ಸರಳತೆ, ಸೌಜನ್ಯದ ಮೇರು ನಟ ರಾಜಕುಮಾರ

KannadaprabhaNewsNetwork |  
Published : Apr 24, 2025, 11:49 PM IST
24ಕೆಪಿಎಲ್23 ವರನಟ ಡಾ. ರಾಜಕುಮಾರ ಅವರ 97 ನೇ ಜನದಿನವನ್ನು ಡಾ. ರಾಜಕುಮಾರ ಅಭಿಮಾನಿಗಳು ಗುರುವಾರ ಅಶೋಕ ವೃತ್ತದ ಹತ್ತಿರ ಡಾ. ರಾಜಕುಮಾರ ರಸ್ತೆ ನಾಮಫಲಕ ಬಳಿ ಆಚರಿಸಿದರು. | Kannada Prabha

ಸಾರಾಂಶ

ಡಾ. ರಾಜಕುಮಾರ ನಟರಾಗಿರಲಿಲ್ಲ‌. ಸರಳತೆ, ಸೌಜನ್ಯತೆಯಿಂದ ಹಾಗೂ ಕನ್ನಡಿಗರನ್ನು ದೇವರೆಂದು ಭಾವಿಸಿದ್ದ ವ್ಯಕ್ತಿಯಾಗಿದ್ದರು. ಡಬ್ಬಿಂಗ್ ವಿರೋಧಿ ಹೋರಾಟದ ಮೂಲಕ ಕನ್ನಡ ಚಿತ್ರರಂಗ ಉಳಿವಿಗೆ ಹಾಗೂ ಗೋಕಾಕ ಚಳವಳಿ ಮೂಲಕ ಕನ್ನಡಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದರು.

ಕೊಪ್ಪಳ:

ನಟ ಡಾ. ರಾಜಕುಮಾರ ಜನ್ಮದಿನವನ್ನು ಅವರ ಅಭಿಮಾನಿಗಳು ಗುರುವಾರ ಅಶೋಕ ವೃತ್ತದ ಬಳಿಯ ರಾಜಕುಮಾರ ರಸ್ತೆ ನಾಮಫಲಕ ಬಳಿ ಆಚರಿಸಿದರು.

ಕಾಯಕ ಯೋಗಿ ಖ್ಯಾತಿಯ ಶಿವಪ್ಪ ಹಡಪದ ರಾಜಕುಮಾರ ರಸ್ತೆ ನಾಮಫಲಕ ಅನಾವರಣಗೊಳಿಸಿದರು. ಚಲನಚಿತ್ರ ಅಕಾಡೆಮಿ ಸದಸ್ಯೆ ಸಾವಿತ್ರಿ ಮುಜುಮದಾರ, ಸಾಹಿತಿ ಡಾ. ಮಹಾಂತೇಶ ಕೊತಬಾಳ, ಹೋರಾಟಗಾರ ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ ಕೇಕ್ ಕತ್ತರಿಸಿದರು.

ಆನಂತರ ಪ್ರವಾಸಿ ಮಂದಿರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಡಾ. ರಾಜಕುಮಾರ ನಟರಾಗಿರಲಿಲ್ಲ‌. ಸರಳತೆ, ಸೌಜನ್ಯತೆಯಿಂದ ಹಾಗೂ ಕನ್ನಡಿಗರನ್ನು ದೇವರೆಂದು ಭಾವಿಸಿದ್ದ ವ್ಯಕ್ತಿಯಾಗಿದ್ದರು. ಡಬ್ಬಿಂಗ್ ವಿರೋಧಿ ಹೋರಾಟದ ಮೂಲಕ ಕನ್ನಡ ಚಿತ್ರರಂಗ ಉಳಿವಿಗೆ ಹಾಗೂ ಗೋಕಾಕ ಚಳವಳಿ ಮೂಲಕ ಕನ್ನಡಕ್ಕೆ ಬಹುದೊಡ್ಡ ಕೊಡುಗೆ ನೀಡಿದ್ದರು. ಕುವೆಂಪು ಹಾಗೂ ಡಾ. ರಾಜಕುಮಾರ ಅವರು ಜ್ಞಾನ, ಕ್ರಿಯೆ, ನಡೆ-ನುಡಿ ಮೂಲಕ ಕನ್ನಡ ನಾಡಿಗೆ ಆದರ್ಶದ ದೀಕ್ಷೆ ನೀಡಿದವರು ಎಂದರು.

ಕೊಪ್ಪಳದಲ್ಲಿ ರಾಜಕುಮಾರ ಅಭಿಮಾನಿಗಳ ಸಂಘ ಸ್ಥಾಪನೆ ಹಾಗೂ ಗೋಕಾಕ ಚಳವಳಿಗೆ ರಾಜಕುಮಾರ ಆಗಮನಕ್ಕೆ ಶ್ರಮಿಸಿದ್ದ ಮಹಾಂತೇಶ ಕೊತಬಾಳ, ಲಿಂಗರಾಜ ನವಲಿ, ಮಹಾಂತೇಶ ಮಲ್ಲನಗೌಡರ, ರಾಜಶೇಖರ ಏಳುಬಾವಿ, ಶಿವರಡ್ಡಿ ಬಾಣದ, ಬಸವರಾಜ ಶೀಲವಂತರ ಅವರನ್ನು ಸಾವಿತ್ರಿ ಮುಜುಮದಾರ ಸನ್ಮಾನಿಸಿದರು. ಅಂಚೆ ಕರೋಕೆ ಬಳಗದಿಂದ ಡಾ. ರಾಜಕುಮಾರ ಅವರ ಚಲನಚಿತ್ರ ಗೀತೆಗಳ ಗಾಯನ ನಡೆಯಿತು.

ಕಾರ್ಯಕ್ರಮದಲ್ಲಿ ಪ್ರಧಾನ ಅಂಚೆ ಕಚೇರಿ ಪಾಲಕ ನಾಗರಾಜ. ಬಿ, ಅಂಚೆ ನಿರೀಕ್ಷಕ ಮಹಾಂತೇಶ ತೊಗರಿ, ಸಕ್ರಪ್ಪ ಹೂಗಾರ, ಸವೋತ್ತಮ ಉಪಾಧ್ಯಾಯ, ಸಾಹಿತಿ ಡಿ.ಎಂ. ಬಡಿಗೇರ, ಮಾಲಾ ಬಡಿಗೇರ, ಸಂಜಯದಾಸ್, ಮಲ್ಲಿಕಾರ್ಜುನ ಜಾನೇಕಲ್, ಅಂದಪ್ಪ ಬೆಣಕಲ್, ನಾಗರಾಜ ನಾಯಕ ಡೊಳ್ಳಿನ, ಪ್ರಾಣೇಶ ಪೂಜಾರ, ವೈ. ವೈ. ಕೊಳೂರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ