ಭಾವೈಕ್ಯತೆ ಭಾರತದ ಜೀವಾಳ: ತಹಸೀಲ್ದಾರ್‌ ಅಂಗಡಿ

KannadaprabhaNewsNetwork | Published : Jan 28, 2024 1:18 AM

ಸಾರಾಂಶ

ಸಿರವಾರ ತಾಲೂಕು ಆಡಳಿತದಿಂದ ನಡೆದ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ್‌ ರವಿ ಅಂಗಡಿ ಮಾತನಾಡಿದರು.

ಕನ್ನಡಪ್ರಭವಾರ್ತೆ ಸಿರವಾರ

ನಮ್ಮ ದೇಶಕ್ಕೆ ಸಮೃದ್ಧ ಸಂಸ್ಕೃತಿಯ ಇತಿಹಾಸ, ವೀರ ಧೀರರ ಪರಂಪರೆಯ ಹಿನ್ನೆಲೆ ಇದ್ದು, ಭಾವೈಕ್ಯತೆ ಭಾರತದ ಜೀವಾಳ ಆಗಿದೆ ಎಂದು ತಹಸೀಲ್ದಾರ್ ರವಿ ಎಸ್. ಅಂಗಡಿ ಹೇಳಿದರು.

ಪಟ್ಟಣದ ಬಾಲಕಿಯರ ಪ್ರೌಢಶಾಲೆಯಲ್ಲಿ 75ನೇ ಗಣರಾಜ್ಯೋತ್ಸವ ಅಂಗವಾಗಿ ತಾಲೂಕು ಆಡಳಿತದಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ದೇಶ ರಕ್ಷಣೆಗಾಗಿ ಅತ್ಯುನ್ನತ ಸಂವಿಧಾನ ರಚಿಸಿ ಜ.26 1950ರಂದು ಅಧಿಕೃತವಾಗಿ ಜಾರಿಗೆ ತರಲಾಯಿತು ಎಂದರು.ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ತಾಲೂಕು ಆಡಳಿತದಿಂದ ಕರಾಟೆ ಸ್ಪರ್ಧೆಯಲ್ಲಿ ಉತ್ತಮ ಸಾಧನೆ ಮಾಡಿದ ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಮತ್ತು ವಿವಿಧ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ಸಿಪಿಐ ಎಂ. ಶಶಿಕಾಂತ, ಪಪಂ ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ, ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಅಯ್ಯನಗೌಡ ಏರಡ್ಡಿ, ನೀರಾವರಿ ಇಲಾಖೆ ಎಇಇ ವಿಜಯಲಕ್ಷ್ಮಿ ಪಾಟೀಲ, ಸಿಡಿಪಿಒ ನಾಗರತ್ನ ವೇದಿಕೆ ಮೇಲಿದ್ದರು. ವಿವಿಧ ಇಲಾಖೆಯ ಸರ್ಕಾರಿ ಅಧಿಕಾರಿಗಳು, ಪಟ್ಟಣ ಪಂಚಾಯಿತಿ ಸದಸ್ಯರು, ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.ವಿವಿಧೆಡೆ ಗಣರಾಜ್ಯೋತ್ಸವ ಆಚರಣೆ

ಸಿರವಾರ: 75ನೇ ಗಣರಾಜ್ಯೋತ್ಸವದ ಅಂಗವಾಗಿ ವಿವಿಧ ಕಚೇರಿ, ಶಾಲೆಗಳಲ್ಲಿ ಸಂಭ್ರಮದಿಂದ ಧ್ವಜಾರೋಹಣ ಮಾಡಲಾಯಿತು. ಇಲ್ಲಿನ ಪಪಂ ಕಚೇರಿಯಲ್ಲಿ ಮತ್ತು ತಹಸೀಲ್ದಾರ್ ಕಚೇರಿಯಲ್ಲಿ ತಹಶೀಲ್ದಾರ್ ರವಿ ಎಸ್.ಅಂಗಡಿ, ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ಡಿಎಂಸಿ ಅಧ್ಯಕ್ಷ ಪಿ.ಕೃಷ್ಣ, ಪೊಲೀಸ್ ಠಾಣೆಯಲ್ಲಿ ಸಿಪಿಐ ಎಂ.ಶಶಿಕಾಂತ, ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಕೇಶಪ್ಪ ಕಮ್ಮಾರ, ಬಾಲಕಿಯರ ಪ್ರೌಢಶಾಲೆಯಲ್ಲಿ ದೇವೇಂದ್ರ ನಾಯ್ಕ್, ಬಸವೇಶ್ವರ ಕಾಲೇಜಿನಲ್ಲಿ ಪ್ರಾಚಾರ್ಯ ಧರ್ಮಣ್ಣ, ಅಮರೇಗೌಡ ಪಾಟೀಲ್ ಬಯ್ಯಾಪೂರು ಕಾಲೇಜಿನಲ್ಲಿ ಅಮರೇಶಗೌಡ ನಂದರೆಡ್ಡಿ, ಶಾಂತಿನಿಕೇತ ಶಾಲೆಯಲ್ಲಿ ಬಸವಲಿಂಗಪ್ಪ ಸಾಹುಕಾರ, ಜ್ಞಾನಗಂಗಾ ಶಾಲೆಯಲ್ಲಿ ವೆಂಕಟರೆಡ್ಡಿ ಬಲ್ಕಲ್, ಜ್ಞಾನಭಾರತಿ ಶಾಲೆಯಲ್ಲಿ ಪ್ರಕಾಶಪಾಟೀಲ, ವಿದ್ಯವಾಹಿನಿ ಶಾಲೆಯಲ್ಲಿ ಟಿ.ಬಸವರಾಜ ಧ್ವಜಾರೋಹಣ ನೆರವೇರಿಸಿದರು.

Share this article