ಕನ್ನಡಪ್ರಭ ವಾರ್ತೆ ಜಮಖಂಡಿ
ತಾಲ್ಲೂಕಿನ ಮಧುರಖಂಡಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಆಶ್ರಯ ಕಾಲನಿ (ಹುಲಿಕೋಡಿ)ಯ ಸರ್ವೇ ನಂ.23ರಲ್ಲಿನ ಅತಿಕ್ರಮಣವನ್ನು ಒಂದು ವಾರದೋಳಗೆ ತಾಲೂಕು ಆಡಳಿತ ಹಾಗೂ ತಾಪಂ ಕ್ರಮ ತೆಗೆದುಕೊಳ್ಳದಿದ್ದಲ್ಲಿ ತಾಲೂಕು ಆಡಳಿತ ಸೌಧದ ಎದುರು ಕಪ್ಪು ಬಟ್ಟೆ ಧರಿಸಿ ಧರಣಿ ನಡೆಸಲಾಗುವುದು ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಪರುಶುರಾಮ ಕಾಂಬಳೆ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡತನ ರೇಖೆಗಿಂತ ಕೆಳಗಿರುವವರಿಗೆ ಸೇರಿದ ಕಂದಾಯ ಭೂಮಿಯಲ್ಲಿ ಗ್ರಾಮದ ಸರ್ವೆ ನಂ 23ರಲ್ಲಿ 10 ಎಕರೆ 35 ಗುಂಟೆಯಲ್ಲಿ 1991-92ರಲ್ಲಿ ಆಶ್ರಯ ಯೋಜನೆಯಲ್ಲಿ ಎಲ್ಲ ವರ್ಗದ ಜನರಿಗೆ ಸುಮರು 100ಕ್ಕೂ ಅಧಿಕ ಜನರಿಗೆ ಹಕ್ಕುಪತ್ರ ವಿತರಣೆ ಮಾಡಿದ್ದಾರೆ. ಇಲ್ಲಿ ರಸ್ತೆ ಇರುವ ಬಗ್ಗೆ ಸ್ಥಳೀಯರು ಅನುಮಾನಗೊಂಡು ಕಂದಾಯ ಸರ್ವೆ ಮಾಡಿಸಿದಾಗ ರಸ್ತೆ ಜಾಗ ಒತ್ತುವರಿ ಮಾಡಿರುವುದು ಬೆಳಕಿಗೆ ಬಂದಿದೆ ಎಂದರು.
ಮಧುರಖಂಡಿ ಗ್ರಾಪಂ ವ್ಯಾಪ್ತಿಯ ಆಶ್ರಯ ಪ್ಲಾಟ್ (ಹುಲಿಕೋಡಿ) ಗ್ರಾಮದ ಸಾರ್ವಜನಿಕರ ರಸ್ತೆ ಅತಿಕ್ರಮಣ ತೆರವಿಗಾಗಿ ಕಳೆದ ಜೂನ್ ತಿಂಗಳಿನಲ್ಲಿ ತಾಪಂ ಕಚೇರಿಯ ಆವರಣದಲ್ಲಿ ಸಾರ್ವಜನಿಕರು ಮತ್ತು ಡಿಎಸ್ ಎಸ್ ಸಂಘಟನೆ ವತಿಯಿಂದ ಧರಣಿ ಸತ್ಯಾಗ್ರಹ ನಡೆಸಲಾಗಿತ್ತು. ತಾಪಂ ಅಧಿಕಾರಿಗಳು ಮತ್ತು ತಹಶೀಲ್ದಾರರ ಸರ್ವೆ ನಕ್ಷೆಯ ಪ್ರಕಾರ ತೆರೆವುಗೋಳಿಸುತ್ತಿರುವಾಗ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ಕಾರ್ಯಾಚರಣೆ ನಿಲ್ಲಿಸಲಾಗಿತ್ತು. ಮುಂಬರುವ ದಿನಗಳಲ್ಲಿ ಕೋರ್ಟಿನ ನಿರ್ದೆಶನ ಬಂದ ಮೇಲೆ ಕ್ರಮ ಕೈಗೂಳಲಾಗುವುದು ಎಂದು ಪಿಡಿಒ ಹಿಂಬರಹ ನೀಡಿದ್ದರು ಎಂದ್ದರು.ಇಲ್ಲಿಯವರೆಗೆ ಪಿಡಿಒ ಆಗಲಿ ಅಥವಾ ತಾಪಂ ಅಧಿಕಾರಿಗಳಾಗಲಿ ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಇಲ್ಲಿನ ಗ್ರಾಪಂ ಪಿಡಿಒ ಸರ್ಕಾರಿ ನೌಕರರಾಗಿದ್ದು ಸಾರ್ವಜನಿಕರ ರಸ್ತೆ ಅತಿಕ್ರಮಣ ಮಾಡಿದವರಿಗೆ ಬೆಂಬಲಿಸುತ್ತ ಜನರ ಕಾನೂನಿನ ವಿರೋಧಿಗಳಾಗಿದ್ದಾರೆ ಇವರ ನಡೆ ಅನುಮಾನಸ್ಪದವಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೆ ಜಿಲ್ಲಾಮಟ್ಟದ ಅಧಿಕಾರಿಗಳು ಕುಲಂಕುಶವಾಗಿ ಅವಲೋಕಿಸಿ ಇಲ್ಲಿನ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ಗಮನಿಸಿ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಸದಾಶಿವ ಐನಾಪೂರ, ಶ್ರೀಶೈಲ ಕಾಂಬಳೆ, ಬಸವರಾಜ ದೊಡಮನಿ, ಕಲ್ಲಪ್ಪ ತೇಲಿ, ಶೇಖರ ಭಜಂತ್ರಿ ಇದ್ದರು.