ಒಗ್ಗಟ್ಟಿನಿಂದ ಇದ್ದರೆ ಸಮಸ್ಯೆಗೆ ಪರಿಹಾರ: ವಿತರಕರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್

KannadaprabhaNewsNetwork |  
Published : Apr 05, 2024, 01:08 AM IST
4ಎಚ್ಎಸ್ಎನ್16 : ಹೊಳೆನರಸೀಪುರ ಪಟ್ಟಣದ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಬುಧವಾರ ಸಂಜೆ ಆಯೋಜನೆ ಮಾಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಎಚ್.ವಿ.ಸುರೇಶ್ ಕುಮಾರ್, ರಾಮನಾಥ್, ವಾಸುದೇವಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಅರುಣ್, ರೋಹಿತ್ ಶ್ರೀಧರ್, ಸುನಿಲ್, ಅಬ್ದುಲ್ ವಫಾ ಇದ್ದರು. | Kannada Prabha

ಸಾರಾಂಶ

ವಿತರಕರಲ್ಲಿ ಒಂದೇ ಕುಟುಂಬದ ಸದಸ್ಯರು ಎಂಬ ಮನೋಭಾವ ಮತ್ತು ಎಲ್ಲರೂ ಜತೆಗಿದ್ದಾರೆ ಎಂಬ ಭಾವನೆಯೂ ಶಿಸ್ತುಬದ್ಧ ವ್ಯವಹಾರ ಮತ್ತು ನೆಮ್ಮದಿಯ ಜೀವನಕ್ಕೆ ಸಾಧ್ಯವಾಗಿದೆ. ಒಗ್ಗಟ್ಟಿನಿಂದ ಇದ್ದರೆ ಎಲ್ಲ ಸಮಸ್ಯೆಗೂ ಪ್‍ರಿಹಾರ ಸಿಗಲಿದೆ ಎಂದು ವಿತರಕರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ತಿಳಿಸಿದರು. ಹೊಳೆನರಸೀಪುರದಲ್ಲಿ ಸರ್ವ ಸದಸ್ಯರ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ವಿತರಕರ ಸಂಘ ನೂತನ ಪದಾಧಿಕಾರಿಗಳ ಪದಗ್ರಹಣ । ಸರ್ವ ಸದಸ್ಯರ ಸಭೆಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ತಾಲೂಕು ವಿತರಕರ ಸಂಘದ ಸದಸ್ಯರು ವ್ಯವಹಾರದ ಜಂಜಾಟದ ಜತೆಗೆ ಮನೋರಂಜನೆ ಮತ್ತು ನೆಮ್ಮದಿಯ ಜೀವನಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತದೆ. ಈ ಮೂಲಕ ವಿತರಕರಲ್ಲಿ ಒಂದೇ ಕುಟುಂಬದ ಸದಸ್ಯರು ಎಂಬ ಮನೋಭಾವ ಮತ್ತು ಎಲ್ಲರೂ ಜತೆಗಿದ್ದಾರೆ ಎಂಬ ಭಾವನೆಯೂ ಶಿಸ್ತುಬದ್ಧ ವ್ಯವಹಾರ ಮತ್ತು ನೆಮ್ಮದಿಯ ಜೀವನಕ್ಕೆ ಸಾಧ್ಯವಾಗಿದೆ. ಒಗ್ಗಟ್ಟಿನಿಂದ ಇದ್ದರೆ ಎಲ್ಲ ಸಮಸ್ಯೆಗೂ ಪ್‍ರಿಹಾರ ಸಿಗಲಿದೆ ಎಂದು ವಿತರಕರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್ ತಿಳಿಸಿದರು.

ಪಟ್ಟಣದ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಬುಧವಾರ ಸಂಜೆ ಆಯೋಜನೆ ಮಾಡಿದ್ದ ಸರ್ವ ಸದಸ್ಯರ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಎಲ್ಲರೂ ಒಗ್ಗಟಿನಿಂದ ಇದ್ದಲ್ಲಿ ಬೆಟ್ಟದಂತಹ ಸಮಸ್ಯೆಗೂ ಪರಿಹಾರವಿದೆ. ಕಂಪನಿಗಳ ಜತೆಗಿನ ಕೆಲವು ಸಮಸ್ಯೆಗಳು ಮತ್ತು ವ್ಯವಹಾರದ ಸಂಬಂಧ ಕೈಗೊಂಡ ಕೆಲವು ಸನ್ನಿವೇಶಗಳನ್ನು ವಿವರಿಸಿ, ಇದೆಲ್ಲವೂ ಎಲ್ಲರ ವ್ಯವಹಾರಿಕ ಸಮ್ಮಿಲನದಿಂದ ಸಾಧ್ಯವಾಗಿದೆ. ಆದ್ದರಿಂದ ಮುಂದಿನ ದಿನಗಳಲ್ಲೂ ಎಲ್ಲರೂ ಒಗ್ಗಟ್ಟಿನಿಂದ ಸಾಗೋಣ ಎಂದು ಕರೆಕೊಟ್ಟರು.

ನೂತನ ಅಧ್ಯಕ್ಷ ಅಬ್ದುಲ್ ವಫಾ ಅವರಿಗೆ ಎಚ್.ವಿ.ಸುರೇಶ್ ಕುಮಾರ್ ಅಧಿಕಾರ ಹಸ್ತಾಂತರಿಸಿದರು. ಶ್ರೀಲಕ್ಷ್ಮಿ ಆಶ್ವೀಜ್ ಪ್ರಾರ್ಥಿಸಿದರು, ಕಾರ್ತಿಕ್ ಆರ್.ಗುಪ್ತ ಸ್ವಾಗತಿಸಿದರು, ಮಮತಾ ರೋಹಿತ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಾದ ಶ್ರೀನಿವಾಸ್, ಚಂದ್ರು, ಸಂಸ್ತಾಪಕ ಅಧ್ಯಕ್ಷ ಸಿ.ಎನ್.ನಾಗಪ್ಪ, ಎಚ್.ಎನ್.ರಾಮಣ್ಣಶೆಟ್ಟಿ, ಎಚ್.ಪಿ.ರಮೇಶ್, ಕಿರಣ್, ವಿಜೇತ್, ಯೋಗೇಶ್, ವಿ.ಎ.ಕೃಷ್ಣ, ಶಂಕರನಾರಾಯಣ್ ಇದ್ದರು.

ವೇದಿಕೆಯಲ್ಲಿ ನಿರ್ಗಮಿತ ಅಧ್ಯಕ್ಷ ಎಚ್.ವಿ.ಸುರೇಶ್ ಕುಮಾರ್, ಉಪಾಧ್ಯಕ್ಷ ರಾಮನಾಥ್, ಪ್ರಧಾನ ಕಾರ್ಯದರ್ಶಿ ವಾಸುದೇವಮೂರ್ತಿ, ಕಾರ್ಯದರ್ಶಿ ಅರುಣ್, ಖಜಾಂಚಿ ರೋಹಿತ್ ಶ್ರೀಧರ್, ಕಾರ್ಯಕ್ರಮದ ಸಂಘಟಕ ಸುನಿಲ್ ಉಪಸ್ಥಿತರಿದ್ದರು.ಫೋಟೋ: ಹೊಳೆನರಸೀಪುರದ ಕೊನೇರಿ ರಾಮಶೆಟ್ಟರ ಛತ್ರದಲ್ಲಿ ಬುಧವಾರ ಸಂಜೆ ಆಯೋಜನೆ ಮಾಡಿದ್ದ ಸರ್ವ ಸದಸ್ಯರ ಸಭೆಯಲ್ಲಿ ಎಚ್.ವಿ.ಸುರೇಶ್ ಕುಮಾರ್, ರಾಮನಾಥ್, ವಾಸುದೇವಮೂರ್ತಿ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ