ರಾಜ್ಯ ಮಟ್ಟದ ಕಾಂಗ್ರೆಸ್‌ ಸಮಾವೇಶಕ್ಕೆ ಬೆಳ್ತಂಗಡಿಯಿಂದ 10 ಸಾವಿರ ಕಾರ್ಯಕರ್ತರು

KannadaprabhaNewsNetwork | Published : Feb 14, 2024 2:17 AM

ಸಾರಾಂಶ

ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಈಗಾಗಲೇ ಜಿ.ಪಂ, ತಾ.ಪಂ ವ್ಯಾಪ್ತಿಗೆ ಸಂಚಾಲಕರನ್ನು ನೇಮಕ ಮಾಡಿ ಗ್ರಾಮ ಮಟ್ಟದಲ್ಲಿ ಸಭೆಗಳು ನಡೆಯುತ್ತಿದೆ ಎಂದರು.

ಬೆಳ್ತಂಗಡಿ: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ವಠಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವು ಫೆ.17 ರಂದು ನಡೆಯಲಿದ್ದು ಈ ಸಮಾವೇಶಕ್ಕೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ 10 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಹೇಳಿದರು.

ಅವರು ಮಂಗಳವಾರ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಮಾವೇಶದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಈಗಾಗಲೇ ಜಿ.ಪಂ, ತಾ.ಪಂ ವ್ಯಾಪ್ತಿಗೆ ಸಂಚಾಲಕರನ್ನು ನೇಮಕ ಮಾಡಿ ಗ್ರಾಮ ಮಟ್ಟದಲ್ಲಿ ಸಭೆಗಳು ನಡೆಯುತ್ತಿದೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸತೀಶ್ ಬಂಗೇರ ಕಾಶಿಪಟ್ನ, ನಾಗೇಶ್ ಕುಮಾರ್ ಗೌಡ, ಜಿ.ಪಂ. ಮಾಜಿ ಉಪಾಧ್ಯಕ್ಷ, ಜಿ.ಪಂಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್, ನಮಿತಾ, ಹಿರಿಯ ಮುಖಂಡ ಲೋಕೇಶ್ವರಿ ವಿನಯಚಂದ್ರ, ಬೊಮ್ಮಣ್ಣ ಗೌಡ, ಪದ್ಮನಾಭ ಸಾಲಿಯಾನ್ ಮಾಲಾಡಿ,ಇಸ್ಮಾಯಿಲ್ ಪೆರಿಂಜೆ,ಸುಭಾಶ್ಚಂದ್ರ ರೈ ಅಳದಂಗಡಿ ಇದ್ದರು. ಗುಂಡ್ಯದಲ್ಲಿ ಎಲಿಫೆಂಟ್ ಕ್ಯಾಂಪ್‌- ಆನೆಗಳ ಉಪಟಳದಿಂದ ಕೃಷಿಗೆ ಹಾನಿಯಾಗುತ್ತಿದ್ದು ಗುಂಡ್ಯದಲ್ಲಿ ಎಲಿಫೆಂಟ್ ಕ್ಯಾಂಪ್‌ ಮಾಡಬೇಕೆಂದು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ಬೆಳ್ತಂಗಡಿಗೆ ಆಗಮಿಸಿದ ಸಚಿವ ಈಶ್ವರ ಖಂಡ್ರೆ ಅವರೊಂದಿಗೂ ಈ ಬಗ್ಗೆ ಚರ್ಚಿಸಲಾಗಿದೆ. ಈ ಎಲಿಫೆಂಟ್‌ ಕ್ಯಾಂಪ್‌ ನಿರ್ಮಾಣವಾದರೆ ಅಲ್ಲಿ ಸುಮಾರು‌ 16 ಆನೆಗಳನ್ನು ಇರಿಸಲಾಗುತ್ತದೆ. ಜತೆಗೆ ಬೆಳ್ತಂಗಡಿ ಪ್ರದೇಶಗಳಲ್ಲಿರುವ ನಾಗರ ಬೆತ್ತ ಸಂರಕ್ಷಣೆ ಮತ್ತು ಅದರ ವ್ಯಾಪ್ತಿ ವಿಸ್ತರಣೆಗೆ ಅವಕಾಶ ನೀಡಬೇಕೆಂದು ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದು ರಕ್ಷಿತ್ ಶಿವರಾಂ ಹೇಳಿದರು.

Share this article