ಸ್ಟ್ಯಾಂಡ್ ಅಪ್‌ ಪೆಡಲ್ ಸರ್ಫಿಂಗ್: ಸ್ಪೈನ್‌ನ ಮೊರಿಲ್ಲ ಚಾಂಪಿಯನ್

KannadaprabhaNewsNetwork | Published : Mar 11, 2024 1:16 AM

ಸಾರಾಂಶ

ಡೆನ್ಮಾಕ್‌ನ ಕ್ರಿಸ್‌ ಆ್ಯಂಡರ್ಸನ್ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿಶ್ವ ನಾಮಾಂಕನದ ದ್ವಿತೀಯ ಸ್ಥಾನಿ ಸ್ವಿನಿಯನ್ ಫರ್ನಾಂಡೋ ತೃತೀಯ ಸ್ಥಾನಿಯಾಗಿದ್ದಾರೆ. ಮಹಿಳೆಯರ ಮುಕ್ತ ದೂರ ವಿಭಾಗದ ಸ್ಪರ್ಧೆಯಲ್ಲಿ ಸ್ಪೈನ್‌ ದೇಶದ ಎಸ್ಪಾರ್ನಾಸ್ ಬಾಗ್ರೆರಾಸ್ ಚಾಂಪಿಯನ್ ಆಗಿದ್ದಾರೆ. ಥೈಲ್ಯಾಂಡ್‌ನ ಈರಿನ್ ದ್ವಿತೀಯ, ಇಟೆಲಿಯ ಬಿನಾಕಾ ಟೋನ್ಸಿಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಪ್ರವಾಸೋದ್ಯಮ ಇಲಾಖೆ ಮತ್ತು ಸರ್ಫಿಂಗ್ ಸ್ವಾಮಿ ಫೌಂಡೇಶನ್ ಸಹಯೋಗದಲ್ಲಿ ಅಸೋಸಿಯೇಶನ್ ಅಪ್ ಪೆಡಲ್ ಸರ್ಫ್ ಪ್ರೊಫೆಷನಲ್ಸ್ ಎಪಿಪಿ ವರ್ಲ್ಡ್‌ ವತಿಯಿಂದ ಸಸಿಹಿತ್ಲುವಿನ ಮುಂಡಾ ಬೀಚ್‌ನಲ್ಲಿ ನಡೆಯುತ್ತಿರುವ ವಿಶ್ವ ಮಟ್ಟದ ಸ್ಟ್ಯಾಂಡ್ ಅಪ್‌ ಪೆಡಲ್ ಸರ್ಫಿಂಗ್ ಸ್ಪರ್ಧೆ ಪುರುಷರ ವಿಭಾಗದಲ್ಲಿ ಸ್ಪೈನ್‌ನ ಅಂಟೋನಿಯೋ ಮೊರಿಲ್ಲ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಡೆನ್ಮಾಕ್‌ನ ಕ್ರಿಸ್‌ ಆ್ಯಂಡರ್ಸನ್ ದ್ವಿತೀಯ ಸ್ಥಾನಿಯಾಗಿದ್ದಾರೆ. ವಿಶ್ವ ನಾಮಾಂಕನದ ದ್ವಿತೀಯ ಸ್ಥಾನಿ ಸ್ವಿನಿಯನ್ ಫರ್ನಾಂಡೋ ತೃತೀಯ ಸ್ಥಾನಿಯಾಗಿದ್ದಾರೆ. ಮಹಿಳೆಯರ ಮುಕ್ತ ದೂರ ವಿಭಾಗದ ಸ್ಪರ್ಧೆಯಲ್ಲಿ ಸ್ಪೈನ್‌ ದೇಶದ ಎಸ್ಪಾರ್ನಾಸ್ ಬಾಗ್ರೆರಾಸ್ ಚಾಂಪಿಯನ್ ಆಗಿದ್ದಾರೆ. ಥೈಲ್ಯಾಂಡ್‌ನ ಈರಿನ್ ದ್ವಿತೀಯ, ಇಟೆಲಿಯ ಬಿನಾಕಾ ಟೋನ್ಸಿಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಅಸೋಸಿಯೇಶನ್ ಆಫ್‌ ಪ್ಯಾಡಲ್‌ಸರ್ಫ್ ಪ್ರೊಫೆಷನಲ್ಸ್ ವರ್ಡ್‌ ಟೂರ್ (ಎಪಿಪಿ) ಆಶ್ರಯದಲ್ಲಿ ಸರ್ಫಿಂಗ್‌ ಸ್ವಾಮಿ ಫೌಂಡೇಶನ್‌, ರಾಜ್ಯ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಹಾಗೂ ಇತರ ಸಂಸ್ಥೆಗಳ ಸಹಯೋಗದಲ್ಲಿ ಸಸಿಹಿತ್ಲುವಿನ ಮುಂಡಾ ಬೀಚ್‌ನಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ದೇಶದ ಪ್ರಪ್ರಥಮ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗ್- ಇಂಡಿಯಾ ಪ್ಯಾಡಲ್ ಫೆಸ್ಟಿವಲ್‌ನಲ್ಲಿ ಅಂತಾರಾಷ್ಟ್ರೀಯ ಸ್ಟ್ಯಾಂಡ್ ಅಪ್ ಪ್ಯಾಡ್ಲಿಂಗ್‌ನಲ್ಲಿ ಜೂನಿಯರ್ ಅಂಡರ್- 16 ಬಾಲಕರ ವಿಭಾಗದಲ್ಲಿ ಸ್ಥಳೀಯ ಆಕಾಶ್‌ ಪೂಜಾರ್‌ (43.04 ನಿಮಿಷದೊಂದಿಗೆ ಪ್ರಥಮ ಸ್ಥಾನವನ್ನು, ಆಕಾಶ್‌ ಪೂಜಾರ್‌ ಸಂಬಂಧಿ ರವಿ ಪೂಜಾರ್‌ (47.24 )ನಿಮಿಷದೊಂದಿಗೆ ದ್ವಿತೀಯ ಸ್ಥಾನವನ್ನು ದಕ್ಷಿಣ ಕೊರಿಯಾದ ಜಿಹೂ ಹ್ಯಾಂಗ್‌ (52.52) ನಿಮಿಷದೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಸ್ಥಳೀಯ ಕಾಶ್‌ ಪೂಜಾರ್‌ 10ನೇ ತರಗತಿಯಲ್ಲಿ ಕಲಿಯುತ್ತಿದ್ದು ಜೊತೆಗೆ ಸರ್ಫಿಂಗ್‌ನಲ್ಲಿ ತರಬೇತಿ ಪಡೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ 16ರ ಕೆಳ ಹರೆಯದ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.

Share this article