಧಾಂತ ಶಿಖಾಮಣಿಯಲ್ಲಿ ಎಲ್ಲಿಯೂ ನಿರ್ದಿಷ್ಟವಾಗಿ ವೀರಶೈವರನ್ನಷ್ಟೇ ಕೇಂದ್ರೀಕರಿಸಿ ವಿಷಯ ನಿರೂಪಣೆ ಮಾಡದೇ ಸಕಲರ ಲೇಸು ಬಯಸಲಾಗಿದೆ. ಎಲ್ಲ ನೆಲೆಗಳಲ್ಲಿ ಮಾನವನ ಮಹೋನ್ನತಿಯನ್ನು ಅದು ಬಯಸಿದೆ. ಸರ್ವ ಜನಾಂಗಗಳ ಸಮೃದ್ಧಿಯನ್ನು ರೇಣುಕಾದಿ ಪಂಚಾಚಾರ್ಯರು ಹಾಗೂ ಪಂಚಪೀಠಗಳು ಬಯಸುತ್ತ ಬಂದಿವೆ ಎಂದರು.

ಧರ್ಮ, ಜಾತಿ, ಭಾಷೆ, ಪ್ರಾಂತಗಳ ಹೆಸರಿನಲ್ಲಿ ದುಷ್ಟ ಶಕ್ತಿಗಳು ಬದುಕಿನ ಸ್ನೇಹ ಭಾವನೆ ಕಲುಷಿತಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ಎಚ್ಚರಿಕೆಯಿಂದ ಆಲೋಚನೆ ಮಾಡಿ ಹೆಜ್ಜೆ ಹಾಕಬೇಕಾಗಿದೆ. ಭಾರತೀಯ ಸಂಸ್ಕೃತಿ, ಸಂಸ್ಕಾರ, ಧರ್ಮ ಪರಂಪರೆ, ಅಧ್ಯಾತ್ಮದ ಘನತೆ ಮರೆಯದೇ ದೇಶಾಭಿಮಾನದಿಂದ ಎಲ್ಲವನ್ನೂ ಸ್ಮರಣೆಯಲ್ಲಿಟ್ಟುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.

ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯರು ಮಾತನಾಡಿದರು. ಮೈಸೂರು ಅರಮನೆ ಜಪದಕಟ್ಟಿಮಠದ ಚಂದ್ರಶೇಖರ ಶಿವಾಚಾರ್ಯರು, ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಸ್ವಾಮೀಜಿ ಉಪದೇಶ ನೀಡಿದರು. ವಿವಿಧ ಮಠಾಧೀಶರಾದ ಶಿವಲಿಂಗ ರುದ್ರಮುನಿ, ಪರ್ವತೇಶ್ವರ ಶಿವಾಚಾರ್ಯರು, ಗುರುಲಿಂಗ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು ಇದ್ದರು.

ತಾಪಂ ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ಅಣು ವಿಜ್ಞಾನಿ ಎಸ್.ಆರ್. ಶಿವಯ್ಯನಮಠ, ಎನ್.ಜಿ. ಪಾಟೀಲ, ಬಸಯ್ಯ ಚಿಕ್ಕಮಠ, ಬಸವರಾಜ ಕಲ್ಯಾಣಪುರ, ಬಸವರಾಜ ಹೊಂಗಲಮಠ, ಇಂದುಮತಿ ಸುಣಕದಮಠ, ಲೋಚನಸಿಂಗ್ ಭಾತಖಂಡೆ, ರುದ್ರಮ್ಮ ಬಸಯ್ಯ ಗುಡಿ, ಗೂಳಪ್ಪ ಉಂಡೋಡಿ, ಮಂಜುನಾಥ ಲಿಗಾಡೆ ಅವರಿಗೆ ಗುರುರಕ್ಷೆ ನೀಡಲಾಯಿತು. ಗುರುಮೂರ್ತಿ ಯರಗಂಬಳಿಮಠ ಸ್ವಾಗತಿಸಿದರು. ಶ್ರೇಯಾಂಶ ದೇಸಾಯಿ, ಬಸವರಾಜ ಇಟಗಿ, ಸೋಮಲಿಂಗಶಾಸ್ತ್ರಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ