ಶೀಘ್ರದಲ್ಲೇ ಕಾಳಗಿಯಲ್ಲಿ ನ್ಯಾಯಾಲಯ ಪ್ರಾರಂಭ

KannadaprabhaNewsNetwork |  
Published : Aug 07, 2024, 01:03 AM IST
ಫೋಟೋ- ಕಾಳಗಿ ಕೋರ್ಟ್‌ಕಾಳಗಿ ಪಟ್ಟಣದ ಕಲಬುರಗಿ ಮುಖ್ಯರಸ್ತೆಯ ಜೆಸ್ಕಾಂ ಕಛೇರಿ ಪಕ್ಕದಲ್ಲಿ ನ್ಯಾಯಾಲಯ ಸ್ಥಾಪನೆಗೆ ‌ನಾಲ್ಕು ಎಕರೆ ಭೂಮಿಯನ್ನು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಕೆ ನಟರಾಜ್ ಅವರು ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ಕಾಳಗಿಗೆ ಭೇಟಿ ನೀಡಿದ್ದ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿನ ಕಟ್ಟಡವನ್ನು ವೀಕ್ಷಣೆ ಮಾಡಿ ಈ ಕಟ್ಟಡದಲ್ಲಿ ತಾತ್ಕಾಲಿಕ ನ್ಯಾಯಾಲಯ ಪ್ರಾರಂಭಿಸಲು ಸೂಕ್ತವಾಗಿದ್ದು ಕಟ್ಟಡವನ್ನು ನ್ಯಾಯಾಲಯಕ್ಕೆ ಅನುಕೂಲವಾಗುವಂತೆ ದುರಸ್ತಿ ಮಾಡಬೇಕೆಂದು ಹೇಳಿದರು.

ಕನ್ನಡಪ್ರಭ ವಾರ್ತೆ ಕಾಳಗಿ

ಕಾಳಗಿ ಪಟ್ಟಣದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಕೆ.ನಟರಾಜ್ ಹೇಳಿದರು.

ಕಾಳಗಿಗೆ ಭೇಟಿ ನೀಡಿದ್ದ ಅವರು, ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿನ ಕಟ್ಟಡವನ್ನು ವೀಕ್ಷಣೆ ಮಾಡಿ ಈ ಕಟ್ಟಡದಲ್ಲಿ ತಾತ್ಕಾಲಿಕ ನ್ಯಾಯಾಲಯ ಪ್ರಾರಂಭಿಸಲು ಸೂಕ್ತವಾಗಿದ್ದು ಕಟ್ಟಡವನ್ನು ನ್ಯಾಯಾಲಯಕ್ಕೆ ಅನುಕೂಲವಾಗುವಂತೆ ದುರಸ್ತಿ ಮಾಡಬೇಕೆಂದು ಹೇಳಿದರು.

ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರವೇ ಕಟ್ಟಡವನ್ನು ನ್ಯಾಯಾಲಯಕ್ಕೆ ಅನುಕೂಲವಾಗುವಂತೆ ದುರಸ್ತಿ ಮಾಡುವಂತೆ ಆದೇಶಿಸಿದರು. ಈ ವೇಳೆ ಅಧಿಕಾರಿಗಳು ಮಾತನಾಡಿ ನ್ಯಾಯಾಲಯಕ್ಕೆ ತಕ್ಕಂತೆ ಕಟ್ಟಡ ದುರಸ್ತಿ ಮಾಡಲು 88 ಲಕ್ಷ ರು. ಅನುದಾನದಲ್ಲಿ ಯೋಜನೆ ರೂಪಿಸಲಾಗಿದೆ. ನಾಲ್ಕು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಮಾಹಿತಿ ನೀಡಿದರು.

ಇದಕ್ಕೂ ಮೊದಲು ಕಲಬುರಗಿ ಜಿಲ್ಲಾ ಮುಖ್ಯರಸ್ತೆ ಮಾರ್ಗದಲ್ಲಿನ ಜೆಸ್ಕಾಂ ಕಚೇರಿ ಪಕ್ಕದಲ್ಲಿ ನ್ಯಾಯಾಲಯ ಸ್ಥಾಪನೆಗೆ ಮಾಜಿ ಗ್ರಾಪಂ ಅಧ್ಯಕ್ಷ ಶಿವಶರಣಪ್ಪ ಕಮಲಾಪೂರ ಅವರು ಉಡುಗೊರೆಯಾಗಿ ನೀಡುತ್ತಿರುವ ನಾಲ್ಕು ಎಕರೆ ಭೂಮಿ ವೀಕ್ಷಣೆ ಮಾಡಿದ ನ್ಯಾಯಮೂರ್ತಿಗಳು ಆದಷ್ಟೂ ಬೇಗ ಜಮೀನನ್ನು ನ್ಯಾಯಾಲಯ ಹೆಸರಿಗೆ ಮಾಡಿಕೊಟ್ಟರೆ ನ್ಯಾಯಾಲಯ ಕಟ್ಟಡ ಕಾಮಗಾರಿ ಪ್ರಾರಂಭ ಮಾಡಲು ಅನುಕೂಲವಾಗುತ್ತದೆ ಎಂದರು.

ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಜಿಲ್ಲಾ ಸತ್ರನ್ಯಾಯಾಧೀಶ ಎಸ್. ನಾಗಶ್ರೀ, ತಹಸೀಲ್ದಾರ ಘಮಾವತಿ ರಾಠೋಡ, ಕಾಳಗಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ಡಿಎಸ್ ನಾಮದಾರ, ಉಚ್ಚನ್ಯಾಯಾಲಯದ ಸಂಗೋಳಿ ನಾಗಣ್ಣ, ಪಿಡಬ್ಲೂಡಿ ಎಇಇ ಮಲ್ಲಿಕಾರ್ಜುನ ದಂಡಿನ್, ಪಪಂ ಮುಖ್ಯಾಧಿಕಾರಿ ಪಂಕಜಾ ಎ, ಜೆಸ್ಕಾಂ ಎಇಇ ಪ್ರಭು ಮಡ್ಡಿತೋಟ, ಕಂದಾಯ ನೀರಿಕ್ಷಕ ಮಂಜುನಾಥ ಮಹಾರುದ್ರ, ನ್ಯಾಯಾಲಯ ಭೂದಾನಿ ಶಿವಶರಣಪ್ಪ ಕಮಲಾಪೂರ, ತಾಲೂಕು ಕಾಂಗ್ರೆಸ್ ವಕ್ತಾರ ರಾಘವೇಂದ್ರ ಗುತ್ತೇದಾರ, ಶೇಖರ ಪಾಟೀಲ, ಗುಡುಸಾಬ ಕಮಲಾಪೂರ, ವಕೀಲರಾದ ನಾಗಭೂಷಣ, ಮಹ್ಮದ ಅಲಿ, ಶಶಿಕಾಂತ ಅಡಕಿ, ಮಲ್ಲಿಕಾರ್ಜುನ ರಾಮತೀರ್ಥ, ಸಂಪತ್ ಟಿ, ವೀರ ರೆಡ್ಡಿ, ಜೈ ಭೀಮ್, ಪಿಎಸ್ಐ ವಿಶ್ವನಾಥ ಬಾಕಳೆ ಅಧಿಕಾರಿಗಳು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ