ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ವಿದ್ಯಾರ್ಥಿಗಳು ಮೂಲ ವಿಜ್ಞಾನದ ಕಡೆ ಹೆಚ್ಚು ಗಮನಹರಿಸುವುದು ಸೂಕ್ತವೆಂದು ಕ್ಷೇತ್ರಶಿಕ್ಷಣಾಧಿಕಾರಿ ಎಸ್.ನಾಗಭೂಷಣ್ ಅಭಿಪ್ರಾಯಪಟ್ಟರು.ಕರ್ನಾಟಕ ವಿಜ್ಞಾನ ಪರಿಷತ್ತು ವತಿಯಿಂದ ಚಿತ್ರದುರ್ಗದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 31ನೇ ಜಿಲ್ಲಾ ಮಟ್ಟದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಹಾಗೂ ತಾರ್ಕಿಕ ಪ್ರವೃತ್ತಿ, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವಂತೆ ಮಾಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದರು.
ವಿಜ್ಞಾನ ಪರಿಷತ್ತಿನ ರಾಜ್ಯ ಖಜಾಂಚಿ ಎಚ್.ಎಸ್.ಟಿ ಸ್ವಾಮಿ ಮಾತನಾಡಿ, ವಿಜ್ಞಾನ ವಿಷಯವು ಕೇವಲ ಪರೀಕ್ಷೆಗೆ ಹಾಗೂ ಅಂಕಗಳಿಕೆಗೆ ಸೀಮಿತವಾಗದೆ, ತಮ್ಮ ಬದುಕನ್ನು ಕಟ್ಟಿಕೊಳ್ಳುವ ವೈಜ್ಞಾನಿಕ ಚಿಂತನೆಯ ಕಡೆ ವಾಲಬೇಕು ಎಂದರು.ಕರಾವಿಪ ಮಾಜಿ ಉಪಾಧ್ಯಕ್ಷ ಚಳ್ಳಕೆರೆ ಯರಿಸ್ವಾಮಿ ಮಾತನಾಡಿ, ವಿಜ್ಞಾನ ಸಮಾವೇಶಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರ ಮೂಲಕ ತಮ್ಮ ಹಿರಿಮೆ ಮೆರೆಯಲಿ. ಎಂದರು. ಕರಾವಿಪ ಜಿಲ್ಲಾ ಅಧ್ಯಕ್ಷ ಲತೀಫ್ ಸಾಬ್ ಅಧ್ಯಕ್ಷತೆ ವಹಿಸಿದ್ದರು. ಸಿಲಿಕಾನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ರೀ ಡಿ.ಗೋಪಾಲನಾಯಕ, ಮುಖ್ಯ ಶಿಕ್ಷಕ ಕರಿಯಪ್ಪ, ಕರಾವಿಪ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್, ನಿವೃತ್ತ ಪ್ರಾಂಶುಪಾಲ ಈ.ರುದ್ರಮುನಿ, ಹಾಲೇಶ್, ಶ್ರೀನಿವಾಸಮೂರ್ತಿ, ಜಿಲ್ಲಾ ಸಂಯೋಜಕ ಮಂಜುನಾಥ್ ಉಪಸ್ಥಿತರಿದ್ದರು.
ಜಿಲ್ಲೆಯ ವಿವಿಧ ಶಾಲೆಗಳಿಂದ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧ ಮಂಡಿಸಿದರು. ಇದರಲ್ಲಿ ಅತ್ಯುತ್ತಮವಾದ 10 ಸಂಶೋಧನಾ ಪ್ರಬಂಧಗಳು ರಾಜ್ಯ ಮಟ್ಟಕ್ಕೆ ಆಯ್ಕಯಾಗಿವೆ. ರಾಜ್ಯಮಟ್ಟದ ಸಮಾವೇಶವು 2024ರ ಜನವರಿ ಎರಡನೇ ವಾರದಲ್ಲಿ ಕೊಪ್ಪಳದಲ್ಲಿ ನಡೆಯಲಿದೆ.ಗ್ರಾಮೀಣ ಹಿರಿಯರ ವಿಭಾಗದಲ್ಲಿ ಭರಮಸಾಗರದ ಡಿವಿಎಸ್ ಪ್ರೌಢಶಾಲೆಯ ಕೆ.ಎನ್.ಸೃಷ್ಠಿ, ಹಿರಿಯೂರು ತಾಲೂಕು ಭೀಮನಬಂಡೆಯ ಯಜ್ಞವಲ್ಕ ಪಬ್ಲಿಕ್ ಶಾಲೆಯ ಎ.ಮೌಲ್ಯಶ್ರೀ, ಚಳ್ಳಕೆರೆ ತಾಲೂಕಿನ ಇಂದಿರಾಗಾಂಧಿ ವಸತಿ ಶಾಲೆಯ ಆರ್.ಅನುಷ್, ಗ್ರಾಮೀಣ ಕಿರಿಯರ ವಿಭಾಗದಲ್ಲಿ ಚಿತ್ರದುರ್ಗ ತಾಲೂಕಿನ ಚೌಳಿಹಳ್ಳಿ ಸರ್ಕಾರಿ ಪ್ರೌಢಶಾಲೆಯ ತನುಜಾ, ಭರಮಸಾಗರ ಡಿವಿಎಸ್ ಪ್ರೌಢಶಾಲೆಯ ಕೆ.ಎನ್.ಸುಪ್ರಿತಾ, ನಗರ ಹಿರಿಯರ ವಿಭಾಗದಲ್ಲಿ ವಿದ್ಯಾ ವಿಕಾಸ ವಿದ್ಯಾಸಂಸ್ಥೆಯ ಎಸ್.ಎ.ಮೌನಿಸ್, ಎಸ್ಆರ್ ಎಸ್ ಶಾಲೆಯ ಎಂ.ವಿ.ವಿಜಯಲಎಕ್ಷ್ಮಿ, ಚಳ್ಳಕೆರೆ ಎಸ್ ಆರ್ ಎಸ್ ಹೆರಿಟೇಜ್ ಪ್ರೌಢಶಾಲೆಯ ರುಮಾಂಡ್ಲ, ನಗರ ಕಿರಿಯರ ವಿಭಾಗದಲ್ಲಿ ಡಾನ್ ಬೋಸ್ಕೋ ಶಾಲೆಯ ನಿಬೋಧ್ ಹಾಗೂ ಚಳ್ಳಕೆರೆ ಸಹ್ಯಾದ್ರಿ ಪ್ರೌಢಶಾಲೆಯ ದಿಯಾ ಗಂಧವಿಡಿ ಬರೆದ ಸಂಶೋಧನಾ ಪ್ರಬಂಧಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿವೆ.