ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘದ ಬೆಳ್ಳಿ ಮಹೋತ್ಸವ ಆಚರಣೆ

KannadaprabhaNewsNetwork |  
Published : May 25, 2026, 02:45 AM IST
ಚಿತ್ರ.1: ಸರಕಾರಿ ಪ್ರೌಢಶಾಲೆ ಶೇಕಡ 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಯ ಅತಿ ಹೆಚ್ಚು ಅಂಕಗಳನ್ನು ಪಡೆದ ಮೊದಲ 10 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸಂಘದ ವತಿಯಿಂದ ಸನ್ಮಾನಿಸುತ್ತಿರುವುದು. | Kannada Prabha

ಸಾರಾಂಶ

ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘದ ವತಿಯಿಂದ ಬೆಳ್ಳಿ ಮಹೋತ್ಸವ ಆಚರಣೆ ಸಂದರ್ಭ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಸುಂಟಿಕೊಪ್ಪ ವರ್ಕ್ ಶಾಪ್ ಮಾಲೀಕರ ಸಂಘದ ವತಿಯಿಂದ ಬೆಳ್ಳಿ ಮಹೋತ್ಸವ ಆಚರಣೆ ಸಂದರ್ಭ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರನ್ನು ಸನ್ಮಾನಿಸಲಾಯಿತು.

ಸುಂಟಿಕೊಪ್ಪ ಕೊಡವ ಸಮಾಜದಲ್ಲಿ ಭಾನುವಾರ ನಡೆದ ಬೆಳ್ಳಿ ಮಹೋತ್ಸವನ್ನು ಉದ್ಘಾಟಿಸಿದ ಸರ್ಕಾರಿ ಪ್ರೌಢಶಾಲೆಯ ಉಪ ಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮನೋಭಾವನೆಯನ್ನು ಬೆಳಿಸಿಕೊಂಡು ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ರೀತಿಯಲ್ಲಿ ಸಮಾಜಮುಖಿಯಾಗಿ ಬಾಳಿ ಎಂದು ಕರೆ ನೀಡಿದರು.ರಾಜ್ಯ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರಾದ ರೆಹನಾ ಸುಲ್ತಾನ್ ಮಾತನಾಡಿ, ವರ್ಕ್ ಶಾಪ್ ಮಾಲೀಕರ ಸಂಘವು ಸರಕಾರಿ ಶಾಲೆಯ ಮಕ್ಕಳನ್ನು ಸನ್ಮಾನಿಸುವ ಮೂಲಕ ಅನುಸರಣೆಯ ಮಾದರಿಯನ್ನು ಹುಟ್ಟು ಹಾಕಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘದ ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ 25 ವರ್ಷಗಳ ಬೆಳವಣಿಗೆಯ ಹಾದಿ ವಿವರಿಸಿದರು. ಮಾಜಿ ಅಧ್ಯಕ್ಷ ವಿ.ಎಸ್. ಸಂತೋಷ್ ಮತ್ತು ಕೆ.ಪಿ. ವಿನೋದನ್ ಮಾತನಾಡಿದರು. ವರ್ಕ್‌ ಶಾಪ್‌ ಮಾಲೀಕರ ಸಂಘದ ಅಧ್ಯಕ್ಷ ಬಿ.ಎಸ್. ರಮೇಶ್ ಅಧ್ಯಕ್ಷತೆ ವಹಿಸಿದ್ದರು.ಸರ್ಕಾರಿ ಪ್ರೌಢಶಾಲೆ ಶೇ. 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಶಾಲೆಯ ಅತಿ ಹೆಚ್ಚು ಅಂಕಗಳನ್ನು ಪಡೆದ ಮೊದಲ 10 ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಬಿ.ಸಿ. ದಿನೇಶ್, ವರ್ಕ್ ಶಾಪ್ ಮಾಲೀಕರ ಸಂಘದ ಹಿರಿಯ ಸದಸ್ಯ ಸೋಮಣ್ಣ ಇದ್ದರು.ವಿವಿಧ ಕ್ಷೇತ್ರಗಳ ಸಾಧಕರಾದ ಉಪ ಪ್ರಾಂಶುಪಾಲ ಬಾಲಕೃಷ್ಣ, ಪ್ರೌಢಶಾಲೆ ಶಿಕ್ಷಕಿ ಎಂ.ಪಿ. ಲಿಯೋನ ಸಬಾಸ್ಟಿನ್, ಹಿರಿಯ ಪತ್ರಕರ್ತ ಹಾಗೂ ಸಂಘದ ಹಿರಿಯ ಸದಸ್ಯರಾದ ಸೋಮಣ್ಣನವರನ್ನು ಸನ್ಮಾನಿಸಲಾಯಿತು.ಪಿ.ಆರ್. ಸುನಿಲ್‌ ಕುಮಾರ್ ಸ್ವಾಗತಿಸಿ, ಎಂ.ಎಸ್. ಸುನಿಲ್ ಕಾರ್ಯಕ್ರಮ ನಿರೂಪಿಸಿ, ಪಿ.ಆರ್. ಸುಕುಮಾರ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂದಾಪುರ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 12ನೇ ಶಾಖೆ ಉದ್ಘಾಟನೆ
ಕಾನೂನು ಅರಿವು ಅಗತ್ಯ: ಮುಕ್ತಾಬಾಯಿ