ಅನಕ್ಷರಸ್ಥರನ್ನು ಗುರುತಿಸಿ ಸಾಕ್ಷರತಾ ಪರೀಕ್ಷೆಗೆ ವಿಶೇಷ ತರಗತಿ

KannadaprabhaNewsNetwork | Published : Jun 8, 2024 12:36 AM

ಸಾರಾಂಶ

ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ ನಡೆಸಲಾಗುವ ಸಾಕ್ಷರತಾ ಪರೀಕ್ಷೆಗೆ ಜಿಲ್ಲೆಯ ೧೮ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಬೋಧಕರ ಮೂಲಕ ಅವರಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಪ್ರಭಾರ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಬಿ.ಎಂ. ಬೇವಿನಮರದ ತಿಳಿಸಿದ್ದಾರೆ.

ಹಾವೇರಿ: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ವತಿಯಿಂದ ನಡೆಸಲಾಗುವ ಸಾಕ್ಷರತಾ ಪರೀಕ್ಷೆಗೆ ಜಿಲ್ಲೆಯ ೧೮ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಅನಕ್ಷರಸ್ಥರನ್ನು ಗುರುತಿಸಿ ಬೋಧಕರ ಮೂಲಕ ಅವರಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಪ್ರಭಾರ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ. ಬಿ.ಎಂ. ಬೇವಿನಮರದ ತಿಳಿಸಿದ್ದಾರೆ.ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯು ಶಾಲಾ ಶಿಕ್ಷಣ ಇಲಾಖೆ ಹಾಗೂ ಸ್ವಯಂಸೇವಕರ ಸಹಕಾರದೊಂದಿಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದ್ದು, ೨೦೨೩-೨೪ನೇ ಸಾಲಿನ ಈ ಪರೀಕ್ಷೆಗೆ ಬ್ಯಾಡಗಿ ತಾಲೂಕಿನ ಆಯ್ದ ೨ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೨೦೦ ಜನರು, ಹಿರೇಕೆರೂರು ತಾಲೂಕಿನ ೨ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೩೦೦, ರಾಣಿಬೆನ್ನೂರು ತಾಲೂಕಿನ ೩ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೮೦೦, ಶಿಗ್ಗಾಂವಿ ತಾಲೂಕಿನ ಮೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪೩೨, ಹಾನಗಲ್ಲ ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯ ೮೦೦, ಹಾವೇರಿ ತಾಲೂಕಿನ ೩ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೧೨೪೫ ಜನರು ಹಾಗೂ ಹಾವೇರಿ ಜಿಲ್ಲಾ ಕಾರಾಗೃಹದ ೨೯ ಜನ ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು ೩೮೦೬ ಜನರನ್ನು ಗುರುತಿಸಿ ಕಲಿಕಾ ಸಾಮಗ್ರಿಗಳನ್ನು ನೀಡಿ ಕಲಿಕಾ ಕೇಂದ್ರಗಳಲ್ಲಿ ಸಾಕ್ಷರರನ್ನಾಗಿ ಮಾಡಲಾಗುತ್ತಿದೆ.ಜಿಲ್ಲೆಯಾದ್ಯಂತ ಒಟ್ಟು ೧೮೬ ಬೋಧಕರು ಕಾರ್ಯನಿರ್ವಹಿಸುತ್ತಿದ್ದು, ಜೂ.೨೩ರಂದು ಒಟ್ಟು ೫೮ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲ್ಲಿದ್ದು, ೫೮ ಪರೀಕ್ಷಾ ಮುಖ್ಯ ಅಧೀಕ್ಷಕರು ಹಾಗೂ ೧೪೨ ಕೊಠಡಿ ಮೇಲ್ವಿಚಾರಕರನ್ನು ನೇಮಿಸಲಾಗಿದೆ ಎಂದು ತಿಳಿಸಿದ್ದಾರೆ. ಬೋಧನಾ ಕೇಂದ್ರಗಳಿಗೆ ಭೇಟಿ.. ಜಿಲ್ಲೆಯಾದ್ಯಂತ ೧೮೬ ಬೋಧಕರು ಪ್ರತಿದಿನ ಸಂಜೆ ಬೋಧನಾ ಕೇಂದ್ರಗಳಲ್ಲಿ ತರಗತಿ ನಡೆಸುತ್ತಿದ್ದು, ಜಿಲ್ಲೆಯ ವಿವಿಧ ಕೇಂದ್ರಗಳಿಗೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಡಾ.ಬಿ ಎಂ. ಬೇವಿನಮರದ ಭೇಟಿ ನೀಡಿದರು. ಹಾವೇರಿ ತಾಲೂಕಿನ ಕರಜಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಯತ್ತಿನಹಳ್ಳಿ ಗ್ರಾಮದ ೫ ಬೋಧನಾ ಕೇಂದ್ರಗಳಿಗೆ ಹಾಗೂ ಬಸಾಪುರ ಗ್ರಾಪಂ ವ್ಯಾಪ್ತಿಯ ೧೩ ಬೋಧನಾ ಕೇಂದ್ರಗಳಿಗೆ ಭೇಟಿ ನೀಡಿ ಬೋಧಕರಿಗೆ ಹಾಗೂ ಗುರುತಿಸಲಾದ ಅನಕ್ಷರಸ್ಥರಿಗೆ ಶಿಕ್ಷಣದ ಅಗತ್ಯತೆ ಕುರಿತು ಮಾರ್ಗದರ್ಶನ ಮಾಡಿದರು.ಈ ಸಂದರ್ಭದಲ್ಲಿ ವಯಸ್ಕರ ಶಿಕ್ಷಣ ಇಲಾಖೆಯ ಕಾರ್ಯಕ್ರಮ ಸಹಾಯಕರಾದ ಅರುಂಧತಿ ಹೂಗಾರ, ದೇವಗಿರಿ ಕ್ಲಸ್ಟರ್ ಸಿಆರ್‌ಪಿ ಶ್ರೀಕಾಂತ್ ದೊಡ್ಡಕುರುಬರ, ಗುತ್ತಲ ಸಿಆರ್‌ಪಿ ಲೋಕೇಶ್ ವಡ್ಡರ ಹಾಗೂ ಸ್ಥಳೀಯ ಶಾಲೆಗಳ ಮುಖ್ಯೋಪಾಧ್ಯಾಯರು ಇದ್ದರು.

Share this article