ರಾಮನಗರ: ವಿಧಾನ ಪರಿಷತ್ ನಲ್ಲಿ ಬಲ ಹೆಚ್ಚಿಸಿಕೊಳ್ಳುವುದು ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯಾಗಿದ್ದರೆ, ತನ್ನ ಭದ್ರಕೊಟೆ ಉಳಿಸಿಕೊಳ್ಳುವ ಛಲದ ಜೊತೆಗೆ ಅಸ್ತಿತ್ವ ಉಳಿಸಿಕೊಳ್ಳುವ ಸವಾಲು ಜೆಡಿಎಸ್ - ಬಿಜೆಪಿ ಮೈತ್ರಿಕೂಟದ ಮುಂದಿದೆ.
ಮೇಲ್ಮನೆಯಲ್ಲಿ ಯಾವುದೇ ಮಸೂದೆಗಳು ಅಂಗೀಕಾರ ಪಡೆಯಬೇಕಾದರು ಸಂಖ್ಯಾಬಲ ಮುಖ್ಯ. ಇಲ್ಲದಿದ್ದರೆ ಆಡಳಿತರೂಢ ಕಾಂಗ್ರೆಸ್ ಮುಖಭಂಗ ಅನುಭವಿಸಬೇಕಾಗುತ್ತದೆ. ಅಲ್ಲದೆ, ಜೆಡಿಎಸ್ - ಬಿಜೆಪಿ ಮೈತ್ರಿ ಪಕ್ಷಗಳು ತಿರುಗಿ ಬಿದ್ದರೆ ಹಿನ್ನಡೆಗೆ ಕಾರಣವಾಗುತ್ತದೆ ಎಂಬುದು ಕೈ ನಾಯಕರಿಗೂ ಗೊತ್ತಿದೆ. ಹೀಗಾಗಿ ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಸಂಖ್ಯಾಬಲ ವೃದ್ಧಿಸಿಕೊಳ್ಳಲು ಪಣತೊಟ್ಟಿದೆ. ಈ ಕಾರಣದಿಂದಾಗಿಯೇ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ.ಇನ್ನು ಲೋಕಸಭಾ ಚುನಾವಣಾ ದೃಷ್ಟಿಯಿಂದ ಮೈತ್ರಿ ಸಾಧಿಸಿರುವ ಜೆಡಿಎಸ್ - ಬಿಜೆಪಿ ಪಕ್ಷಗಳು, ಈ ಉಪಚುನಾವಣೆಯಲ್ಲಿಯೇ ಗೆಲುವು ಸಾಧಿಸಿ ತಮ್ಮ ಗೆಳೆತನವನ್ನು ಗಟ್ಟಿ ಮಾಡಿಕೊಳ್ಳಲು ಕಸರತ್ತು ನಡೆಸಿದ್ದಾರೆ. ಮೈತ್ರಿ ಅಭ್ಯರ್ಥಿ ರಂಗನಾಥ್ ಅವರನ್ನು ಗೆಲುವಿನ ದಡ ಸೇರಿಸಲು ಉಭಯ ಪಕ್ಷಗಳ ಕಾರ್ಯಕರ್ತರು ಹಗಲಿರಳು ಶ್ರಮಿಸುತ್ತಿದ್ದಾರೆ.
ರಾಜಕೀಯ ಅಧಿಕಾರ ಶಕ್ತಿ ಕೇಂದ್ರದಲ್ಲಿರುವ ಬೆಂಗಳೂರು ಶಿಕ್ಷಕರ ಕ್ಷೇತ್ರ ಅತ್ಯಂತ ಪ್ರಭಾವಿ, ನೀತಿ- ನಿರೂಪಣೆ ದೃಷ್ಟಿಯಲ್ಲೂ ನಿರ್ಣಾಯಕ ಪಾತ್ರ ವಹಿಸುತ್ತಿದೆ. ಬದಲಾದ ರಾಜಕೀಯ ವಿದ್ಯಮಾನ, ಜಾತಿವಾರು ಲೆಕ್ಕಾಚಾರ ಕ್ಷೇತ್ರದ ರಾಜಕೀಯ ನಕ್ಷೆಯನ್ನು ಬದಲಾಯಿಸಿದೆ. ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸಿನ ಜತೆಗೆ ಆಯಾಯ ಪಕ್ಷಗಳ ಪ್ರಭಾವವೂ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಹಾಗೆಯೆ ಹೆಸರು ನೊಂದಣಿಯಲ್ಲೂ ಅರ್ಹ ಶಿಕ್ಷಕರು ಹೆಚ್ಚಿನ ಉತ್ಸಾಹ ತೊರಿಸದಿರುವುದು ಎದ್ದು ಕಾಣುತ್ತಿದೆ.ಶಿಕ್ಷಣ ಕ್ಷೇತ್ರ ಬೆಳೆದಂತೆ ಸಮಸ್ಯೆಗಳೂ ಹೆಚ್ಚಾಗಿದೆ. ಶಿಕ್ಷಕರ ಜತೆಗೆ ನಿಕಟ ಬಾಂಧವ್ಯ, ಸಮಸ್ಯೆಗಳಿಗೆ ಸ್ಪಂದನೆ, ಶಿಕ್ಷಣ ಸಂಸ್ಥೆಗಳು ಹಾಗೂ ಸಂಘಟನೆಗಳೊಂದಿಗೆ ಒಡನಾಟವೇ ಪೈಪೊಟಿಗೆ ಇಳಿದವರ ಭವಿಷ್ಯ ನಿರ್ಧರಿಸಿಲಿದೆ ಎಂಬುದನ್ನು ಈವರೆಗಿನ ಚುನಾವಣೆ ಫಲಿತಾಂಶಗಳು ಸಾರಿ ಹೇಳುತ್ತವೆ.
ಗೆಲುವಿಗಾಗಿ ಅಭ್ಯರ್ಥಿಗಳ ಕಸರತ್ತು :ಜೆಡಿಎಸ್ ನಿಂದ 3 ಹಾಗೂ ಬಿಜೆಪಿಯಿಂದ 1 ಬಾರಿ ಗೆದ್ದಿರುವ ಪುಟ್ಟಣ್ಣ ಈ ಬಾರಿ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿರುವುದನ್ನು ಮತದಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಅಲ್ಲದೆ, ತಮ್ಮ ಹಿಂದಿನ ಸಾಧನೆ, ಮುಂದಿನ ಗುರಿ ಇಟ್ಟುಕೊಂಡು ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಪರಿಣತರು, ತಮ್ಮದೆ ಆದ ಪ್ರಭಾವ ಬೀರುವವರ ಒಲವು ಗಿಟ್ಟಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಇನ್ನು ವಿದ್ಯಾರ್ಥಿ ದಿಸೆಯಿಂದಲೇ ನಾಯಕತ್ವ ಗುಣ ಬೆಳೆಸಿಕೊಂಡಿರುವ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎ.ಪಿ.ರಂಗನಾಥ ವಕೀಲರಾಗಿ ಚಿರಪರಿಚಿತರು. ವಕೀಲರ ಸಂಘ- ಸಂಸ್ಥೆಗಳಲ್ಲಿ ಮಹತ್ವದ ಜವಾಬ್ದಾರಿ ನಿಭಾಯಿಸಿದ್ದು, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರೂ ಆಗಿದ್ದಾರೆ.ಜೆಡಿಎಸ್ - ಬಿಜೆಪಿ ಪಕ್ಷದ ಗಟ್ಟಿ ನೆಲೆ, ಎರಡೂ ಪಕ್ಷಗಳು ಅಧಿಕಾರದಲ್ಲಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳು. ನಾಯಕರಾದ ಎಚ್.ಡಿ.ದೇವೇಗೌಡ, ಎಚ್.ಡಿ. ಕುಮಾರಸ್ವಾಮಿ, ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಅನೇಕ ಪ್ರಬಲ ನಾಯಕರ ವರ್ಚಸ್ಸನ್ನು ನೆಚ್ಚಿಕೊಂಡಿದ್ದಾರೆ.
ಬಾಕ್ಸ್ ..............ಕ್ಷೇತ್ರದ ವ್ಯಾಪ್ತಿ :
ಬೆಂಗಳೂರು ನಗರ, ಗ್ರಾಮಿಣ, ರಾಮನಗರ ಜಿಲ್ಲೆಗಳು. 5 ಲೊಕ ಸಭಾ ಹಾಗೂ 36 ವಿಧಾನಸಭಾ ಕ್ಷೆತಗಳನ್ನು ಒಳಗೊಂಡಿದೆ. ಸರ್ಕಾರಿ, ಖಾಸಗಿ ಅನುದಾನಿತ, ಅನುದಾನರಹಿತ ಸೇರಿ ಸುಮಾರು 6,500 ಶಿಕ್ಷಣ ಸಂಸ್ಥೆಗಳಿರುವ ಅಂದಾಜು.ಬಾಕ್ಸ್ ............ರಾಜಕೀಯ ಬಲಾಬಲ :
ಲೊಕಸಭಾ ಸದಸ್ಯರು: 4 ಬಿಜೆಪಿ, 1 ಕಾಂಗ್ರೆಸ್.ವಿಧಾನಸಭಾ ಕ್ಷೇತ್ರ: 18 - ಕಾಂಗ್ರೆಸ್ , 17 - ಬಿಜೆಪಿ, 01 - ಜೆಡಿಎಸ್
ಬಾಕ್ಸ್ ..........ಕಣದಲ್ಲಿರುವ ಅಭ್ಯರ್ಥಿಗಳು
ಕಾಂಗ್ರೆಸ್: ಪುಟ್ಟಣ್ಣಜೆಡಿಎಸ್: ಬಿಜೆಪಿ - ಎ.ಪಿ.ರಂಗನಾಥ
ಪಕ್ಷೇತರರು: ಕೃಷ್ಣವೇಣಿ, ಬಿ.ನಾರಾಯಣಸ್ವಾಮಿ, ಮಂಜುನಾಥ, ಬಿ.ಕೆ.ರಂಗನಾಥ, ಟಿ.ರಂಗನಾಥ, ವೀಣಾ ಸೆರೆವಾ, ಸುನಿಲ್ ಕುಮಾರ್ .ಬಾಕ್ಸ್ .............
ಮತದಾರರ ವಿವರಪುರುಷರ.
7145ಮಹಿಳೆಯರ.
12,035ಇತರ.
01ಒಟ್ಟ.19,18113ಕೆಆರ್ ಎಂಎನ್ 6,7.ಜೆಪಿಜಿ
6.ಪುಟ್ಟಣ್ಣ7.ಎ.ಪಿ.ರಂಗನಾಥ