ವೀರಮಹೇಶ್ವರ ಜಂಗಮ ಸಮಾಜದ ನೂತನ ತಾಲೂಕಾಧ್ಯಕ್ಷ ಹಂಪಯ್ಯಸ್ವಾಮಿ ಹಿರೇಮಠಗೆ ಸನ್ಮಾನ
ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿಕನ್ನಡಪ್ರಭ ವಾರ್ತೆ ಯಲಬುರ್ಗಾ
ಜಂಗಮ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದಿದೆ. ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಿಎಂ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ವೀರಮಹೇಶ್ವರ ಜಂಗಮ ಸಮಾಜದ ನೂತನ ತಾಲೂಕಾಧ್ಯಕ್ಷ ಹಂಪಯ್ಯಸ್ವಾಮಿ ಹಿರೇಮಠ ಅವರನ್ನು ಸನ್ಮಾನಿಸಿ ಮಾತನಾಡಿದರು.ನಿಸ್ವಾರ್ಥ ಸೇವಾ ಮನೋಭಾವದಿಂದ ಸಮಾಜದ ಒಳಿತಿಗಾಗಿ ಶ್ರಮಿಸುವ ಕಾರ್ಯವನ್ನು ಮಾಡುವ ಗುಣಗಳನ್ನು ಅಳವಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಬೇಕು ಎಂದರು.ತಾಲೂಕಿನ ವೀರಮಹೇಶ್ವರ ಜಂಗಮ ಸಮಾಜದವರು ತಮ್ಮ ಮೇಲೆ ಪ್ರೀತಿ, ವಿಶ್ವಾಸ, ಅಭಿಮಾನವಿಟ್ಟು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸಮಾದವರ ಪ್ರೀತಿಗೆ ಪಾತ್ರರಾಗಬೇಕು. ಸಮಾಜ ನನಗೇನು ಕೊಟ್ಟಿದೆ ಎನ್ನುವುದಕ್ಕಿಂತಲೂ ಸಮಾಜಕ್ಕೆ ನಾನು ಏನು ಮಾಡಿದ್ದೀನಿ ಎನ್ನುವ ಚಿಂತೆನೆ ಇಟ್ಟುಕೊಂಡು ಎಲ್ಲ ಸಮಾಜದವರೊಂದಿಗೆ ಸ್ನೇಹ ಜೀವಿಯಾಗಿರಬೇಕು ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ಹಂಪಯ್ಯಸ್ವಾಮಿ ಇನ್ನೂ ಚಿಕ್ಕ ವಯಸ್ಸಿನವರಾದರೂ ಸಮಾಜ ಬಾಂಧವರು ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅದಕ್ಕೆ ಎಂದೂ ಕಪ್ಪು ಚುಕ್ಕೆ ಬರದಂತೆ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ಎಂ. ಶಿರೂರ, ಮಂಜುನಾಥ ಕಡೇಮನಿ, ಶರಣಪ್ಪ ಗಾಂಜಿ, ಡಾ. ಶಿವನಗೌಡ ದಾನರಡ್ಡಿ, ಸುಧೀರ್ ಕೊರ್ಲಳ್ಳಿ, ಸಂಗಮೇಶ ಗುತ್ತಿ, ಮಲ್ಲು ಜಕ್ಕಲಿ, ನಿಂಗಪ್ಪ ಕಮತರ, ಶರಣಗೌಡ ಪಾಟೀಲ್, ಸಿದ್ದು ಪಾಟೀಲ್, ಬಸವರಾಜ ನಾಯಕ ಸೇರಿದಂತೆ ಮತ್ತಿತರರು ಇದ್ದರು.