ವಿದ್ಯಾರ್ಥಿಗಳು ಆದರ್ಶ ಮೌಲ್ಯ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Jun 03, 2024, 12:30 AM IST
ಪೋಟೊ ಕ್ಯಾಪ್ಸನ್:ಡಂಬಳ ಗ್ರಾಮದ ಜೆ.ಟಿ.ಬಾಲಕಿಯರ ಮತ್ತು ಬಾಲಕರ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ಪವನ್ನು ನೀಡಿ ಬರಮಾಡಿಕೊಂಡ ತೋಂಟದಾರ್ಯ ಮಠದ ಕಾರ್ಯದರ್ಶಿ ಎಸ್.ಎಸ್.ಪಟ್ಟಣಶೆಟ್ಟರ.ಪೋಟೊಕ್ಯಾಪ್ಸನ್:ಡಂಬಳ ಗ್ರಾಮದ ಜೆ.ಟಿ.ಬಾಲಕಿಯರ ಮತ್ತು ಬಾಲಕರ ಪ್ರೌಡ ಶಾಲೆಯ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳುವ ಮತ್ತು ನಿವೃತ್ತಿಹೊಂದಿದ ಅಂಟೆಡರ್ ಟಿ.ವಿ.ಬಿರಳ್ಳಿ ಅವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲಗೊಂಡು ಮಾತನಾಡಿದ ಗೋಣಿಬಸಪ್ಪ ಕೊರ್ಲಹಳ್ಳಿ. | Kannada Prabha

ಸಾರಾಂಶ

ಉತ್ತಮ ಫಲಿತಾಂಶ ತರುವುದರ ಮೂಲಕ ಸಾಧನೆ ಮಾಡಿರುವುದು ಪ್ರಶಂಸನೀಯ

ಡಂಬಳ: ಆದರ್ಶ ಬದುಕಿನ ಜೀವನಕ್ಕಾಗಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಶಿಕ್ಷಕರ ಆದರ್ಶ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಭವಿಷ್ಯದ ದಿನಗಳನ್ನು ಉತ್ತಮವಾಗಿಸಿಕೊಳ್ಳಲು ಮುಂದಾಗಬೇಕು ಎಂದು ಪರಿಸರವಾದಿ ಗೋಣಿಬಸಪ್ಪ ಎಸ್ ಕೋರ್ಲಹಳ್ಳಿ ಹೇಳಿದರು.

ಗ್ರಾಮದ ಜೆ.ಟಿ. ಬಾಲಕಿಯರು ಮತ್ತು ಬಾಲಕರ ಪ್ರೌಢಶಾಲೆಯ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿದ ಅವರು, ತಂದೆ-ತಾಯಿ, ಗುರುಗಳು, ಸಮಾಜದ ಋಣ ತೀರಿಸಿದಾಗ ಸಮಾಜದಲ್ಲಿ ಬೆಳೆಯಲು ಸಾಧ್ಯ ಎಂದರು.

ತೋಂಟದಾರ್ಯ ಮಠದ ಕಾರ್ಯದರ್ಶಿ ಎಸ್.ಎಸ್. ಪಟ್ಟಣಶೆಟ್ಟರ ಮಾತನಾಡಿ, ಲಿಂ.ಡಾ. ತೋಂಟದ ಸಿದ್ದಲಿಂಗ ಶ್ರೀಗಳು ಗ್ರಾಮೀಣ ಬಡ ಮಕ್ಕಳ ಭವಿಷ್ಯ ಸುಂದರವಾಗಬೇಕು ಎನ್ನುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿದರು. ಅಷ್ಟೆ ಅಲ್ಲದೆ ಮಠದ ಭೂಮಿ ಬಡಕುಟುಂಬಗಳು ಮನೆ ನಿರ್ಮಿಸಿಕೊಂಡು ಇರುವುದಕ್ಕಾಗಿ ಜಾಗೆ ಕೊಡುವುದರ ಮೂಲಕ ಸದಾ ಕಾಲ ಬಡವರ ಹಿತ್ತಕ್ಕಾಗಿ ಬಡ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಿದವರು. ಶಿಕ್ಷಕರಿಂದ ವಿದ್ಯಾರ್ಥಿಗಳು ಜ್ಞಾನ ಸಂಪಾದನೆ ಮಾಡಬೇಕು. ಗುರುಗಳ ಮೂಲಕ ಪ್ರತಿವರ್ಷ ವಿದ್ಯಾರ್ಥಿಗಳ ಗುಣಮಟ್ಟ ಶಿಕ್ಷಣಕ್ಕೆ ಆದ್ಯತೆ ನೀಡುತ್ತಾ ಬಂದಿದ್ದು ಈ ಭಾರಿ ನುರಿತ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಮತ್ತು ಬಾಲಕಿಯರ ಪ್ರೌಡಶಾಲೆಯ ವಿದ್ಯಾರ್ಥಿನಿಯರ ಉತ್ತಮ ಫಲಿತಾಂಶ ತರುವುದರ ಮೂಲಕ ಸಾಧನೆ ಮಾಡಿರುವುದು ಪ್ರಶಂಸನೀಯ ಎಂದು ಹೇಳಿದರು.

ಜೆ.ಟಿ. ಬಾಲಕಿಯರ ಮತ್ತು ಬಾಲಕರ ಪ್ರೌಢ ಶಾಲೆಯ ವತಿಯಿಂದ ನಿವೃತ್ತಿ ಹೊಂದಿದ ಅಂಟೆಡರ್ ಟಿ.ವಿ.ಬಿರಳ್ಳಿ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ವಿ.ಎಸ್. ಯರಾಶಿ, ಮಹೇಶ ಗಡಗಿ, ಮುತ್ತಣ್ಣ ಕೊಂತಿಕಲ್ಲ, ಜಿ.ವಿ. ಹಿರೇಮಠ, ಎಂ.ಬಿ.ಮಡಿವಾಳರ, ಎಂ.ಕೆ. ಹರಿಜನ್, ಪ್ರೌಢಶಾಲಾ ಮುಖ್ಯೋಪಾಧ್ಯಯ ಶಂಕರಗೌಡ ಕಲ್ಲಿಗನೂರ, ಎ.ಬಿ.ಬೇವಿನಕಟ್ಟಿ, ವಿ.ಎಸ್. ಹಿರೇಮಠ, ಎಸ್.ಎಂ. ಹಂಚಿನಾಳ, ಜೆ.ಬಿ. ಕಡಬಲಕಟ್ಟಿ, ಬಿ.ಎಸ್. ಕಣವಿ, ಎಂ.ಎಚ್. ಹಿರೇಮಠ, ಎಸ್.ಬಿ. ಸಂಕಣ್ಣವರ, ಬಿ.ಕೆ. ನಿಂಬನಗೌಡ್ರ, ವಿ.ಬಿ. ಬೀಡಿ, ಎಸ್.ಬಿ. ಹಿರೇಮಠ ಸ್ವಾಗತಿಸಿದರು. ಪ್ರಕಾಶ ತಳವಾರ ನಿರೂಪಿಸಿದರು, ಡಿ.ಎಂ.ರಾಠೋಡ ವಂದಿಸಿದರು. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು, ಗುರುವೃಂದ, ಸಿಬ್ಬಂದಿ ವರ್ಗ ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...