ಶ್ರೀನಿವಾಸಮೂರ್ತಿ ಚಿಕ್ಕಹಳ್ಳಿ ಗ್ರಾಪಂ ಅಧ್ಯಕ್ಷ

KannadaprabhaNewsNetwork | Published : Mar 15, 2024 1:16 AM

ಸಾರಾಂಶ

ಮಾಗಡಿ: ತಾಲೂಕಿನ ಚಿಕ್ಕಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗಂಗೋನಳ್ಳಿ ಶ್ರೀನಿವಾಸಮೂರ್ತಿ ಆಯ್ಕೆಯಾಗಿದ್ದಾರೆ.

ಮಾಗಡಿ: ತಾಲೂಕಿನ ಚಿಕ್ಕಹಳ್ಳಿ ಗ್ರಾಪಂ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಗಂಗೋನಳ್ಳಿ ಶ್ರೀನಿವಾಸಮೂರ್ತಿ ಆಯ್ಕೆಯಾಗಿದ್ದಾರೆ.

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಶ್ರೀನಿವಾಸ್ ಮೂರ್ತಿ ಹಾಗೂ ಜೆಡಿಎಸ್ ಬೆಂಬಲಿತ ನಿಂಗೇಗೌಡ ಹಾಗೂ ಪುಷ್ಪ ನಾಮಪತ್ರ ಸಲ್ಲಿಸಿದರು. 16 ಸದಸ್ಯ ಬಲ ಹೊಂದಿದ ಪಂಚಾಯತಿಯಲ್ಲಿ ಶ್ರೀನಿವಾಸಮೂರ್ತಿ 10 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನೂತನ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಮಾತನಾಡಿ, ಶಾಸಕ ಬಾಲಕೃಷ್ಣ, ಒಕ್ಕಲಿಗ ಸಂಘದ ನಿರ್ದೇಶಕ ಹೆಚ್.ಎನ್.ಅಶೋಕ್ ಹಾಗೂ ಸದಸ್ಯರ ಸಹಕಾರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು ಪಂಚಾಯಿತಿಯಲ್ಲಿ ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಲಾಗುತ್ತದೆ. ಈಗ ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆ ನಿರ್ವಹಿಸಲಾಗುತ್ತದೆ. ಎಲ್ಲರ ಸಹಕಾರದಿಂದ ಪಂಚಾಯಿತಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಶಿವಪ್ರಸಾದ್ ಮಾತನಾಡಿ, ನೂತನ ಅಧ್ಯಕ್ಷ ಶ್ರೀನಿವಾಸಮೂರ್ತಿ ಮೇಲೆ ಸಾಕಷ್ಟು ಭರವಸೆ ಇದ್ದು ಸದಸ್ಯರೆಲ್ಲರ ಸಹಕಾರ ಪಡೆದು ಪಂಚಾಯಿತಿ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಿದೆ. ಬೇಸಿಗೆ ಇರುವುದರಿಂದ ಯಾವುದೇ ರೀತಿ ಸಮಸ್ಯೆ ಬರದಂತೆ ಪಂಚಾಯಿತಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಅವರ ಮೇಲಿದೆ ಎಂದು ತಿಳಿಸಿದರು.

ನೂತನ ಅಧ್ಯಕ್ಷರಾಗಿ ಶ್ರೀನಿವಾಸಮೂರ್ತಿ ಆಯ್ಕೆ ಆಗುತ್ತಿದ್ದಂತೆ ಬೆಂಬಲಿಗರು ಜೆಸಿಬಿ ಮೂಲಕ ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಹೂಮಳೆ ಸುರಿಸಿ ದೊಡ್ಡದೊಡ್ಡ ಹಾರ ಹಾಕಿ ಸಂಭ್ರಮಾಚರಿಸಿದರು.

ಗ್ರಾಪಂ ಉಪಾಧ್ಯಕ್ಷೆ ಶಾರದಮ್ಮ ಕೃಷ್ಣ, ಮುನಿರಾಜು, ನರಸಿಂಹಮೂರ್ತಿ, ಜಯಮ್ಮ, ಚಿಕ್ಕಬೋರಯ್ಯ, ಲಕ್ಷ್ಮಣ, ನೂರ್ಜನ್ ಮುಸ್ತಪ, ನಾರಾಯಣ ಮೂರ್ತಿ ಇತರರು ಪಾಲ್ಗೊಂಡಿದ್ದರು. ಪೋಟೋ 14ಮಾಗಡಿ1 : ಮಾಗಡಿ ತಾಲೂಕಿನ ಚಿಕ್ಕಹಳ್ಳಿ ಗ್ರಾಪಂ ನೂತನ ಅಧ್ಯಕ್ಷ ಕಾಂಗ್ರೆಸ್ ಬೆಂಬಲಿತ ಶ್ರೀನಿವಾಸಮೂರ್ತಿ ಅವರನ್ನು ಬೆಂಬಲಿಗರು ಅಭಿನಂದಿಸಿದರು. ಗ್ರಾಪಂ ಉಪಾಧ್ಯಕ್ಷೆ ಶಾರದಮ್ಮ ಕೃಷ್ಣ, ಮುನಿರಾಜು, ನರಸಿಂಹಮೂರ್ತಿ, ಜಯಮ್ಮ, ಚಿಕ್ಕಬೋರಯ್ಯ, ಲಕ್ಷ್ಮಣ, ನೂರ್ಜನ್ ಮುಸ್ತಪ, ನಾರಾಯಣ ಮೂರ್ತಿ ಇತರರಿದ್ದರು.

Share this article