ರಾಜ್ಯ ಮಟ್ಟದ ಯೋಗಾಸನ: ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿ

KannadaprabhaNewsNetwork |  
Published : Aug 23, 2024, 01:01 AM IST
ರಾಜ್ಯ ಮಟ್ಟದ ಯೋಗಾಸನ : ಆಳ್ವಾಸ್‌ಗೆ ಸಮಗ್ರ ಪ್ರಶಸ್ತಿಎಂಟು ಯೋಗಪಟುಗಳು ರಾಷ್ಟ್ರಮಟ್ಟಕ್ಕೆ ಆಯ್ಕೆ | Kannada Prabha

ಸಾರಾಂಶ

ವಿಜೇತ ಯೋಗಪಟುಗಳನ್ನು ಅಭಿನಂದಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು, ರಾಷ್ಟ್ರಮಟ್ಟದಲ್ಲಿ ವಿಜೇತ ಯೋಗಪಟುಗಳಿಗೆ ಖೇಲೋ ಇಂಡಿಯಾದಲ್ಲಿ ಭಾಗವಹಿಸಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಕಡೂರಿನ ಸ್ನೇಹಮಯಿ ಯೋಗ ಕೇಂದ್ರದ ಸಹಯೋಗದಲ್ಲಿ ಕರ್ನಾಟಕ ಯೋಗಾಸನ ಸ್ಪೋರ್ಟ್ಸ್ ಅಸೋಸಿಯೇಷನ್ ನಡೆಸಿದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದು, 8 ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ವಿಭಾಗ: 18 ರಿಂದ 28 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನದಲ್ಲಿ ನಿರ್ಮಲ ಸುಭಾಷ್ ಕೊಡ್ಲಿಕರ್, ಅನನ್ಯ ಸಂಬಯ್ಯಾ ಹಿರೇಮಠ (ಪ್ರಥಮ), 18 ರಿಂದ 28 ವಯೋಮಿತಿಯ ಆರ್ಟಿಸ್ಟಿಕ್ ಪೇರ್ ಯೋಗಾಸನದಲ್ಲಿ ನಿರ್ಮಲ ಸುಭಾಷ್ ಕೊಡ್ಲಿಕರ್, ಅನನ್ಯ ಸಂಬಯ್ಯಾ ಹಿರೇಮಠ (ದ್ವಿತೀಯ), 18 ರಿಂದ 28 ವಯೋಮಿತಿಯ ಆರ್ಟಿಸ್ಟಿಕ್ ಯೋಗಾಸನದಲ್ಲಿ ನಿರ್ಮಲ ಸುಭಾಷ್ ಕೊಡ್ಲಿಕರ್ (ದ್ವಿತೀಯ), 18 ರಿಂದ 28 ವಯೋಮಿತಿಯ ಟ್ರಡಿಷನಲ್ ಯೋಗಸನದಲ್ಲಿ ಅನನ್ಯ ಸಂಬಯ್ಯಾ ಹಿರೇಮಠ್ (ತೃತೀಯ) ಬಹುಮಾನ ಗಳಿಸಿದ್ದಾರೆ. ಬಾಲಕರ ವಿಭಾಗ: 14 ರಿಂದ 18 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನದಲ್ಲಿ ಸುಶೀಲ್ ಕುಮಾರ್ ಚೌಹಾನ್ (ಪ್ರಥಮ), 14 ರಿಂದ 18 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನದಲ್ಲಿ ಚಂದ್ರಶೇಖರ ಹಡಗಲಿ, ಪೃಥ್ವಿಚಾರ್. ಎನ್ (ತೃತೀಯ), 14 ರಿಂದ 18 ವಯೋಮಿತಿಯ ಆರ್ಟಿಸ್ಟಿಕ್ ಪೇರ್ ಯೋಗಾಸನದಲ್ಲಿ ಚಂದ್ರಶೇಖರ ಹಡಗಲಿ, ಪೃಥ್ವಿಚಾರ್. ಎನ್ (ದ್ವಿತೀಯ), 10 ರಿಂದ 14 ವಯೋಮಿತಿಯ ರಿದಮಿಕ್ ಪೇರ್ ಯೋಗಾಸನದಲ್ಲಿ ಆದರ್ಶ್ ಕಲ್ಲಪ್ಪ ಸಾವಳೆ, ಶಶಾಂಕ್. ಬಿ (ತೃತೀಯ) ಸ್ಥಾನ ಪಡೆದಿದ್ದಾರೆ.

ವಿಜೇತ ಯೋಗಪಟುಗಳನ್ನು ಅಭಿನಂದಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು, ರಾಷ್ಟ್ರಮಟ್ಟದಲ್ಲಿ ವಿಜೇತ ಯೋಗಪಟುಗಳಿಗೆ ಖೇಲೋ ಇಂಡಿಯಾದಲ್ಲಿ ಭಾಗವಹಿಸಲು ಅವಕಾಶ ಇದೆ ಎಂದು ತಿಳಿಸಿದ್ದಾರೆ.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ