ತರೀಕೆರೆ: ಗೋವಾದಲ್ಲಿ ನಡೆಯಲಿರುವ 37ನೇ ನ್ಯಾಷನಲ್ ಗೇಮ್ಸ್ ಗೆ ಕರ್ನಾಟಕ ಸೆಪಕ್ ಟಕ್ರಾ ಕ್ರೀಡೆಗೆ ಕ್ಯಾಪ್ಟನ್ ಆಗಿ ಪಟ್ಟಣದ ಕ್ರೀಡಾಪಟು ಸಿಂಧು ಆನಂದ್ ಆಯ್ಕೆಯಾಗಿದ್ದಾರೆ. ಅ.29 ರಿಂದ ನ.3 ರ ವರೆಗೆ ಈ ಕ್ರೀಡಾಕೂಟ ನಡೆಯಲಿದ್ದು ಸೆಪಕ್ ಟಕ್ರಾ ಕ್ರೀಡೆಗೆ ರಾಜ್ಯದಿಂದ ಆರು ಜನ ಕ್ರೀಡಾಪಟುಗಳು ಆಯ್ಕೆಯಾಗಿದ್ದು ಕರ್ನಾಟಕ ತಂಡದ ಕ್ರೀಡಾ ತರಬೇತುದಾರರಾಗಿ ಕೇಶವ ಸೂರ್ಯವಂಶಿ ಹಾಗೂ ವ್ಯವಸ್ತಾಪಕರಾಗಿ ಎಚ್.ಎನ್. ಸ್ವಾಮಿ ಆಯ್ಕೆಯಾಗಿದ್ದಾರೆ. ಸಿಂಧು ಪಟ್ಟಣದ ಪುರಸಭೆ ಮಾಜಿ ಸದಸ್ಯ ಕುಟ್ಟಿ ಆನಂದ್ ಪುತ್ರಿ. 28ಕೆಟಿಆರ್.ಕೆ.1ಃ ಸಿಂದು ಆನಂದ್