ಯುವ ಜನರ ಸೂಕ್ತ ನಿರ್ಧಾರದಿಂದ ಜೀವನದಲ್ಲಿ ಯಶಸ್ಸು: ಗೋಪಾಲ್‌ ಯಡಗೆರೆ

KannadaprabhaNewsNetwork |  
Published : Apr 22, 2025, 01:46 AM IST
ನರಸಿಂಹರಾಜಪುರ ತಾಲೂಕು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾ,ಯುವ ಬಳಗದ ನೇತ್ರತ್ವದಲ್ಲಿ ನಡೆದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ಹೊಸನಗರ ಪ್ರೆಂಡ್ಸ್ ತಂಡದ ಆಟಗಾರರು  ಹಾಗೂ ಅತಿಥಿಗಳು ಉಪಸ್ಥಿತರಿದ್ದರು.  | Kannada Prabha

ಸಾರಾಂಶ

ನರಸಿಂಹರಾಜಪುರ, ಯುವಜನರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಜೀವನದಲ್ಲಿ ಯಶಸ್ಸುಗಳಿಸಬಹುದು ಎಂದು ಹಿರಿಯ ಪತ್ರಕರ್ತ ಹಾಗೂ ವಿಪ್ರಧ್ವನಿ ಪ್ರಧಾನ ಸಂಪಾದಕ ಗೋಪಾಲ್ ಎಸ್‌.ಯಡಗೆರೆ ತಿಳಿಸಿದರು.

ಮಲೆನಾಡು ಹೆಬ್ಬಾರ ಬ್ರಾಹ್ಮಣ ಮಹಾ ಸಭಾದ ನೇತೃತ್ವದ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿ ಸಮಾರೋಪ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಯುವಜನರು ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಂಡರೆ ಜೀವನದಲ್ಲಿ ಯಶಸ್ಸುಗಳಿಸಬಹುದು ಎಂದು ಹಿರಿಯ ಪತ್ರಕರ್ತ ಹಾಗೂ ವಿಪ್ರಧ್ವನಿ ಪ್ರಧಾನ ಸಂಪಾದಕ ಗೋಪಾಲ್ ಎಸ್‌.ಯಡಗೆರೆ ತಿಳಿಸಿದರು.

ಭಾನುವಾರ ಕುದುರೆಗುಂಡಿ ಪ್ರೌಢ ಶಾಲಾ ಕ್ರೀಡಾಂಗಣದಲ್ಲಿ ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ತಾಲೂಕು ಘಟಕ ಹಾಗೂ ಯುವ ಬಳಗದ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿದ್ದ ರಾಜ್ಯ ಮಟ್ಟದ 2 ದಿನಗಳ ಯಡಗೆರೆ ದಿ.ಶ್ರೀಪಾದ ಸ್ಮರಣಾರ್ಥ ಹೆಬ್ಬಾರ್‌ ಕ್ರಿಕೆಟ್‌ ಲೀಗ್ ಪಂದ್ಯಾವಳಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಆಧುನಿಕ ಜಗತ್ತು ನಮಗಾಗಿ ಕಾಯುವುದಿಲ್ಲ. ಹೋದ ಕಾಲ ಮತ್ತೆ ಮರಳುವುದಿಲ್ಲ. ಜೀವನದಲ್ಲಿ ಸೋಲು ಎನ್ನುವುದು ಅಲ್ಪ ವಿರಾಮ ಇದ್ದಂತೆ. ನಂತರ ಗೆಲವು ನಮ್ಮದಾಗಲಿದೆ ಎಂದರು.

ಅತಿಥಿಯಾಗಿದ್ದ ಶಿವಮೊಗ್ಗ ಮ್ಯಾಮ್ಕೋಸ್ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ಮಾತನಾಡಿ, ಮ್ಯಾಮ್ಕೋಸ್ ಸಂಸ್ಥೆಯಲ್ಲಿ ಮಲೆನಾಡು ಹೆಬ್ಬಾರ ಸಮಾಜದವರು ಹೆಚ್ಚು ಸಕ್ರಿಯವಾಗಿದ್ದು 3 ಜನ ನಿರ್ದೇಶಕರಿದ್ದಾರೆ. ವಿಶೇಷವಾಗಿ ಮಲೆನಾಡು ಹೆಬ್ಬಾರ ಸಮಾಜದವರು ಹಿಂದಿನಿಂದಲೂ ಕ್ರಿಕೆಟ್‌ ಆಟದಲ್ಲಿ ನಿಸ್ಸೀಮರಾಗಿದ್ದು ರಾಜ್ಯಮಟ್ಟದಲ್ಲೂ ಗುರುತಿಸಿ ಕೊಂಡಿದ್ದರು.ನಮ್ಮ ಸಮಾಜದ ಒಗ್ಗೂಡುವಿಕೆಗೆ ಯುವ ಬಳಗದವರು ಹೆಚ್ಚು ಕಾರ್ಯಶೀಲತೆಯೂ ಕಾರಣವಾಗಿದೆ ಎಂದರು.

ಕೀಳಂಬಿ ಅಗ್ರಿಟೆಕ್ ಮಾಲೀಕ ರಾಜೇಶ್ ಕೀಳಂಬಿ ಮಾತನಾಡಿ,ಕಳೆದ 3 ವರ್ಷದಿಂದಲೂ ಟುವಬಳಗದ ನೇತೃತ್ವದಲ್ಲಿ ರಾಜ್ಯಮಟ್ಟದ ಕ್ರಿಕೆಟ್ ನಡೆಯುತ್ತಿದ್ದು ಇದು ನಿಲ್ಲಬಾರದು. ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು ಎಂದು ಸಲಹೆ ನೀಡಿದರು. ಸಭೆ ಅಧ್ಯಕ್ಷತೆಯನ್ನು ಶೃಂಗೇರಿ ಶಿಷ್ಯ ಮಲೆನಾಡು ಹೆಬ್ಬಾರ ಬ್ರಾಹ್ಮಣ ಸಭಾದ ತಾಲೂಕು ಘಟಕದ ಅಧ್ಯಕ್ಷ ಎ.ವಿ.ಪ್ರಶಾಂತ್ ವಹಿಸಿದ್ದರು. ಸಭೆಯಲ್ಲಿ ಕೊಪ್ಪದ ಯಡಗೆರೆ ಸೌಹಾರ್ದ ಕೆಡ್ರಿಟ್ ಕೋ ಆಪರೇಟೀವ್ ಅಧ್ಯಕ್ಷ ವೈ.ಎಸ್.ಸುಬ್ರಮಣ್ಯ, ಬೆಂಗಳೂರಿನ ಯಶಸ್ವಿನಿ ಮಹಿಳಾ ಕೋ- ಆಪರೇಟಿವ್ ಸೊಸೈಟಿ ನಿರ್ದೇಶಕಿ ರಂಗಮಣಿ ನಾಗರಾಜ್, ಹೆಬ್ಬಾರ ಸಮಾಜದ ಕೇಂದ್ರೀಯ ಆಡಳಿತ ಮಂಡಳಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಚರಣ, ತಾಲೂಕು ಘಟಕದ ಕಾರ್ಯದರ್ಶಿ ಕೆ.ವಿ.ಪ್ರಭಾಕರ್, ಯುವ ಹೆಬ್ಬಾರ ಬಳಗದ ತಾಲೂಕು ಅಧ್ಯಕ್ಷ ವೈ.ಎಂ.ಮಧು ಇದ್ದರು.

ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಹೊಸನಗರ ಪ್ರೆಂಡ್ಸ್ ತಂಡ ಪ್ರಥಮ, ಮುನ್ನೂರ್ ಪಾಲ್ ಮಾಸ್ಟರ್ ತಂಡ ದ್ವಿತೀಯ ಬಹುಮಾನ ಪಡೆಯಿತು. ಬೆಸ್ಟ್ ಬ್ಯಾಟ್ಸಮನ್ ಆಗಿ ಹೊಸನಗರ ತಂಡದ ನಿಕಿಲ್, ಬೆಸ್ಟ್ ಬೌಲರ್ ಆಗಿ ಹೊಸ ನಗರ ತಂಡ ಗಿರೀಶ್ ಹಾಗೂ ಬೆಸ್ಟ್ ಪೀಲ್ಡರ್ ಆಗಿ ಎನ್‌.ಆರ್‌.ಪುರ ತಂಡದ ಸುಭಾಶ್ ಪಡೆದು ಕೊಂಡರು. ಎ.ಎಸ್.ವೆಂಕಟರಮಣ ಕಾರ್ಯಕ್ರಮ ನಿರೂಪಿಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ