ಶ್ರೀ ತಿಪ್ಪೇರುದ್ರ ಸ್ವಾಮಿಗಳು ಪವಾಡ ಪುರುಷರು: ಶಾಸಕ ಬಿ.ದೇವೇಂದ್ರಪ್ಪ

KannadaprabhaNewsNetwork | Published : Mar 8, 2024 1:45 AM

ಸಾರಾಂಶ

ಹಿರಿಯ ಸಾಹಿತಿ ಎನ್.ಟಿ. ಎರ್ರಿಸ್ವಾಮಿ ರಚಿಸಿರುವ ಶ್ರೀ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜೀವನ ಚರಿತ್ರೆ ಮತ್ತು ಕ್ಷೇತ್ರ ದರ್ಶನ ಕೃತಿಯನ್ನು ಶಾಸಕ ಬಿ.ದೇವೇಂದ್ರಪ್ಪ ಬಿಡುಗಡೆ ಮಾಡಿದರು.

ಕನ್ನಡ ಪ್ರಭ ವಾರ್ತೆ ಜಗಳೂರು

ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಗಳು ಕೇವಲ ಧಾರ್ಮಿಕ ಪುರುಷರಾಗಿ ತತ್ವ ಬೋಧನೆಗಳಿಗೆ ಅಷ್ಟೇ ಸೀಮಿತವಾಗದೆ, ಜನರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಬದಲಾವಣೆಗಾಗಿ ಜಾತಿ ಮತ ಪಂಥಗಳ ಎಲ್ಲೇ ಮೀರಿ ಪವಾಡದ ರೀತಿಯಲ್ಲಿ ಸಮಾಜ ಸೇವೆ ಮಾಡಿ ಪವಾಡ ಪುರುಷರಾಗಿದ್ದಾರೆ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.

ನಾಯಕನಹಟ್ಟಿ ಗ್ರಾಮದ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಸಮುದಾಯ ಭವನದಲ್ಲಿ ಹಿರಿಯ ಸಾಹಿತಿ ಎನ್.ಟಿ.ಎರ್ರಿಸ್ವಾಮಿ ರಚಿಸಿರುವ ಶ್ರೀ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜೀವನ ಚರಿತ್ರೆ ಮತ್ತು ಕ್ಷೇತ್ರ ದರ್ಶನ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪವಾಡಗಳು ಅವರ ವಿಚಾರಧಾರೆಗಳು ಮುಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಲು ಬದುಕಿಗೆ ಬೆಳಕಾಗುವ ರೀತಿಯಲ್ಲಿ ಲೇಖಕರಾದ ಎನ್.ಟಿ. ಎರ್ರಿಸ್ವಾಮಿಯವರು ಸಾರ್ಥಕ ಕೆಲಸ ಮಾಡಿದ್ದಾರೆ. ಇನ್ನು, ಶ್ರೀ ತಿಪ್ಪೇರುದ್ರಸ್ವಾಮಿಯವರ ಆಶೀರ್ವಾದದಿಂದ ನನ್ನ ಬದುಕಿನಲ್ಲಿ ಅನೇಕ ಪವಾಡ ಸದೃಶ್ಯ ರೀತಿಯಲ್ಲಿ ಘಟನೆಗಳಾಗಿವೆ ಎಂದರು.ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಸತೀಶ್ ಕುಮಾರ್ ಎಸ್ ಹೊಸಮನೆ ಮಾತನಾಡಿ, ಸಾಹಿತ್ಯ ಕ್ರಾಂತಿಯಿಂದ ಸಾಮಾಜಿಕ ಬದಲಾವಣೆ ಸಾಧ್ಯ ಪುಸ್ತಕ ಸಂಸ್ಕೃತಿ ಉಳಿಸಬೇಕು. ಕಾಯಕಯೋಗಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿ ಕೃತಿ ಉತ್ತಮ ಕೃತಿಯಾಗಿದ್ದು ರಾಜ್ಯದ ಎಲ್ಲಾ ಗ್ರಂಥಾಲಯಗಳಿಗೂ ತಲುಪಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಲೇಖಕ ಎಂ.ಟಿ. ಎರ್ರಿಸ್ವಾಮಿ ಮಾತನಾಡಿ , ನನ್ನ ಬದುಕಿನಲ್ಲಿ 36 ಕೃತಿಗಳನ್ನು ರಚಿಸಿದ್ದರೂ ಸಹ ಶ್ರೀ ಗುರು ತಿಪ್ಪೇರುದ್ರ ಸ್ವಾಮೀಜಿ ಜೀವನ ಚರಿತ್ರೆ ಮತ್ತು ಕ್ಷೇತ್ರ ದರ್ಶನ ಪುಸ್ತಕ ನನಗೆ ಅತ್ಯಂತ ಸಂತೃಪ್ತಿ ತಂದು ಕೊಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದರು.

ವಿಧಾನಸಭೆಯ ಸಭಾಪತಿಗಳ ನಿವೃತ್ತ ಆಪ್ತ ಕಾರ್ಯದರ್ಶಿ, ಸೊಕ್ಕೆತಿಪ್ಪೇಸ್ವಾಮಿ, ನಿವೃತ್ತ ಪ್ರಾಂಶುಪಾಲರಾದ ಎಮ್.ಬಸವಪ್ಪ, ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಮಾತನಾಡಿದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಂ.ಶಿವಸ್ವಾಮಿ, ಚಿತ್ರದುರ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ, ಗೀತಾಂಜಲಿ ಪುಸ್ತಕ ಪ್ರಕಾಶನದ ಜಿ.ಬಿ.ಟಿ. ಮೋಹನ್, ಶ್ರೀ ಮಠದ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರಪ್ಪ, ಸುಭಾಷ್ ಚಂದ್ರ ಬೋಸ್ , ಜಗಳೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದ ಜಿಎಸ್, ಕಾಸಾಪ ಅಧ್ಯಕ್ಷ ಸುಜಾತಮ್ಮ, ಬಿ.ಟಿ.ಗೀತಮ್ಮ, ನಾಗಲಿಂಗಪ್ಪ , ನಾಗರಾಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Share this article