ವಿದ್ಯಾರ್ಥಿಗಳು ಶಿಕ್ಷಣದ ಜತೆ ವಿನಯ ಅಳವಡಿಸಿಕೊಳ್ಳಿ

KannadaprabhaNewsNetwork |  
Published : Aug 11, 2024, 01:38 AM IST
ಕ್ಯಾಪ್ಷನ್-ಲಕ್ಷ್ಮೇಶ್ವರದ ಪುರಸಭೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತಿಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಿ.ಎನ್.ದೊಡ್ಡಮನಿ, ಎಸ್.ಎಚ್.ಪೂಜಾರ, ಎ.ವಾಯ್.ಕಳ್ಳಿಮನಿ ಇದ್ದರು.ಗುರು ಹಿರಿಯರನ್ನು ಗೌರವಿಸುವ ಸಂಪ್ರದಾಯ ಬೆಳೆಸಿಕೊಳ್ಳಿ ಉಪನ್ಯಾಸಕ ಬಿ.ಎನ್.ದೊಡ್ಡಮನಿ ಕರೆ | Kannada Prabha

ಸಾರಾಂಶ

ಸಾಧನೆ ಎನ್ನುವದು ಸೋಮಾರಿಯ ಸೊತ್ತಲ್ಲ, ಅದು ಸಾಧಕನ ಸೊತ್ತಾಗಿದೆ

ಲಕ್ಷ್ಮೇಶ್ವರ: ವಿದ್ಯಾರ್ಥಿಗಳು ಶಿಕ್ಷಣದ ಜತೆ ವಿನಯ ಅಳವಡಿಸಿಕೊಳ್ಳಬೇಕು. ಯುವಕರು ಗುರು, ಹಿರಿಯರು, ತಂದೆ ತಾಯಿಯನ್ನು ಗೌರವದಿಂದ ನೋಡಿಕೊಳ್ಳುವ ಕಾರ್ಯ ಅಗತ್ಯವಾಗಿದೆ ಎಂದು ಸರ್ಕಾರಿ ಪಪೂ ಕಾಲೇಜ ಸಮಾಜಶಾಸ್ತ್ರದ ಉಪನ್ಯಾಸಕ ಬಿ.ಎನ್. ದೊಡ್ಡಮನಿ ಹೇಳಿದರು.

ಶನಿವಾರ ಪಟ್ಟಣದ ಪುರಸಭೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಶನಿವಾ 2023-24 ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆ ಹಾಗೂ ದ್ವಿತಿಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆಧುನಿಕ ಜಗತ್ತಿನಲ್ಲಿ ಶಿಕ್ಷಣ ವೇಗವಾಗಿ ಸಾಗುತ್ತಿದೆ, ಅದಕ್ಕೆ ತಕ್ಕಂತೆ ಸಿದ್ಧರಾಗುವುದು ಅವಶ್ಯವಾಗಿದೆ. ಸಾಧನೆ ಎನ್ನುವದು ಸೋಮಾರಿಯ ಸೊತ್ತಲ್ಲ, ಅದು ಸಾಧಕನ ಸೊತ್ತಾಗಿದೆ. ಪ್ರೌಢ ಶಿಕ್ಷಣ ಪೊರೈಸಿ ಬಂದಿರುವ ವಿದ್ಯಾರ್ಥಿಗಳು ಎರಡು ವರ್ಷಗಳ ಪದವಿ ಪೂರ್ವ ಶಿಕ್ಷಣವನ್ನು ತಪಸ್ಸಿನ ರೀತಿಯಲ್ಲಿ ಸಾಧನೆಯ ಗುರಿಯಿಂದ ಸಾಗಿದರೆ ಉತ್ತಮ ಭವಿಷ್ಯತ್ತು ನಿಮ್ಮದಾಗಲಿದೆ, ಪುರಸಭೆ ಕಾಲೇಜಿಗೆ ತನ್ನದೆ ಆದ ಮಹತ್ವವವಿದ್ದು, ಇಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳುವ ಸಾಮರ್ಥ್ಯ ಧಾರೆ ಎರೆಯುವ ಉಪನ್ಯಾಸಕರಿದ್ದು ಎಲ್ಲ ಸೌಕರ್ಯ ಉಪಯೋಗಿಸಿಕೊಂಡು ಉತ್ತಮ ಸಾಧನೆ ಮಾಡಿ ಎಂದು ಕರೆ ನೀಡಿದರು.

ಉಮಾ ವಿದ್ಯಾಲಯದ ಮುಖ್ಯೋಪಾಧ್ಯಾಯ ಎಸ್.ಎಚ್. ಪೂಜಾರ ಮಾತನಾಡಿ, ಜೀವನದಲ್ಲಿ ಉತ್ತಮ ಭವಿಷ್ಯತ್ತು ರೂಪಿಸಿಕೊಳ್ಳು ಛಲ ನಿಮ್ಮಲ್ಲಿ ಬರಬೇಕು, ಎಲ್ಲವನ್ನು ಎದುರಿಸಿ ಸಾಧನೆ ಮಾಡುವ ಗುಣ ಬೆಳೆದು ಬಂದಲ್ಲಿ ಎಲ್ಲ ಹಾದಿಗಳು ನಿಮಗೆ ಸುಗಮವಾಗುವವು. ಅದರಲ್ಲೂ ಈ ವಯಸ್ಸಿನಲ್ಲಿ ನಿಮ್ಮ ಕರ್ತವ್ಯ ಅರಿತುಕೊಂಡು ಸಾಗುವದು ಅವಶ್ಯವಾಗಿದೆ. ಯುವ ಶಕ್ತಿ ನಮ್ಮ ನಾಡಿನ ಸಂಪತ್ತಾಗಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳುವದು ವಿದ್ಯಾರ್ಥಿಗಳ ಕರ್ತವ್ಯವಾಗಿದೆ. ನಿಮ್ಮ ಭವಿಷ್ಯ ಇನ್ನೂ ಉತ್ತಮವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಸಭೆಯಲ್ಲಿ ಪ್ರಾಚಾರ್ಯ ಅಶೋಕ ಕಳ್ಳಿಮನಿ ಅಧ್ಯಕ್ಷತೆ ವಹಿಸಿದ್ದರು, ಪತ್ರಕರ್ತ ಡಿ.ಎಂ. ಪೂಜಾರ ಮಾತನಾಡಿದರು. ಉಪನ್ಯಾಸಕ ಜಗದೀಶ ದ್ಯಾಮಣ್ಣವರ, ಸೌಂದರ್ಯ ಕುಲಕರ್ಣಿ, ಮಂಜುನಾಥ ಬೂದಿಹಾಳ, ಎಂ.ಎಚ್. ಬೊದ್ಲೆಖಾನ್, ಚೈತ್ರಾ ಪಾಣಿಗಟ್ಟಿ, ನೇತ್ರಾ ಹಿತ್ತಲಮನಿ, ಪಿ.ಡಿ. ದೇಶಪಾಂಡೆ, ಬಿ.ಜೆ. ಪಾಟೀಲ ಹಾಜರಿದ್ದರು. ಎಚ್.ಎಲ್. ಕೋರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಲ್ಪಾ ಮುದಗಲ್ಲ ಪ್ರತಿಜ್ಞಾ ವಿಧಿ ಬೋಧಿಸಿದರು, ಮಂಜುನಾಥ ಬೂದಿಹಾಳ ವಂದಿಸಿದರು, ಎಸ್.ಜಿ. ಹುಳಕನವರ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಪಿಯುಸಿಯಲ್ಲಿ ಶೇ.೯೪.೮೩ ಅಂಕಗಳಿಸಿದ ವಿದ್ಯಾರ್ಥಿ ಲಕ್ಷ್ಮವ್ವ ಹೊನ್ನಪ್ಪನವರ, ಶೇ.೮೮.೫೦ ಅಂಕಗಳಿಸಿದ ತುಕಾರಾಮ ಡಂಬಳ ಅವರನ್ನು ಸನ್ಮಾನಿಸಲಾಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...