ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಂದ ದೂರವಿರಿ: ಎಸ್‌ಪಿ ಉಮಾ

KannadaprabhaNewsNetwork |  
Published : Jan 05, 2024, 01:45 AM IST
4ಕೆಡಿವಿಜಿ3, 4, 5-ದಾವಣಗೆರೆಯಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮಾದಕ ದ್ರವ್ಯಗಳ ಮಾರಾಟ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತ ಕಾಲ್ನಡಿಗೆ ಜಾಗೃತಿಗೆ ಜಾಥಾಗೆ ಹಸಿರು ನಿಶಾನೆ ತೋರಿದ ಎಸ್ಪಿ ಉಮಾ ಪ್ರಶಾಂತ. .............4ಕೆಡಿವಿಜಿ6-ದಾವಣಗೆರೆಯಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮಾದಕ ದ್ರವ್ಯಗಳ ಮಾರಾಟ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತ ಕಾಲ್ನಡಿಗೆ ಜಾಗೃತಿ ಜಾಥಾದಲ್ಲಿ ಎಸ್ಪಿ ಉಮಾ ಪ್ರಶಾಂತ, ಎಎಸ್ಪಿಗಳು, ಡಿವೈಎಸ್ಪಿಗಳು, ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.............4ಕೆಡಿವಿಜಿ7-ದಾವಣಗೆರೆಯಲ್ಲಿಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮಾದಕ ದ್ರವ್ಯಗಳ ಮಾರಾಟ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತ ಕಾಲ್ನಡಿಗೆ ಜಾಗೃತಿಗೆ ಜಾಥಾದಲ್ಲಿ ಶ್ರೀ ಜಯದೇವ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿರುವುದು. | Kannada Prabha

ಸಾರಾಂಶ

ಒಬ್ಬರ ನೋಡಿ ಮತ್ತೊಬ್ಬರು ಮಾದಕ ದ್ರವ್ಯ ಸೇವಿಸಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕೆಲವರು ಕುತೂಹಲಕ್ಕೆ, ಅತಿಯಾದ ಸಂತೋಷಕ್ಕೆ, ಯಾವುದೋ ನೋವು ಮರೆಯುವ ನೆಪದಲ್ಲಿ ಇಂತಹ ದುಶ್ಚಟಗಳಿಗೆ ದಾಸರಾಗುವವರೂ ಇದ್ದಾರೆ. ಕ್ಷಣಿಕ ಅಮಲಿನ ಮತ್ತಿಗಾಗಿ ಭವಿಷ್ಯ, ಬದುಕು, ಜೀವನ, ಆರೋಗ್ಯ ಯಾರೂ ಹಾಳು ಮಾಡಿಕೊಳ್ಳಬೇಡಿ.

ಮಾದಕ ದ್ರವ್ಯಗಳ ಸೇವನೆ ದುಷ್ಪರಿಣಾಮ ಕುರಿತ ಕಾಲ್ನಡಿಗೆ ಜಾಗೃತಿ ಜಾಥಾಗೆ ಚಾಲನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾದಕ ವಸ್ತುಗಳು, ಮಾದಕ ದ್ರವ್ಯಗಳು ಇಂದಿನ ವಿದ್ಯಾರ್ಥಿ, ಯುವ ಜನರ ಬದುಕು, ಆರೋಗ್ಯ, ಭವಿಷ್ಯಕ್ಕೂ ಮಾರಕವಾಗಿದ್ದು, ಇವುಗಳ ಬಗ್ಗೆ ಎಚ್ಚೆತ್ತುಕೊಂಡು ದೂರ ಇರಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಕರೆ ನೀಡಿದರು.

ನಗರದ ಡಾ.ಎಂ.ಸಿ.ಮೋದಿ ವೃತ್ತದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಮಾದಕ ದ್ರವ್ಯಗಳ ಮಾರಾಟ ಹಾಗೂ ಮಾದಕ ದ್ರವ್ಯಗಳ ಸೇವನೆಯಿಂದ ಆಗುವ ದುಷ್ಪರಿಣಾಮಗಳ ಕುರಿತ ಕಾಲ್ನಡಿಗೆ ಜಾಗೃತಿಗೆ ಜಾಥಾಗೆ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿ ಆಗಸ್ಟ್‌ ಮತ್ತು ಡಿಸೆಂಬರ್‌ನಲ್ಲಿ ಅಪರಾಧ ತಡೆ ಮಾಸಾಚರಣೆ ವೇಳೆ ಕೆಲ ವಿದ್ಯಾರ್ಥಿಗಳು, ಯುವ ಜನರು ಮಾದಕ ದ್ರವ್ಯಗಳ ವ್ಯಸನಿಗಳಾಗಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಯುವ ಜನರು, ಪಾಲಕರಲ್ಲಿ ಜಾಗೃತಿ ಮೂಡಿಸಲು ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಾದಕ ದ್ರವ್ಯ ಸೇರಿ ದುಶ್ಚಟಗಳಿಂದ ದೂರವಿದ್ದು, ಓದಿನ ಕಡೆಗೆ, ಗುರಿ ಸಾಧನೆಯತ್ತ ಗಮನ ಕೇಂದ್ರೀಕರಿಸಿ ಎಂದು ತಿಳಿಸಿದರು.

ಒಬ್ಬರ ನೋಡಿ ಮತ್ತೊಬ್ಬರು ಮಾದಕ ದ್ರವ್ಯ ಸೇರಿ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಕೆಲವರು ಕುತೂಹಲಕ್ಕೆ, ಅತಿಯಾದ ಸಂತೋಷಕ್ಕೆ, ಯಾವುದೋ ನೋವು ಮರೆಯುವ ನೆಪದಲ್ಲಿ ಇಂತಹ ದುಶ್ಚಟಗಳಿಗೆ ದಾಸರಾಗುವವರೂ ಇದ್ದಾರೆ. ಕ್ಷಣಿಕ ಅಮಲಿನ ಮತ್ತಿಗಾಗಿ ಭವಿಷ್ಯ, ಬದುಕು, ಜೀವನ, ಆರೋಗ್ಯ ಯಾರೂ ಹಾಳು ಮಾಡಿಕೊಳ್ಳಬೇಡಿ. ಯಾರಾದರೂ ಒಮ್ಮೆ ಮಾದಕ ದ್ರವ್ಯಗಳ ವ್ಯಸನಕ್ಕೆ ತುತ್ತಾದರೆ ಮತ್ತೆ ಅದರಿಂದ ಹೊರ ಬರಲು ಕಷ್ಟ ಎಂದು ಸೂಚ್ಯವಾಗಿ ಎಚ್ಚರಿಸಿದರು.

ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯಗಳು, ಪದಾರ್ಥಿಗಳಿಂದ ಆಗುತ್ತಿರುವ ಅನಾಹುತ, ಅಪಾಯ, ಸಂಕಷ್ಟಗಳ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುತ್ತಿದ್ದೇವೆ. ಆದಷ್ಟು ಯುವ ಜನತೆ, ವಿದ್ಯಾರ್ಥಿಗಳು ಮಾದಕ ದ್ರವ್ಯ, ಪದಾರ್ಥ, ವಸ್ತುಗಳಿಂದ ದೂರ ಇರಿ. ಯಾವುದೇ ತರಗತಿಯಲ್ಲಿ ಮಾದಕ ವಸ್ತು ಸೇವಿಸಿದ ವಿದ್ಯಾರ್ಥಿಗಳ ವರ್ತನೆಯಲ್ಲಿ ವ್ಯತ್ಯಾಸ ಕಂಡು ಬಂದರೆ, ತಕ್ಷಣವೇ ಅಂತಹವರ ಬಗ್ಗೆ ಶಾಲಾ-ಕಾಲೇಜಿನವರು ಪೊಲೀಸ್‌ ಇಲಾಖೆ ಗಮನ ಹರಿಸಬೇಕು. ಪಾಲಕರೂ ಇಂತಹ ಸೂಕ್ಷ್ಮ ಬದಲಾವಣೆ ಕಂಡು ಬಂದಾಗ ತಕ್ಷಣ ತಮ್ಮ ಗಮನಕ್ಕೆ ತರಬೇಕು ಎಂದು ಎಸ್ಪಿ ಉಮಾ ಪ್ರಕಾಶ ತಿಳಿಸಿದರು.

ಎಎಸ್ಪಿಗಳಾದ ವಿಜಯಕುಮಾರ ಸಂತೋಷ್‌, ಮಂಜುನಾಥ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕರಿಸಿದ್ದಪ್ಪ, ಡಿಎಆರ್ ಡಿವೈಎಸ್ಪಿ ಪ್ರಕಾಶ್ ಅಧಿಕಾರಿ, ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು. ಡಾ.ಎಂ.ಸಿ.ಮೋದಿ ವೃತ್ತದಿಂದ ಆರಂಭವಾದ ಕಾಲ್ನಡಿಗೆ ಜಾಥಾ ವಿದ್ಯಾರ್ಥಿ ಭವನ, ಅಂಬೇಡ್ಕರ್ ವೃತ್ತ ದ ಮಾರ್ಗವಾಗಿ ಸಾಗಿ ಶ್ರೀ ಜಯದೇವ ವೃತ್ತದಲ್ಲಿ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿ, ಜಾಗೃತಿ ಮೂಡಿಸಿದರು. ನಂತರ ಅಲ್ಲಿಂದ ಹಳೆ ಪಿಬಿ ರಸ್ತೆ ಮಾರ್ಗವಾಗಿ ಹೈಸ್ಕೂಲ್ ಮೈದಾನಕ್ಕೆ ತಲುಪಿದ ಜಾಥಾ ಮುಕ್ತಾಯಗೊಂಡಿತು.

.............

ಮಾದಕ ವಸ್ತು ಸೇವನೆ ಪ್ರಕರಣ ಬಯಲು

ದಾವಣಗೆರೆ ಜಿಲ್ಲೆಯಲ್ಲಿ ಡ್ರಗ್ಸ್‌ ಕೇಸ್‌ಗಳಲ್ಲಿ ಸಿಂಥಟಿಕ್ಸ್ ಡ್ರಗ್ಸ್ ಕಂಡು ಬಂದಿದ್ದು, ಇದರಲ್ಲಿ ಗಾಂಜಾ, ಹೆರಾಯಿನ್‌ ಓಪಿಎನ್ ಹೀಗೆ ನಾನಾ ರೀತಿ ಮಾದಕ ವಸ್ತು, ಪದಾರ್ಥ ಬಳಸುವ, ಇವುಗಳ ಸೇವನೆ ಪ್ರಕರಣ ಬಯಲಾಗುತ್ತಿವೆ. ಇಂತಹ ಅಪಾಯಕಾರಿ ಮಾದಕ ಪದಾರ್ಥಗಳಿಂದ ವಿದ್ಯಾರ್ಥಿಗಳು, ಯುವ ಜನರು ದೂರ ಇರಬೇಕು.

ಉಮಾ ಪ್ರಶಾಂತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ