ರಾಜ್ಯ ಸರ್ಕಾರಿ ನೌಕರರ ಸಂಘದ ಸಂಘ ಚುನಾವಣೆ: ಷಡಕ್ಷರಿ ಬಣಕ್ಕೆ ಮೇಲುಗೈ

KannadaprabhaNewsNetwork |  
Published : Nov 18, 2024, 12:01 AM IST
ಪೋಟೋ: 16ಎಸ್‌ಎಂಜಿಕೆಪಿ10ಶಿವಮೊಗ್ಗ ಜಿಲ್ಲಾ  ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳನ್ನು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌.ಷಡಾಕ್ಷರಿ ಅಭಿನಂದಿಸಿದರು. | Kannada Prabha

ಸಾರಾಂಶ

ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆ ನಡೆದಿದ್ದು, 28 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ವಿವಿಧ ಇಲಾಖೆಗೆ ಸೇರಿದ ಒಟ್ಟು 66 ಸ್ಥಾನಗಳಿಗೆ ಒಟ್ಟು 168 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 38 ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 28 ಸ್ಥಾನಗಳಿಗೆ ಶನಿವಾರ ಮೀನಾಕ್ಷಿ ಭವನ ಬಳಿ ಇರುವ ಕೆಪಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಚುನಾವಣೆ ನಡೆಯಿತು.

ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆ ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆ ನಡೆದಿದ್ದು, 28 ಮಂದಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ವಿವಿಧ ಇಲಾಖೆಗೆ ಸೇರಿದ ಒಟ್ಟು 66 ಸ್ಥಾನಗಳಿಗೆ ಒಟ್ಟು 168 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 38 ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 28 ಸ್ಥಾನಗಳಿಗೆ ಶನಿವಾರ ಮೀನಾಕ್ಷಿ ಭವನ ಬಳಿ ಇರುವ ಕೆಪಿಎಸ್‌ ಪಬ್ಲಿಕ್‌ ಶಾಲೆಯಲ್ಲಿ ಚುನಾವಣೆ ನಡೆಯಿತು.

ಷಡಕ್ಷರಿ ಬಣಕ್ಕೆ ಮೇಲೂಗೈ

ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಿ.ಎಸ್‌. ಷಡಾಕ್ಷರಿ ಬಣ ಮೇಲೂಗೈ ಸಾಧಿಸಿದೆ. ಚುನಾವಣೆಗೂ ಮುನ್ನಾ ನಡೆದ ಅವಿರೋಧವಾಗಿ ಆಯ್ಕೆಯಲ್ಲೂ ಷಡಾಕ್ಷರಿ ಬಣದ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದರು.

ಚುನಾವಣೆಯಲ್ಲಿ ಆಯ್ಕೆಯಾದವರು

ಬಿ.ಗಿರೀಶ್‌, ಜಿ.ಎಚ್‌. ಸತ್ಯನಾರಾಯಣ, ಪಿ.ಎಸ್‌. ದೀಪಕ್‌, ಎಚ್‌.ಕಿ ರಣ್‌, ಜಿ. ಪ್ರವೀಣ್‌ ಕುಮಾರ್‌, ಮಧುಸೂಧನ್‌, ಟಿ. ಕೊಟ್ರೇಶ್‌, ವಿ. ಅನಿತಾ, ರಂಗನಾಥ, ಎಸ್‌.ಜಿ. ಸತ್ಯಭಾಮ, ರಾಜು ಲಿಂಬು ಚೌಹಾನ್‌, ಡಾ. ಗುಡದಪ್ಪ ಕಸಬಿ, ಡಾ. ಸಿ.ಎ. ಹಿರೇಮಠ, ಪಿ.ಎಲ್‌. ಮಹೇಶ್‌, ಎಸ್‌.ವೈ. ರಮೇಶ್‌, ಕೆ.ಎಚ್‌. ಮಹೇಶ್‌, ಲಿಂಗಪ್ಪ, ಧರ್ಮಪ್ಪ, ಡಿ.ಟಿ. ಶಶಿಧರ್‌, ಧನ್ಯಕುಮಾರ್‌, ಜಿ. ಹನುಮಂತಪ್ಪ, ವಿ.ಬಿ. ಅಣ್ಣಪ್ಪ, ವೈ. ರವಿಕಿರಣ್, ಚನ್ನಕೇಶವಮೂರ್ತಿ, ಸುಬ್ರಮಣ್ಯ ಚಾದವ್‌, ವಿಜಯ್‌ ಆಂಟೋ ಸಗಾಯ್‌, ಟಿ.ಜಿ. ಅಶೋಕ್‌, ಕೆ. ನರಸಿಂಹ.ರಾಜ್ಯಾಧ್ಯಕ್ಷನಾಗಿ ಸಲ್ಲಿಸಿದ ಸೇವೆಯನ್ನು ನೌಕರರು ಮೆಚ್ಚಿರುವ ಫಲವಾಗಿ ಚುನಾವಣೆಯಲ್ಲಿ ನಮಗೆ ಮೇಲೂಗೈ ಸಾಧಿಸಲು ಸಾಧ್ಯವಾಗಿದೆ. ಮುಂದಿನ ದಿನದಲ್ಲಿ ನೌಕರರ ಕ್ಷೇಮಾಭಿವೃದ್ಧಿ ಜೊತೆಗೆ ಸಂಘದ ಅಭಿವೃದ್ಧಿಗೂ ಹೆಚ್ಚಿನ ಶ್ರಮ ಹಾಕಲಾಗುವುದು.

ಸಿ.ಎಸ್‌.ಷಡಾಕ್ಷರಿ ರಾಜ್ಯಾಧ್ಯಕ್ಷ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ