ಕನ್ನಡಪ್ರಭ ವಾರ್ತೆ ಕಲಬುರಗಿ
ಕಲಬುರಗಿಯ ಶ್ರೀವಿಜಯ ಪ್ರಕಾಶನ ಸಂಸ್ಥೆ ತನ್ನ ಪ್ರಕಾಶನದ ಚೊಚ್ಚಿಲ ಕೃತಿಯಾಗಿ ಪ್ರಕಟಿಸಿರುವ 260 ಪುಟಗಳ ಯಾಜ್ಞವಲ್ಕ್ಯ ಸ್ಮೃತಿ- ಅಂದು, ಇಂದು, ಎಂದೆಂದೂ... ಕೃತಿ ಬಿಡುಗಡೆಗೆ ಮಾ.3 ರ ಭಾನುವಾರ ಮುಹೂರ್ತ ನಿಗದಿ ಮಾಡಿದೆ.ಪತ್ರಕರ್ತರು, ಅಂಕಣಕಾರರು ಆಗಿರುವ ಡಾ. ಶ್ರೀನಿವಾಸ ಸಿರನೂರಕರ್ ಅವರು ಭಾರತೀಯ ಜ್ಞಾನ ಪರಂಪರೆಯಲ್ಲಿ ಬರುವ ಬಲು ಮಹ್ತವದ ಹಾಗೂ ಮನು ಸ್ಮೃತಿಯ ನಂತರದಲ್ಲಿ ಬಂದಿರುವ ವೈಚಾರಿಕತೆ ಹಾಗೂ ವೈಜ್ಞಾನಿಕತೆ ಪ್ರಚೋದಕವಾಗಿರುವ ಯಾಜ್ಞವಲ್ಕ್ಯರ ಸ್ಮೃತಿಯನ್ನಾಧರಿಸಿ ಈ ಕೃತಿ ರಚಿಸಿದ್ದಾರೆ.
ಈ ಕೃತಿಯನ್ನು ಪ್ರಕಾಶನ ಮಾಡುವುದರೊಂದಿಗೆ ಏನಕೇನ ಕಾರಣಗಳಿಂದಾಗಿ ಚರ್ಚೆಯಿಂದ ದೂರವಾಗಿರುವ ಹಾಗೂ ಓದಿನ ಮುನ್ನೆಲೆಗೆ ಬಾರದೆ ವರ್ಷಗಳೇ ಕಳೆದಿರುವಂತಹ ಯಾಜ್ಞವಲ್ಕ್ಯ ಸ್ಮೃತಿ ಅಧ್ಯಯನಕ್ಕೆ ಹಾಗೂ ಚರ್ಚೆಗೆ ಗ್ರಾಸವಾಗುವಂತೆ ಮಾಡುವಂತಹ ಸಣ್ಣದೊಂದು ಪ್ರಯತ್ನ ಶೀವಿಜಯ ಪ್ರಕಾಶನ ಸಂಸ್ಥೆ ಮಾಡಿದೆ ಎಂದು ಸಂಸ್ಥೆಯ ಸಂಚಾಲಕ ಸಂಜೀವ ಸಿರನೂರಕರ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀವಿಜಯ ಕನ್ನಡ ನಾಡಿನ ಮೊದಲ ಕವಿ, ಕನ್ನಡ, ಕನ್ನಡಿಗರ ಅಸ್ಮಿತೆ ಪ್ರಪಂಚಕೆ ಪರಿಚಯಿಸಿದವನು. ಸ್ವಾಭೀಮಾನದ ಪ್ರತೀಕವಾಗಿರುವ ಶ್ರೀ ವಿಜಯನ ಹೆಸರಲ್ಲೇ ತಾವು ಪ್ರಕಾಶನ ಆರಂಭಿಸಿದ್ದಾಗಿ ಹೇಳಿದರು.
ಭಾರತೀಯ ಜ್ಞಾನ ಪರಂಪರೆಯಲ್ಲಿ ಯಾಜ್ಞವಲ್ಕ್ಯರು ಅಗ್ರಗಣ್ಯರುಕೃತಿಯ ಲೇಖಕ ಡಾ. ಶ್ರೀನಿವಾಸ ಸಿರನೂರಕರ್ ಮಾತನಾಡುತ್ತ ಭಾರತೀಯ ಜ್ಞಾನ ಪರಂಪರೆಯಲ್ಲಿ ಅತ್ಯಂತ ಮಹತ್ವದ ಸ್ಥಾನ ಸ್ಮೃತಿಗಳಿಗೆ ಇದೆ. ಅದರಲ್ಲೂ ಮನು ಸ್ಮೃತಿಯ ನಂತರ ಬಂದಿರುವ ವೈಜ್ಞಾನಿಕ- ವೈಚರಿಕ ಯಾಜ್ಞವಲ್ಕ್ಯ ಸ್ಮೃತಿ ಇಂದಿನ ಓದಿಗೆ ಅಗತ್ಯವಾಗಿದೆ. ಎಲ್ಲ ಸ್ಮೃತಿಕಾರರಲ್ಲಿ ಅಗ್ರಗಣ್ಯರಾಗಿರುವ ಯಾಜ್ಞವಲ್ಕ್ಯರು, ಅವರು ರಚಿಸಿದ ಯಾಜ್ಞವಲ್ಕ್ಯ ಸ್ಮೃತಿಯ ಪ್ರಸ್ತುತತೆ, ಇಂದಿನ ಸಾಮಾಜಿಕ, ರಾಜಕೀಯ, ಧಾರ್ಮಿಕ, ಆರ್ಥಿಕ, ನ್ಯಾಯ- ಕಾನೂನು ಹಾಗೂ ಆಧ್ಯಾತ್ಮಿಕ ನೆಲೆಯಲ್ಲಿ ಜನಮಾನಸಕ್ಕೆ ಅದರ ಉಪಯುಕ್ತತೆ ಪರಿಚಯಿಸುವ ಪ್ರಯತ್ನ ಕೃತಿಯುದ್ದಕ್ಕೂ ಮಾಡಿದ್ದಾಗಿ ಹೇಳಿದರು. ಭಾರತೀಯ ಜ್ಞಾನ ಪರಂಪರೆ, ಅಲ್ಲಿನ ಸಾರ, ಸತ್ವವನ್ನು ಅಧ್ಯಯನ ಮಾಡಲು ಇದು ಸಕಾಲ, ಈ ಕೃತಿ ಭಾರತೀಯ ಧರ್ಮ ಶಾಸ್ತ್ರದಲ್ಲಿ ಹೆಚ್ಚಿನ ಅಧ್ಯಯನಕ್ಕೂ ಕಾರಣವಾಗುವ ವಿಶಾವಸ ವ್ಯಕ್ತಪಡಿಸಿದರು.
ಮನು ಸ್ಮೃತಿ ಬಗ್ಗೆ ಪೂರ್ವಾಗ್ರಹ ಪೀಡಿತ ನಿಲುವು ಬಿಡಬೇಕುಭಾರತೀಯ ಜ್ಞಾನ ಪರಂಪರೆಯ ತತ್ವಗಳನ್ನು ಹಾಗೂ ಅದರ ಸತ್ವವನ್ನು ತುಂಬಿಕೊಂಡಿರುವ ಸ್ಮೃತಿಗಳ ಕುರಿತಾದಂತಹ ಪೂರ್ವಾಗ್ರಹ ಪೀಡಿತ ನಿಲುವುಗಳನ್ನು ಬಿಡಬೇಕು, ಮೊದಲು ಎಲ್ಲರು ಸ್ಮೃತಿಗಳನ್ನು ಒದಬೇಕು, ಅಲ್ಲಿನ ಸಾರ ಸಂಗ್ರಹ ಅರಿಯಬೇಕು, ಅದು ರಚನೆಯಾದ ಕಾಲಘಟ್ಟ, ಅಂದಿನ ಆಚಾರ- ವಿಚಾರಗಳನ್ನೆಲ್ಲ ಹಿನ್ನೆಲೆಯಾಗಿಟ್ಟುಕೊಂಡೇ ಇವನ್ನು ಓದಬೇಕು. ಸುಖಾ ಸುಮ್ಮನೆ ಅವುಗಳ ಬಗ್ಗೆ ಸಲ್ಲದ ಟೀಕೆಗಳನ್ನು ಮಾಡಬಾರದು ಎಂದು ಅಂಕಣಕಾರ ಡಾ. ಸಿರನೂರಕರ್ ಹೇಳಿದರು.
ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುತ್ತ ಮಾತನಾಡಿದ ಅವರು ಮನುಸ್ಮೃತಿ ಬಗ್ಗೆ ಅನೇಕರು ಕುಹಕವಾಡುತ್ತಾರೆ, ಅದು ಸರಿಯಾದ ಕ್ರಮವಲ್ಲ, ಮನುವಾದಿಗಳು, ಮನು ಎಂದೆಲ್ಲಾ ಟೀಕೆಗಳನ್ನು ಕೇಳುತ್ತೇವೆ. ಯಾಕೆ ಕೆಲವು ಹೀಗೆ ಮಾಡುತ್ತಾರೆ ಎಂಬುದು ಬಿಡಿಸಿ ಹೇಳಲಾಗದು, ಯಾಕೆಂಬುದಕ್ಕೆ ಕಾರಣ ಎಲ್ಲರಿಗೂ ಗೊತ್ತಿದೆ. ಮನು ಸ್ಮೃತಿ ಏನೆಂದು ಓದದವರೂ ಅದನ್ನು ಟೀಕಿಸುತ್ತಾರೆಂದರೆ ಇದಕ್ಕಿಂತ ಹಾಸ್ಯಾಸ್ಪದ ಸಂಗತಿ ಯಾವುದೂ ಇಲ್ಲವೆಂದರು.ಸ್ತೀಯರ ಸ್ವಾತಂತ್ರ್ಯ ವಿಚಾರವಾಗಿ ಮನು ಅಂದಿನ ಕಾಲಘಟ್ಟದಲ್ಲಿ ಹೇಳಿದ್ದನ್ನೇ ಪದೇ ಪದೇ ಉಲ್ಲೇಖ ಮಾಡಲಾಗುತ್ತಿದೆ. ಮನು ಹೇಳಿದ್ದೇನು, ಯಾಕೆ ಹೇಳಿದ ಎಂಬುದನ್ನು ಅರಿಯುವ ಗೋಜಿಗೂ ಯಾರೂ ಹೋಗೋದಲ್ಲವೆಂದು ವಿಷಾದಿಸಿದರು. ಮನು ಸ್ಮೃತಿ ಬಗ್ಗೆ ಇಂಗ್ಲೀಷರ ಲೇಖಕನೊಬ್ಬ ಹೊರತಂದ ಕೃತಿಯಿಂದಾಗಿಯೇ ಇಡೀ ಸ್ಮೃತಿಯ ಸಾರ- ಸತ್ವವೇ ಟೀಕೆಗೆ ಒಳಪಟ್ಟಿದ. ಇದು ಇತಿಹಾಸದ ದುರಂತ. ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲವೆ? ಸ್ಮೃತಿಗಳ ಅಧ್ಯಯನ, ಚರ್ಗೆಗಳಿಗೂ ಅವಕಶಬೇಲ್ಲವೆ? ತಮ್ಮ ಯಾಜ್ಞವಲ್ಕ್ಯ ಕೃತಿಯ ಬಗ್ಗೆ ಬಹಿರಂಗ ಚರ್ಟೆಗಳನ್ನು ಏರ್ಪಡಿಸಿದರೆ ತಾವು ಪಾಲ್ಗೊಂಡು ಸಂವಾದಿಯಾಗಲು ಸಿದ್ಧವೆಂದು ರಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು. ಶ್ರೀವಿಜಯ ಪ್ರಕಾಶದ ಅಧ್ಯಕ್ಷ ಜಗನ್ನಾಥ ಊಟಗಿ ಇದ್ದರು.