- ಉದ್ದಗಟ್ಟದಲ್ಲಿ ಹನುಮಂತಾಪುರ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ - - - ಕನ್ನಡಪ್ರಭ ವಾರ್ತೆ ಜಗಳೂರು
ತಾಲೂಕಿನ ಉದ್ದಗಟ್ಟ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ ಆವರಣದಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಹನುಮಂತಾಪುರ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವಾಗಿದೆ ಎಂದರು.
ತೀರ್ಪುಗಾರರು ತೀರ್ಪು ನೀಡುವಾಗ ನ್ಯಾಯ ಸಮ್ಮತವಾಗಿರಬೇಕು. ವಿದ್ಯಾರ್ಥಿಗಳು ಯಾವುದೇ ಭಯವಿಲ್ಲದೆ ತಮ್ಮಲ್ಲಿರುವ ಕೌಶಲ್ಯ ಅನಾವರಣಗೊಳಿಸುವ ಮುಖೇನ ತಾಲೂಕುಮಟ್ಟ, ಜಿಲ್ಲಾಮಟ್ಟ, ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದವರೆಗೆ ಬೆಳೆಯುವಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕ್ರೀಡಾಕೂಟದಲ್ಲಿ ೧೬ ಹಳ್ಳಿಗಳ ಶಾಲೆಯಿಂದ ೩೮೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದು, ಕಬಡ್ಡಿ, ಖೋ ಖೊ, ವಾಲಿಬಾಲ್, ಥ್ರೋಬಾಲ್, ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲಾಯಿತು.
ಈ ಸಂದರ್ಭ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುರೇಶ್ ರೆಡ್ಡಿ, ಅಣಬೂರು ಕ್ಲಸ್ಟರ್ ಸಿಆರ್ಪಿ ನಾಗಲಿಂಗಸ್ವಾಮಿ, ಹನುಮಂತಾಪುರ ಕ್ಲಸ್ಟರ್ ಸಿಆರ್ಪಿ ಲೋಕೇಶ್, ಶಿಕ್ಷಕರಾದ ಗೋಡೆ ಬಸವರಾಜು, ರೇಖ, ಕುಮಾರ್ ನಾಯ್ಕ, ಲೋಕೇಶ್, ಗೋವಿಂದಪ್ಪ, ರಾಜು, ಸೇರಿದಂತೆ ಮತ್ತಿತರರಿದ್ದರು.
ಜಗಳೂರು ತಾಲೂಕಿನ ಉದ್ದಗಟ್ಟ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ ಆವರಣದಲ್ಲಿ ಹನುಮಂತಾಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಥ್ರೋಬಾಲ್ ಪಂದ್ಯದಲ್ಲಿ ಹುಚ್ಚವ್ವನಹಳ್ಳಿ ಸ.ಹಿ.ಪ್ರಾ.ಶಾಲೆ ಪ್ರಥಮ ಸ್ಥಾನ ಪಡೆದಿದೆ. ಉದ್ದಗಟ್ಟ ಮೊರಾರ್ಜಿ ದೇಸಾಯಿ ವಸತಿಯುತ ಶಾಲೆ ಪ್ರಾಂಶುಪಾಲ ಶಶಿಕಿರಣ್ ಇತರರು ಇದ್ದರು.