ಸಾಮಾಜಿಕ ಹರಿಕಾರ ಬಸವಣ್ಣ

KannadaprabhaNewsNetwork | Published : Nov 13, 2024 12:49 AM

ಸಾರಾಂಶ

12ನೇ ಶತಮಾನದಲ್ಲಿ ಉಳ್ಳವರ ಸೊತ್ತಾಗಿದ್ದ ಶಿಕ್ಷಣ, ಜ್ಞಾನ, ಉನ್ನತಿಯನ್ನು ಸಮಾಜದ ಎಲ್ಲ ವರ್ಗದವರಿಗೂ ಹಂಚಿದ ಕೀರ್ತಿ ವಚನಕಾರ, ಸಮಾಜ ಸುಧಾರಕ, ಉತ್ತಮ ಆಡಳಿತಗಾರ ಬಸವಣ್ಣನಿಗೆ ಸಲ್ಲುತ್ತದೆ ಎಂದು ಬೃಹತ್ ಕೈಗಾರಿಗಾ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

12ನೇ ಶತಮಾನದಲ್ಲಿ ಉಳ್ಳವರ ಸೊತ್ತಾಗಿದ್ದ ಶಿಕ್ಷಣ, ಜ್ಞಾನ, ಉನ್ನತಿಯನ್ನು ಸಮಾಜದ ಎಲ್ಲ ವರ್ಗದವರಿಗೂ ಹಂಚಿದ ಕೀರ್ತಿ ವಚನಕಾರ, ಸಮಾಜ ಸುಧಾರಕ, ಉತ್ತಮ ಆಡಳಿತಗಾರ ಬಸವಣ್ಣನಿಗೆ ಸಲ್ಲುತ್ತದೆ ಎಂದು ಬೃಹತ್ ಕೈಗಾರಿಗಾ ಸಚಿವರ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಮಹಾಂತೇಶ ಬಿರಾದಾರ ಹೇಳಿದರು.

ನಗರದ ಸಿಕ್ಯಾಬ್ ಸಂಸ್ಥೆ ಹಾಗೂ ಅಖಿಲಭಾರತ ಶೈಕ್ಷಣಿಕ ಆಂದೋಲನದ ಅಡಿಯಲ್ಲಿ ಹಮ್ಮಿಕೊಂಡ ಶೈಕ್ಷಣಿಕ ಸಮ್ಮೇಳನದ 12ನೇ ದಿವಸದ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಕುರಿತಾದ ಗೋಷ್ಠಿಯಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದ ಅವರು, ವರ್ಗ, ವರ್ಣ, ಲಿಂಗ, ಸಮಾನತೆ ತತ್ವದ ಮೇಲೆ ಬಸವಣ್ಣವರು ಸಮಾಜದ ಸರ್ವರೂ ಜ್ಞಾನವಂತರಾಗಿ ಬದುಕುಬೇಕು. ಶಿಕ್ಷಣದಿಂದಲೇ ಸಮಾಜ ಸುಧಾರಣೆ ಸಾಧ್ಯ. ಕಾಯಕ, ದಾಸೋಹ ತತ್ವಗಳನ್ನು ಸಾರ್ವತ್ರಿಕರಣಗೊಳಿಸಿ ಸರ್ವರೂ ಮಾನವೀಯ ನೆಲೆಯಲ್ಲಿ ಬದುಕಬೇಕು ಎಂದು ತಿಳಿಸಿದರು.ಉಪನ್ಯಾಸಕ ವಿಶ್ರಾಂತ ಪ್ರಾಚಾರ್ಯ ಡಾ.ಮಹ್ಮದ್‌ಅಫ್ಜಲ್ ಅವರು ಮುಸ್ಲಿಂರಲ್ಲಿ ಸಾಕ್ಷರತೆ ಹಾಗೂ ಪದವೀಧರರ ಪ್ರಮಾಣ ಕುರಿತು ಮಾತನಾಡಿ, ಸಮುದಾಯದ ಜನರಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಪ್ರಮಾಣದಲ್ಲಿದೆ. ಪದವಿ ಪಡೆದವರು ಇನ್ನು ಕಡಿಮೆಯಾಗಿದ್ದಾರೆ. ಇದರ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.ನಿವೃತ್ತ ಪ್ರಾಚಾರ್ಯ ಡಾ.ರೊಶನ್ ಆರಾ ಅವರು ಮುಸ್ಲಿಂ ಮಹಿಳಾ ಶಿಕ್ಷಣದ ಸ್ಥಿತಿಗತಿಗಳ ಕುರಿತು ಉಪನ್ಯಾಸ ನೀಡಿದರು.ಉಪನ್ಯಾಸಕ ಅಲ್-ಅಮೀನ್‌ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಮೆಹಬೂಬ ಕಲಬುರ್ಗಿಯವರು ಭಾರತದಲ್ಲಿ ಶೈಕ್ಷಣಿಕ ಕ್ಷೇತ್ರಕ್ಕೆ ಮುಸ್ಲಿಂರ ಕೊಡುಗೆ ಕುರಿತು ಮಾತನಾಡಿದರು.ನಿವೃತ್ತ ಇತಿಹಾಸ ಪ್ರಾಧ್ಯಾಪಕ ಡಾ.ಅಬ್ದುಲಗಣಿ ಇಮಾರತವಾಲೆ ದಕ್ಷಿಣ ಭಾರತದ ರಾಜಕೀಯ ಇತಿಹಾಸ ಕುರಿತು ಮಾತನಾಡಿದರು.

ಪ್ರೊ.ವಾಜೀದ ಪೀರಜಾದೆ, ಆದಿಲಶಾಹಿ ಆದಿಲಶಾಹಿ ರಾಜಮನೆತನಗಳ ಮೇಲೆ ಸೂಫಿಸಂತರ ಪ್ರಭಾವ ಕುರಿತು ಮಾತನಾಡಿದರು.

ಡಾ.ಮುಸ್ತಾಕ್‌ ಅಹ್ಮದ್‌ ಇನಾಮದಾರ ಅವರು ಆದಿಲಶಾಹಿ ಕಾಲದ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸ್ಥಿತಿಗತಿಗಳ ಕುರಿತು ಮಾತನಾಡಿದರು.

ಗೋಷ್ಠಿಯಲ್ಲಿ ಅತಿಥಿಗಳಾಗಿ ಸಮಾಜದ ಮುಖಂಡರಾದ ಅಬ್ದುಲ್ ಹಮೀದ ಮುಶ್ರೀಫ ಪಾಲ್ಗೊಂಡಿದ್ದರು. ವೇದಿಕೆ ಮೇಲೆ ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯ ಅಶ್ಪಾಕ್ ಮನಗೊಳಿ, ಪ್ರೊ.ಮೊಹಿನ ಅಖ್ತರ ಅನ್ಸಾರಿ, ವಕೀಲರಾದ ದೆಹಲಿ ಅಸ್ಲಂ ಅಹ್ಮದ, ವಿದ್ಯಾರ್ಥಿ ಉಪನ್ಯಾಸಕ ಅಬುಖಾನ ಉಪಸ್ಥಿತರಿದರು.ಗೋಷ್ಠಿಯ ಸಂಯೋಜಕರಾಗಿ ಪ್ರೊ.ಸೀಮಾ ಇನಾಮದಾರ, ಪ್ರೊ.ಸ್ವಾಲಿಯಾಖಾನ ಲಾಹೋರಿ ಕಾರ್ಯಕ್ರಮ ನಿರ್ವಹಿಸಿದರು.

ಸಂಜೆ ಉತ್ತರ ಪ್ರದೇಶದ ಖೈರಾನಾದ ಅಲ್-ಖುರಾನ್ ಅಕಾಡೆಮಿ ಮುಪ್ತಿ ಅಥರ ಶಮ್ಸಿ ಹಾಗೂ ತಂಡದ ನಾಲ್ವತ್ತು ವಿದ್ಯಾರ್ಥಿ ವಿದ್ಯಾರ್ಥಿನಿಯರು ಖುರಾನ್ ತತ್ವ ಸಿದ್ಧಾಂತಗಳ ಕುರಿತು ಆಕರ್ಷಣಿಯವಾದ ರೂಪಕವನ್ನು ಪ್ರಸ್ತುತಪಡಿಸಿದರು.

Share this article