ಸಮಾಜ ಸೇವೆಯೆ ರೋಟರಿ ಮುಖ್ಯ ಉದ್ದೇಶ: ಡಾ.ಕೆ.ಸಿ.ನಾಗೇಶ್

KannadaprabhaNewsNetwork |  
Published : Jul 04, 2024, 01:10 AM ISTUpdated : Jul 04, 2024, 01:11 AM IST
ೇ್ | Kannada Prabha

ಸಾರಾಂಶ

ಶೃಂಗೇರಿ, ವಿವಿಧ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಕ್ರಿಯವಾಗಿರುವುದರ ಮುಖ್ಯ ಉದ್ದೇಶ ಸಮಾಜ ಸೇವೆ ಆಗಿದೆ ಎಂದು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಕೆ.ಸಿ.ನಾಗೇಶ್‌ ಹೇಳಿದರು.

ಪಟ್ಟಣದ ರೋಟರಿ ಭವನದಲ್ಲಿ ನಡೆದ ಪದಾಧಿಕಾರಿಗಳ ಸಭೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ವಿವಿಧ ಸಮಾಜ ಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಸಕ್ರಿಯವಾಗಿರುವುದರ ಮುಖ್ಯ ಉದ್ದೇಶ ಸಮಾಜ ಸೇವೆ ಆಗಿದೆ ಎಂದು ರೋಟರಿ ಸಂಸ್ಥೆಯ ನೂತನ ಅಧ್ಯಕ್ಷ ಕೆ.ಸಿ.ನಾಗೇಶ್‌ ಹೇಳಿದರು.

ಪಟ್ಟಣದ ರೋಟರಿ ಭವನದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ಮಾನಾಡಿದರು. ಪರಿಸರ, ಆರೋಗ್ಯ, ಶಿಕ್ಷಣ, ಕಾನೂನು, ರಸ್ತೆ ಸುರಕ್ಷತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ. ಪಟ್ಠಣ, ಗ್ರಾಮೀಣ ಪ್ರದೇಶಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 2024-25 ನೇ ಸಾಲಿಗೆ ಸಂಬಂಧಿಸಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಉತ್ತಮ ಆರೋಗ್ಯ, ನೈರ್ಮಲ್ಯ ಕಾರ್ಯಕ್ರಮ, ಶಿಕ್ಷಣ, ಕಾನೂನು ಅರಿವು ನೆರವು ಕಾರ್ಯಕ್ರಮ, ರಸ್ತೆ ಸುರಕ್ಷತೆ ಅಭಿಯಾನ ಕಾರ್ಯಕ್ರಮ, ಹಸಿರು ಉಸಿರು, ಪರಿಸರ ಕಾರ್ಯಕ್ರಮ ಹೀಗೆ ಶಿಕ್ಷಣ, ಆರೋಗ್ಯ, ಪರಿಸರ ಅನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಸಮಾಜ ಸೇವೆ, ಸ್ನೇಹ ಬಾಂಧವ್ಯ ಮುಖ್ಯ ಉದ್ದೇಶ ವಾಗಿದೆ.

ರೋಟರಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 7 ರಂದು ಪಟ್ಟಣದ ರೈತ ಭವನದಲ್ಲಿ ನಡೆಯಲಿದೆ. ರೋಟರಿ ಗವರ್ನರ್ ಪಿ.ಎಂ.ಭಟ್‌ ಪದಗ್ರಹಣ ಕಾರ್ಯಕ್ರಮ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಟಿ.ಡಿ. ರಾಜೇಗೌಡ ಎ ಚ್‌.ಎಸ್‌.ನಟೇಶ್, ರೇಖಾ ಉದಯ್ ಶಂಕರ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದರು.

ಇನ್ನರ್‌ ವ್ಹೀಲ್‌ ನೂತನ ಅಧ್ಯಕ್ಷೆ ಚರಿತಾ ಮಾತನಾಡಿ ಇನ್ನರ್ ವ್ಹೀಲ್‌ ಸಂಸ್ಥೆ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದು, ನಿರಂತರ ಸಮಾಜ ಸೇವೆಯಲ್ಲಿದೆ. ಆರೋಗ್ಯ, ಶಿಕ್ಷಣ, ಕಾನೂನು, ಪರಿಸರ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಮಾನವೀಯ, ಸಮಾಜಮುಖಿ ಕೆಲಸಗಳೇ ಸಂಸ್ಥೆಯ ಮುಖ್ಯ ಗುರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ನಿಯೋಜಿತ ಅಧ್ಯಕ್ಷ ಕೆ.ಸಿ.ಚರಣ್,ಕಾರ್ಯದರ್ಶಿ ಗೌತಮ್, ಉಮೇಶ್‌ ಹೆಗ್ಡೆ, ಸೌಮ್ಯ ವಿಜಯ್, ಮಂಜುಳ, ಭೂಮಿಕ ಮತ್ತಿತರರು ಇದ್ದರು. ಉಮೇಶ್ ಹೆಗ್ಡೆ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

3 ಶ್ರೀ ಚಿತ್ರ 1-

ಶೃಂಗೇರಿ ಪಟ್ಟಣದ ರೋಟರಿ ಭವನದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ ರೋಟರಿ ನೂತನ ಅಧ್ಯಕ್ಷ ಡಾ.ಕೆ.ಸಿ.ನಾಗೇಶ್‌ ಮಾತನಾಡಿದರು.

PREV

Recommended Stories

ಕಾನೂನು ಮುಂದೆ ಎಲ್ಲರೂ ಒಂದೇ ಎಂದ ನಟಿ ರಮ್ಯಾ
ಬಂಧನಕ್ಕೂ ಮೊದಲು ಪತ್ನಿ,ಮಗನ ಭೇಟಿಯಾದ ದರ್ಶನ್‌