ಭಿನ್ನಾಭಿಪ್ರಾಯ ಮರೆತು ಮತ್ತೆ ಒಂದಾದ ಆರು ಜೋಡಿ

KannadaprabhaNewsNetwork |  
Published : Mar 18, 2024, 01:52 AM ISTUpdated : Mar 18, 2024, 01:53 AM IST
17ಕೆಪಿಎಲ್27ಗಂಗಾವತಿಯ ನ್ಯಾಯಾಲಯದಲ್ಲಿ ನಡೆದ ಲೋಕಅದಾಲತ್ ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಆರು ಜೋಡಿಗಳು ಮತ್ತೆ ಒಂದಾಗಿದ್ದಾರೆ. | Kannada Prabha

ಸಾರಾಂಶ

ಕೌಟುಂಬಿಕ ಭಿನ್ನಾಭಿಪ್ರಾಯ ವಿಕೋಪಕ್ಕೆ ಹೋಗಿ, ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲು ಏರಿದ್ದ ಆರು ಜೋಡಿಗಳ ಮನವೊಲಿಸಿದ ಪರಿಣಾಮ ಭಿನ್ನಾಭಿಪ್ರಾಯ ಮರೆತು ಮತ್ತೆ ಜೊತೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಗಂಗಾವತಿ

ಕೌಟುಂಬಿಕ ಭಿನ್ನಾಭಿಪ್ರಾಯ ವಿಕೋಪಕ್ಕೆ ಹೋಗಿ, ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲು ಏರಿದ್ದ ಆರು ಜೋಡಿಗಳ ಮನವೊಲಿಸಿದ ಪರಿಣಾಮ ಭಿನ್ನಾಭಿಪ್ರಾಯ ಮರೆತು ಮತ್ತೆ ಜೊತೆಯಾಗಿದ್ದಾರೆ.

ನಗರದ ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ಮತ್ತು ವಕೀಲರು ಮನವೊಲಿಸಿದ ಪರಿಣಾಮ ತಮ್ಮಲ್ಲಿದ್ದ ವೈಮನಸ್ಸನ್ನು ಬಿಟ್ಟಾಕಿ, ಮತ್ತೆ ಜೊತೆಯಾಗುವ ನಿರ್ಧಾರ ಮಾಡಿದರು.

ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಹುಲಿಹೈದರ್ ಗ್ರಾಮದ ಭರಮಣ್ಣ- ಅಂಬಮ್ಮ, ಜಂಗಮರ ಕಲ್ಗುಡಿ ಗ್ರಾಮದ ಶಿವಮ್ಮ- ಗುಲಪ್ಪ, ಸಿದ್ದಾಪುರ ಗ್ರಾಮದ ರಾಘವೇಂದ್ರ- ಎಂ. ತ್ರಿವೇಣಿ, ಬಾಗಲಕೋಟೆಯ ರಾಜೇಶ- ಜ್ಯೋತಿ, ಚಿಕ್ಕಡಂಕನಕಲ್ ಬಸವರಾಜ- ಲಕ್ಷ್ಮಿ, ಗೋಡಿನಾಳದ ಶಿವಲಿಂಗಮ್ಮ- ಮುತ್ತಣ್ಣ ಎಂಬ ದಂಪತಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಸಾಕಷ್ಟು ಸಮಯವಕಾಶ ನೀಡಿ, ಪರಸ್ಪರ ತಿಳಿಹೇಳಿ, ಒಂದಾಗುವುದರಿಂದ ಆಗುವ ಲಾಭವನ್ನು ಉದಾಹರಣೆ ಸಮೇತ ವಿವರಣೆ ಮಾಡಲಾಗಿತ್ತು. ಪರಿಣಾಮ ಲೋಕ ಅದಾಲತ್‌ನಲ್ಲಿ ಮತ್ತೆ ಈ ಆರು ಜೋಡಿ ಒಂದಾಗಿ, ಬದುಕು ಸಾಗಿಸಲು ಮುಂದಾಗಿದ್ದು, ನ್ಯಾಯಾಧೀಶರು, ವಕೀಲರು ಶುಭ ಹಾರೈಸಿದ್ದಾರೆ.

ಗಂಗಾವತಿ ತಾಲೂಕು ನ್ಯಾಯಾಲಯದಲ್ಲಿ ಒಟ್ಟು 9493 ಬಾಕಿ ಪ್ರಕರಣಗಳಿದ್ದು, ರಾಷ್ಟ್ರೀಯ ಲೋಕ ಆದಾಲತ್‌ನಲ್ಲಿ ಅಪಘಾತ ವಿಮೆ, ನೀರಿನ ಬಿಲ್, ಬ್ಯಾಂಕ್ ಸಾಲ ವಸೂಲಿ, ಮನೆಕರ, ಕೌಟುಂಬಿಕ ದೌರ್ಜನ್ಯ, ಜೀವನಾಂಶ, ಚೆಕ್ ಬೌನ್ಸ್, ಜನನ ಪ್ರಕರಣ, ಕ್ರಿಮಿನಲ್ ಕೇಸ್ ಸೇರಿ 1796 ಪ್ರಕರಣಗಳನ್ನ ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು.

ಆದರೆ 4 ನ್ಯಾಯಾಲಯಗಳಲ್ಲಿ ಸೇರಿ ಮೋಟಾರು ವಾಹನ, ಬ್ಯಾಂಕ್, ಜನನ-ಮರಣ, ಚೆಕ್ ಬೌನ್ಸ್, ಕ್ರಿಮಿನಲ್, ವೈವಾಹಿಕ 1160 ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ.

ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್, ಹಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರಮೇಶ್ ಎಸ್. ಗಾಣಿಗೇರಾ, ಪ್ರಧಾನ ಸಿವಿಲ್ ನ್ಯಾಯಾಧೀಶೆ ಶ್ರೀದೇವಿ ದರ್ಬಾರೇ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ, ವಕೀಲರು, ಅರ್ಜಿದಾರರು, ಎಸ್‌ಬಿಐ, ಕೆನರಾ ಬ್ಯಾಂಕ್, ಫೈನಾನ್ಸ್ ಸಂಸ್ಥೆಯ ಸಿಬ್ಬಂದಿ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ